-------------
ಹುಳಿಯಾರು : ಪಟ್ಟಣ ಸೇರಿದಂತೆ ಹೋಬಳಿವ್ಯಾಪ್ತಿಯಲ್ಲಿ ಬುಧವಾರ ಮುಂಜಾನೆ ಸೊನೆ ಮಳೆಯಾಗಿದೆ .ಮಂಗಳವಾರದಿಂದಲೂ ಮೋಡದ ವಾತವರಣ ಕಂಡುಬಂದಿದ್ದು ಶೀತದ ವಾತಾವರಣ ನಿರ್ಮಾಣವಾಗಿ ಚಳಿ ಇಲ್ಲದಂತಾಗಿದೆ.
ಹೋಬಳಿಯ ವಿವಿಧೆಡೆ ರೈತರು ರಾಗಿ,ಹುರುಳಿ,ಹುಚ್ಚೇಳು,ಅವರೆ ,ಜೋಳ ಕಟಾವು ಮಾಡಿದ್ದು ಅದರ ತರೆಗೆಲೆ ದನ ಕುರಿಗೆ ಮೇವಾಗುತ್ತಿದ್ದು ಮಳೆಯೀದಾಗಿ ಕೂಳೆ ಮೇವಿಗೆ ಗೆದ್ದಲು ಬೀಳುವ ಸಂಭವವಿದೆ.ರಾಗಿ ಒಕ್ಕಣೆ ಮಾಡುವ ಸಮಯದಲ್ಲಿ ಸೋನೆಮಳೆಯಾಗಿದ್ದು ಮತ್ತೆ ರಾಗಿ ಕಪ್ಪಾಗುವುದೆಂಬ ರೈತರಿಗೆ ಆತಂಕ ಉಂಟುಮಾಡಿದೆ.
ಕಿತ್ತಿದ್ದು ಅದನ್ನು ಒಣಗಿಸಲು ಮುಂದಾಗಿದ್ದರಾದರೂ ಬಿಸಿಲಿಲ್ಲದ ಕಾರಣ ಕೈಕಟ್ಟಿಕೂರುವಂತಾಗಿ, ಹೀಗಾದರೆ ಹೆಸರನ್ನು ಯಾವರೀತಿ ಒಕ್ಕಣೆ ಮಾಡುವುದು, ಸೊನೆ ಮಳೆ ಅವರೆಕಾಯಿಗೆ ಅನುಕೂಲವಾದರೆ ದಾಳಿಂಬೆ ಬೆಳೆಗೆ ವೈರಸ್ ರೋಗಕ್ಕೆ ದಾರಿ ಮಾಡಕೊಡಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ