ಚಿತ್ರದುರ್ಗ ಜಿಲ್ಲಾಧಿಕಾರಿಗಳ ತಾಯಿ ನಿಧನ:ಅಂತ್ಯಸಂಸ್ಕಾರದ ವೇಳೆ ಹೆಜ್ಜೇನು ದಾಳಿ
---------------
ಚಿತ್ರದುರ್ಗ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯನವರ ತಾಯಿ ಶ್ರೀಮತಿ ಕರಿಯಮ್ಮ(೭೫) ಶನಿವಾರ ರಾತ್ರಿ ನಿಧನರಾಗಿದ್ಪ್ದು ಭಾನುವಾರ ಮಧ್ಯಾಹ್ನ ಅವರ ತೋಟದಲ್ಲಿ ಅಂತ್ಯಸಂಸ್ಕಾರ ನೆರವೇರಿತು.ಕಳೆದ ಹತ್ತುದಿನಗಳಿಂದ ಉಸಿರಾಟದ ತೊಂದರೆಯಿಂದಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹುಳಿಯಾರು ಹೋಬಳಿಯ ಹೆಚ್.ಮೇಲನಹಳ್ಳಿಯವರಾದ ಕರಿಯಮ್ಮನವರ ಅಂತ್ಯಸಂಸ್ಕಾರ ಅವರ ತೋಟದಲ್ಲಿ ಪುತ್ರ ಜಿಲ್ಲಾಧಿಕಾರಿ ಶ್ರೀರಂಗಯ್ಯನವರು ನೆರವೇರಿಸಿದರು.ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ,ಹಿರಿಯೂರು ಶಾಸಕ ಸುಧಾಕರ್,ಹೊಸದುರ್ಗ ಶಾಸಕ ಗೋವಿಂದಪ್ಪ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಬಂಧುಬಳಗದವರು ಮೃತರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ಹೆಜ್ಜೇನು ದಾಳಿ: ಅಂತ್ಯಸಂಸ್ಕಾರಕ್ಕೆ ಮೃತದೇಹ ಕೊಂಡೊಯ್ಯುವ ವೇಳೆ ನಡೆದ ಹೆಜ್ಜೇನುದಾಳಿಯಿಂದ ಜನ ಪರದಾಡುವಂತಾಯಿತು.ತೆಂಗಿನಮರದಲ್ಲಿದ್ದ ನೂರಾರು ಹೆಜ್ಜೇನುಗಳು ಉದುಕಡ್ಡಿ ಹೊಗೆಯಿಂದ ಕೆರಳಿ ದಾಳಿ ನಡೆಸಿದ್ದರಿಂದ ಜನ ದಿಕ್ಕಾಪಾಲಾಗಿ ಓಡುವಂತಾಯಿತು.ಹದಿನೈದಿಪ್ಪತ್ತು ಜನಕ್ಕೆ ಹೆಜ್ಜೇನು ಕಚ್ಚಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಲಾಯಿತು.ಕೆಲ ಸಮಯದ ನಂತರ ಯಾವುದೇ ಸಮಸ್ಯೆಯಿಲ್ಲದೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ