ಹುಳಿಯಾರು ಹೋಬಳಿಯ ತಾಲ್ಲೂಕು ಹೊಯ್ಸಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಲಕ್ಕೇನಹಳ್ಳಿ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಿ ಎಂದು ಮುಖಂಡ ಲ.ಪು.ಕರಿಯಪ್ಪ ಒತ್ತಾಯಿಸಿದ್ದಾರೆ.
ಲಕ್ಕೇನಹಳ್ಳಿ ಗ್ರಾಮದ ಹೊಸೂರು ಬಡಾವಣೆಯಲ್ಲಿ ಸಾಕಷ್ಟು ತಿಂಗಳುಗಳಿಂದ ರಸ್ತೆ ಹದಗೆಟ್ಟಿದ್ದು, ಟ್ಯಾಂಕ್‌ನಿಂದ ಹರಿದು ಬರುವ ಕಲುಷಿತ ನೀರು ರಸ್ತೆಯಲ್ಲಿ ನಿಂತಿದ್ದು, ಆಳವಾದ ಗುಂಡಿಗಳು ಬಿದ್ದಿವೆ. ಪ್ರತಿನಿತ್ಯ ಟ್ಯಾಂಕರ್ ಇತ್ಯಾದಿ ವಾಹನಗಳು ಓಡಾಡುತ್ತಿದ್ದು, ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಜನ, ಜಾನುವಾರುಗಳು ಓಡಾಡಲೂ ತುಂಬಾ ತೊಂದರೆಯಾಗಿದೆ. ಗ್ರಾಮದಲ್ಲಿ ಒಳ ಚರಂಡಿ ವ್ಯವಸ್ಥೆ ಮಾಡಿಸಿದರೆ ಸಮಸ್ಯೆ ಬಗೆಹರಿಯಲಿದ್ದು ಸಂಬಂಧಿಸಿದವರು ಇತ್ತ ಗಮನಹರಿಸಬೇಕಿದೆ .
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ