ಹುಳಿಯಾರು:ಇಲ್ಲಿನ ಗಾಂಧೀಪೇಟೆಯಲ್ಲಿರುವ ಪ್ರಸಿದ್ದ ಶ್ರೀಅಯ್ಯಪ್ಪನ ಸನ್ನಿಧಿಯಲ್ಲಿ ಜ್ಯೋತಿಯಂದು ಮಧ್ಯಾಹ್ನ ಗರುಡಪಕ್ಷಿಯು ದರ್ಶನ ನೀಡಿದ್ದು, ಅಯ್ಯಪ್ಪನ ಭಕ್ತರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.ಕಳೆದ ೭ ವರ್ಷದಿಂದ ಜ್ಯೋತಿಯ ದಿನ ಇಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಗರುಡ ದರ್ಶನ ನೀಡುವಂತೆ ಈ ವರ್ಷವೂ ಸಹ ಜನವರಿ 14 ರ ಗುರುವಾರ ಮಧ್ಯಾಹ್ನ ೧೨ಗಂಟೆಗೆ ದರ್ಶನ ನೀಡಿ ನೆರೆದಿದ್ದ ಭಕ್ತ ಸಮೂಹವನ್ನು ವಿಸ್ಮಯಕ್ಕೀಡೂಮಾಡಿತು.
ಹುಳಿಯಾರು ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿ |
ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯ ಒಡವೆಯನ್ನು ಕಾಲ್ನಡಿಗೆಯ ಮೂಲಕ ಹೊತ್ತು ತರುವಾಗ ವಿಸ್ಮಯ ರೀತಿಯಲ್ಲಿ ಗರುಡವೊಂದು ಪ್ರತ್ಯಕ್ಷವಾಗಿ ದಾರಿಯುದ್ದಕ್ಕೂ ಆ ಒಡವೆಗಳಿಗೆ ಕಾವಲಾಗುತ್ತದೆ. ಅಂತೆಯೇ ಇಲ್ಲಿನ ಅಯ್ಯಪ್ಪ ಗುಡಿಯಲ್ಲಿಯೂ ಸಹ ಶಬರಿಮಲೆಯಲ್ಲಿ ಪ್ರತ್ಯಕ್ಷವಾಗುವ ದಿನ ತಪ್ಪದೆ ಗರುಡವೊಂದು ದೇವಸ್ಥಾನ ಮೇಲೆ ಗೋಚರಿಸಿ ಮಾಯವಾಗುವ ಮೂಲಕ ಭಕ್ತರಿಗೆ ಕುತೂಹಲ ಮೂಡಿಸುತ್ತಿದೆ.
ಗರುಡ ದರ್ಶನ ಕಳೆದ ಏಳು ವರ್ಷಗಳಿಂದ ಚಾಚುತಪ್ಪದೆ ನಡೆಯುತ್ತಿದ್ದು ಇದನ್ನು ನೋಡಲು ಭಕ್ತರು ದೇವಸ್ಥಾನದ ಬಳಿ ಜಮಾಯಿಸಿ ಈ ವರ್ಷವೂ ಸಹ ಗರುಡ ದರ್ಶನ ಪಡೆದು ಪುನೀತರಾದರು. ಭಕ್ತಿಭಾವದಿಂದ ಗರುಡನೆಡೆಗೆ ಕೈ ಮುಗಿದು ನಮಿಸಿ, 'ಸ್ವಾಮಿಯೇ ಶರಣಂ ಅಯ್ಯಪ್ಪ' ಎಂದು ಮುಗಿಲು ಮುಟ್ಟುವ ಘೋಷಣೆ ಕೂಗಿ ಸಂಭ್ರಮಿಸಿದರು.
ಗುರುಸ್ವಾಮಿಗಳಾದಬಿ.ಗೋಪಾಲ್,ಕುಮಾರಸ್ವಾಮಿ,ನಾಗಭೂಷಣ್,ಗಣೇಶ್ ,ಎ.ಡಿ.ಸುದರ್ಶನ್,
ಬಾಬು ಮುಂತಾದವರು ಕೌತುಕದ ಘಟನೆಗೆ ಸಾಕ್ಷಿಕರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ