ಹಂದನಕೆರೆ ಹೋಬಳಿ ಮಾದಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ವಜ್ರ ಮಹೋತ್ಸವವು ಇತ್ತೀಚೆಗೆ ಜರುಗಿತು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ಸರ್ಕಾರ ಸರ್ಕಾರಿ ಶಾಲೆಗಳಿಗೆ ಅನೇಕ ಸೌಲಭ್ಯ ಕೊಡುತ್ತಿದೆ. ಕೊಠಡಿಗಳು, ಶೌಚಾಲಯ, ನೀರಿನ ಸೌಲಭ್ಯ, ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಸಮವಸ್ತ್ರ ಸೇರಿದಂತೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗಿದೆ. ನಾವೆಲ್ಲರೂ ಇದರ ಸದ್ಬಳಕೆ ಮಾಡಿಕೊಂಡು ಮಗುವಿನ ಶೈಕ್ಷಣಿಕ ಪ್ರಗತಿಗಾಗಿ ಮುಂದಾಗಬೇಕಿದೆ ಎಂದರು.
ಮಕ್ಕಳ ಕಲಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಶಿಕ್ಷಕರಿಗೆ ನೀಡದೆ ಪೋಷಕರು ಕಾಳಜಿ ವಹಿಸಬೇಕು. ಶಾಲೆಗೆ ಆಗಾಗ ಭೇಟಿ ನೀಡಿ ಮ ಕ್ಕಳ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಬೇಕು. ಮಕ್ಕಳು ಓದುವ ಸಂದ‘ರ್ದಲ್ಲಿ ಪೋಷಕರು ಟಿವಿ ನೋಡುವುದ ಬಿಟ್ಟು ನೆರವಾಗಬೇಕು. ಶಾಲಾಭಿವೃದ್ಧಿ ಸಮಿತಿಯವರು ಶಾಲೆಯ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು. ದಾನಿಗಳ ಸಹಕಾರ ಪಡೆದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಕಾರ್ಯಕ್ರಮಗಳನ್ನು ಸಂಘಟಿಸಬೇಕು ಎಂದು ಹೇಳಿದರು.
ತಾಲ್ಲೂಕು ಕರಾಪ್ರಾಶಾಶಿ ಸಂಘದ ಅಧ್ಯಕ್ಷರಾದ ಎಚ್.ಎಸ್.ಪ್ರಕಾಶ್ ಮಾತನಾಡಿ ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳೊಂದಿಗೆ ಸಂಪರ್ಕವಿಟ್ಟುಕೊಳ್ಳಬೇಕು. ಸರ್ಕಾರಿ ಶಾಲಾ ಶಿಕ್ಷಕರು ಸಿಇಟಿ ಬರೆದು ಬಂದಿರುತ್ತಾರೆ. ಅವರ ಬೋಧನಾ ಸಾಮರ್ಥ್ಯ ಗುಣಮಟ್ಟದಿಂದಿರುತ್ತದೆ. ಹಾಗಾಗಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಒಳ್ಳೆ ಶಿಕ್ಷಣ ಸಿಗುತ್ತದೆ. ಪೋಷಕರು ಖಾಸಗಿ ಶಾಲೆಯ ವ್ಯಾಮೋಹಕ್ಕೆ ಒಳಗಾಗದೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಿ ಎಂದರು.
ಮತಿಘಟ್ಟ ಗ್ರಾ.ಪಂ. ಅಧ್ಯಕ್ಷರಾದ ವಿಮಲಾ ಈರಪ್ಪನವರು ಅಧ್ಯಕ್ಷತೆ ವಹಿಸಿದ್ದರು, ಹಂದನಕೆರೆ ಜಿ.ಪಂ ಸದಸ್ಯರಾದ ಜಾನಮ್ಮ, ಗ್ರಾ.ಪಂ ಉಪಾಧ್ಯಕ್ಷರಾದ ಶೈಲಾ, ಪಿಡಿಓ ದಶರಥ್ ಕುಮಾರ್, ಕರಾಪ್ರಾಶಾಶಿ ಸಂಘದ ಈಶ್ವರಪ್ಪ, ಎಂ. ಈಶ್ವರಯ್ಯ, ಲೋಕೇಶ್, ಸೋಮಶೇಖರ್, ಬಿಆರ್‌ಪಿ ವಿರೂಪಾಕ್ಷಪ್ಪ, ಸಿಆರ್‌ಪಿ ಮಮತಾ, ಶಾಲಾಭಿವೃದ್ಧಿ ಸಮಿತಿಯ ಸೋಮಶೇಖರ್, ವಸಂತ್‌ಕುಮಾರಿ, ನಾಗರಾಜು, ಪದ್ಮ, ಡ್ಯಾನ್ಸ್ ಮಾಸ್ಟರ್ ಬೇಲೂರು ಚಂದ್ರು , ಮಾದಾಪುರ ಓಂಕಾರ ಮೂರ್ತಿ, ಅಶೋಕ್ ಶಿಕ್ಷಕರುಗಳಾದ ಎಚ್.ಆರ್. ಸೋಮಶೇಖರ್, ದುರ್ಗಪ್ಪ, ಮೀನಾಕುಮಾರಿ, ಕಮಲಮ್ಮ, ಸುಶೀಲಮ್ಮ, ಸುರೇಶ್, ಮಹೇಶ್, ಗಾಯಿತ್ರಮ್ಮ, ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ