ಹುಳಿಯಾರು:ಪಟ್ಟಣದ ಪ್ರಜಪಿತಾ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಈಶ್ವರೀಸ್‌ಸಂಸ್ಥಾಪಕರು ದೇಹ ತ್ಯಜಿಸಿದ ದಿನವನ್ನು ಸ್ಮೃತಿ ದಿನಾಚರಣೆಯಾಗಿ ಆಚರಿಸಲಾಯಿತು.
ಆಧ್ಯಾತ್ಮ ಶಿಕ್ಷಕಿ ಗೀತಕ್ಕ ಮಾತನಾಡಿ ಈಶ್ವರಿಯಾ ವಿಶ್ವವಿದ್ಯಾಲಯ ೧೯೩೬ ನೇ ಇಸವಿಯಲ್ಲಿ ಕರಾಚಿಯಲ್ಲಿ ಸ್ಥಾಪನೆಗೊಂಡು ಈಗ ೧೪೦ ದೇಶಗಳಲ್ಲಿ ಸಾವಿರಾರು ಸೇವಾಕೇಂದ್ರಗಳನ್ನು ತೆರೆದು ಲಕ್ಷಾಂತರ ಜನರಿಗೆ ಉಚಿತವಾಗಿ ಆಧ್ಯಾತ್ಮಿಕವಾಗಿ ಶಿಕ್ಷಣ, ನೈತಿಕ ಮೌಲ್ಯ ಶಿಕ್ಷಣವನ್ನು ಬೋಧಿಸುತ್ತ ಬಂದಿದೆ. ಇದಕ್ಕೆ ಕಾರ್ಯಾತೀತರಾದ ದಾದಾಲೇಖರವರು ೧೯೩೬ ರಿಂದ ೧೯೬೯ ರವರೆಗೆ ಇದರಲ್ಲಿ ಸೇವೆ ಸಲ್ಲಿಸುತ್ತಾ ೧೯೬೯ ಜನವರಿ ೧೮ ರಂದು ತಮ್ಮ ಶರೀರವನ್ನು ತ್ಯಜಿಸಿದರು. ಆ ದಿನದ ಸ್ಮರಣಾರ್ಥವಾಗಿ ಈ. ವಿ. ವಿ. ಸೇವಾಕೇಂದ್ರದಲ್ಲಿ ಲಕ್ಷಾಂತರ ಪರಿವಾರದವರು ಈ ದಿನವನ್ನು ಬ್ರಹ್ಮ ಸ್ಮೃತಿ ದಿವಸವೆಂದು ಅಚರಣೆ ಮಾಡುತ್ತಾ ಬಂದಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಟಿ.ಎಸ್. ರಾಮನಾಥ್ ,ವಿಜಯಮ್ಮ,ಜಿ.ಪಂ. ಮಾಜಿ ಸದಸ್ಯೆ ಲಕ್ಷ್ಮೀಅಂದಾನಪ್ಪ, ಲಕ್ಷ್ಮೀ ರಾಜು,ನಿವೃತ್ತ ಶಿಕ್ಷಕ ತಿಮ್ಮಯ್ಯ, ಸುದರ್ಶನಾಚಾರ್ ಮತ್ತಿತರರು ಇದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ