ಹುಳಿಯಾರು:ಪೋಷಕರುಗಳು ಐದು ವರ್ಷದ ಒಳಗಿನ ತಮ್ಮ ಮಕ್ಕಳನ್ನು ಕರೆತಂದು ತಪ್ಪದೆ ಪೋಲಿಯೊ ಲಸಿಕೆಯನ್ನು ಹಾಕಿಸುವಂತೆ ಗ್ರಾಮಪಂಚಾಯ್ತಿ ಅಧ್ಯಕ್ಷೆ ಗೀತಾ ಮನವಿ ಮಾಡಿದರು. ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರದಂದು ಆರೊಗ್ಯ ಇಲಾಖೆ ಹಾಗೂ ರೋಟರಿ ಸಂಸ್ಥೆ ಹಮ್ಮಿಕೊಂಡಿದ್ದ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪೋಲಿಯೋ ಒಂದು ಮಾರಕ ರೋಗವಾಗಿದ್ದು ಈಗಾಗಲೆ ನಿರ್ಮೂಲನೆಗೊಂಡಿದೆ ಎನ್ನಲಾಗಿದೆಯಾದರೂ ಪೋಷಕರು ಮಕ್ಕಳಿಗೆ ಕಾಲ ಕಾಲಕ್ಕೆ ಸರಿಯಾಗಿ ಪೋಲಿಯೊ ಲಸಿಕೆ ಹಾಕಿಸುವಂತೆ ತಿಳಿಸಿದರು.
ಹುಳಿಯಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರದಂದು ಗ್ರಾಪಂ ಅಧ್ಯಕ್ಷೆ ಗೀತಾ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ವೈದ್ಯಾಧಿಕಾರಿ ಡಾ.ಸದಾಶಿವಯ್ಯ,ಡಾ.ಶೋಭಾ,ಡಾ.ಚಂದನ ,ರೋಟರಿ ಕಾರ್ಯದರ್ಶಿ ರವೀಶ್ ಮತ್ತಿತರರಿದ್ದರು. |
ರೋಟರಿ ಅಧ್ಯಕ್ಷ ಮಂಜುನಾಥ್ ಗುಪ್ತಾ ಮಾತನಾಡಿ ಪೋಲಿಯೋ ಲಸಿಕೆ ಹಾಕಿಸುವ ಕುರಿತಂತೆ ಪೋಷಕರುಗಳಲ್ಲಿ ಮಕ್ಕಳ ಜಾಥಾಮೂಲಕ ಅರಿವು ಮೂಡಿಸಲಾಗಿದ್ದು ಎಲ್ಲಾ ಮಕ್ಕಳಿಗೂ ತಪ್ಪದೆ ಪೋಲಿಯೊ ಲಸಿಕೆ ಹಾಕಿಸಬೇಕೆಂಬ ಇರಾದೆಯಿಂದ ಪಟ್ಟಣ ವ್ಯಾಪ್ತಿಯಲ್ಲಿ ಐದು ಘಟಕಗಳನ್ನು ತೆರೆಯಲಾಗಿದೆ ಎಂದರು.
ಸಮಾರಂಭದಲ್ಲಿ ವೈದ್ಯಾಧಿಕಾರಿ ಡಾ.ಸದಾಶಿವಯ್ಯ,ಡಾ.ಶೋಭಾ,ಡಾ.ಚಂದನ ,ರೋಟರಿ ಕಾರ್ಯದರ್ಶಿ ರವೀಶ್,ದುರ್ಗರಾಜು,ಸುದರ್ಶನಚಾರ್ ಮತ್ತಿತರರಿದ್ದರು.
----------
ಪೋಲಿಯೋ ಯಶಸ್ವಿ:ಹುಳಿಯಾರಿನ ರೋಟರಿ ಸಂಸ್ಥೆಯ ಸಹಯೋಗದಲ್ಲಿ ವಿವಿಧೆಡೆ ಪೋಲಿಯೊ ಬೂತ್ ಗಳನ್ನು ತೆರೆಯಲಾಗಿತ್ತು. ಬೆಳೆಗ್ಗಿನಿಂದಲೇ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಪೋಲಿಯೊ ಹನಿ ಹಾಕಿಸುತ್ತಿರುವುದು ಕಂಡುಬಂದಿತು.
ಪಟ್ಟಣದ ಬಸ್ ನಿಲ್ದಾಣ,ಬಸವೇಶ್ವರ ನಗರದಲ್ಲಿ ಅಂಗನವಾಡಿ ಕೇಂದ್ರ,ಆಂಜನೇಯ ಸ್ವಾಮಿ ದೇವಾಲಯದ,ಲಿಂಗಪ್ಪನ ಪಾಳ್ಯ್ದ ರಾಮದೇವರ ದೇವಾಲಯ,ಆಸ್ಪತ್ರೆಯಲ್ಲಿ ಬೂತ್ ಗಳನ್ನು ತೆರೆಯಲಾಗಿತ್ತು.ಬೆಳೆಗ್ಗಿನಿಂದಲೇ ಪೋಲಿಯೊ ಹನಿ ಹಾಕುವ ಕಾರ್ಯದಲ್ಲಿ ಆಶಾ ಕಾರ್ಯಕರ್ತರು ತೊಡಗಿದ್ದರು.ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿಯೂ ಸಂಜೆಯವರೆಗೂ ಪಲ್ ಪೋಲಿಯೊ ಹಾಕುತ್ತಿದ್ದು ಕಂಡುಬಂದಿತು.ಸಂಜೆಯವರೆಗೂ ಪೋಲಿಯೋ ಹನಿ ಹಾಕಿಸುವ ಕಾರ್ಯಕ್ರಮ ನಡೆದಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ