ಬೋರನಕಣಿವೆಯ ಸುವರ್ಣ ವಿದ್ಯಾ ಚೇತನ, ಬೆಂಗಳೂರಿನ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ, ಚಿಕ್ಕನಾಯಕನಹಳ್ಳಿ ಸೃಜನ ತಾಲ್ಲೂಕು ವಿಜ್ಞಾನ ಕೇಂದ್ರ, ಸರ್ಕಾರಿ ಪದವಿ ಪೂರ್ವಕಾಲೇಜು ಪ್ರೌಢಶಾಲಾ ವಿಭಾಗ ಹಾಗೂ ಐ.ಟಿ.ಐ. ವಿಭಾಗ, ಬೋರನಕಣಿವೆ ಇವರ ಸಂಯುಕ್ತಾಶ್ರಯದಲ್ಲಿ ಜನವರಿ ೨೩ ಮತ್ತು ೨೪ ರಂದು ಸರ್ಕಾರಿ ಶಾಲಾ ಕಾಲೇಜು ಉಳಿಸಿ ಅಭಿಯಾನದ ಅಂಗವಾಗಿ ಹುಳಿಯಾರು ಹೋಬಳಿ ಬೋರನ ಕಣಿವೆಯಲ್ಲಿ ಶೈಕ್ಷಣಿಕ ಸಮಾವೇಶ ಹಾಗೂ ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ಏರ್ಪಡಿಸಲಾಗಿದೆ.
ಜ.೨೩ ರಂದು ೧೦.೩೦ ಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೆಚ್.ಎನ್. ಗೋಪಾಲಕೃಷ್ಣ ಅವರು ಶೈಕ್ಷಣಿಕ ಸಮಾವೇಶ ಉದ್ಘಾಟಿಸಲಿದ್ದು ಬೋರನಕಣಿವೆಯ ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯರಾದ ಬಿ.ಎನ್.ಉಮಾ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಚಿ.ನಾ. ಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ ತಿಮ್ಮರಾಯಪ್ಪ, ಉಪಾಧ್ಯಕ್ಷರಾದ ಜಯಲಿಂಗರಾಜು, ಪ್ರೌಢವಿಭಾಗ ಹಿರಿಯ ಸಹ ಶಿಕ್ಷಕರಾದ ಎಂ. ಮೈಲಾರಯ್ಯ, ಐ.ಟಿ.ಐ. ಉಪನ್ಯಾಸಕರಾದ ಎನ್. ಕೃಷ್ಣಪ್ಪ ಆಗಮಿಸುವರು.
ಶಿಕ್ಷಣ ಹಾಗೂ ಸಂವಿಧಾನದ ಆಶ್ವಾಸನೆ ಕುರಿತು ಕರ್ನಾಟಕ ಜನಶಕ್ತಿಯ ಬೆಂಗಳೂರಿನ ಡಾ.ವಾಸು, ಶಿಕ್ಷಕರಿಗೆ ಸದಾ ಸ್ಪೂರ್ತಿ ಸಾವಿತ್ರಿಬಾಯಿ ಫುಲೆ ಕುರಿತು ಮಹಿಳಾ ಮುನ್ನಡೆಯ ಮಂಡ್ಯ ಮಲ್ಲಿಗೆ, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಮುದಾಯದ ಸಹಬಾಗಿತ್ವ ಕುರಿತು ತಾಲ್ಲೂಕು ವಿಜ್ಞಾನ ಕೇಂದ್ರದ ಎನ್.ಇಂದಿರಮ್ಮ, ಸರ್ಕಾರಿ ಶಾಲೆಗಳ ಸಬಲೀಕರಣದಲ್ಲಿ ಶಿಕ್ಷಕರ ಪಾತ್ರ ಕುರಿತು ಪ್ರಗತಿಪರ ಸಾಹಿತಿಗಳಾದ ಬಿಳಿಗೆರೆ ಕೃಷ್ಣಮೂರ್ತಿ ಅವರು ವಿಷಯ ಮಂಡನೆ ಮಾಡಲಿದ್ದಾರೆ.
ಜ.೨೪ ರಂದು ಹಿರಿಯ ವಿದ್ಯಾರ್ಥಿಗಳು, ಶಿಕ್ಷಣಾಸಕ್ತರ ಮತ್ತು ಎಸ್ .ಡಿ.ಎಂ.ಸಿ ಸದಸ್ಯರ ಸಮಾವೇಶ ನಡೆಯಲಿದ್ದು, ಶಿಕ್ಷಕ ಬಡೇನಹಳ್ಳಿ ಟಿ.ಗೋವಿಂದಯ್ಯ ಉದ್ಘಾಟಿಸುವರು. ನಿವೃತ್ತ ಶಿಕ್ಷಕ ವದ್ದಿಗಯ್ಯ ಅಧ್ಯಕ್ಷತೆ ವಹಿಸುವರು. ವಿಶೇಷ ಉಪನ್ಯಾಸವನ್ನು ಬೋರನಕಣಿವೆ ಸುವರ್ಣ ವಿದ್ಯಾಚೇತನ ಅಧ್ಯಕ್ಷರಾದ ರಾಮಕೃಷ್ಣಪ್ಪ, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಂಚಾಲಕರಾದ ಶ್ರೀಪಾದಭಟ್, ಉಪನ್ಯಾಸಕರಾದ ಕೆ.ಎಂ.ವಾಸು ಅವರು ಮಾತನಾಡುವರು. ರಾಮದಾಸಪ್ಪ, ಟಿ.ಜಯಣ್ಣ, ಎಸ್.ಮಂಜಮ್ಮ, ಜಿ.ಕೆಂಗಯ್ಯ, ವೀರನಾಗಯ್ಯ, ಹೆಚ್. ಸಣ್ಣರಂಗಯ್ಯ, ಟಿ.ಆರ್. ಶ್ರೀನಿವಾಸಶಟ್ಟಿ, ಕೆರೆ ಹನುಮಂತಯ್ಯ ಆಗಮಿಸುವರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ