ಇಂದಿನಿಂದ ಆರುಗಂಟೆಗಳ ಕಾಲ ವಿದ್ಯುತ್ ಜಾರಿ
----------------------------
ಹುಳಿಯಾರು ಹೋಬಳಿಯ ದಸೂಡಿಯಲ್ಲಿ ಕಳೆದ ತಿಂಗಳು ನಡೆದ ಪ್ರತಿಭಟನಾ ಸಂದರ್ಭದಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು ನೀಡಿದ್ದ ಭರವಸೆಯಂತೆ ಶುಕ್ರವಾರದಿಂದ ಜಾರಿಗೆ ಬರುವಂತೆ ಹಗಲಿನ ವೇಳೆ ಒಂದು ಗಂಟೆ ಕಾಲ ವಿದ್ಯುತ್ ಸಮಯವನ್ನು ಹೆಚ್ಚಳಮಾಡಲಾಗಿದೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಗ್ರಾಪಂ ಅಧ್ಯಕ್ಷ ದಬ್ಬಗುಂಟೆ ರವಿಕುಮಾರ್ ಗ್ರಾಮಾಂತರ ಪ್ರದೇಶದಲ್ಲಿ ಲೋಡ್ ಶೆಡ್ಡಿಂಗ್ ನೆಪದಲ್ಲಿ ಹಿಂದಿನಿಂದಲೂ ಪ್ರತಿದಿನ ಹಗಲಿನಲ್ಲಿ ಒಂದು ಗಂಟೆ ಹಾಗೂ ರಾತ್ರಿ ವೇಳೆಯಲ್ಲಿ ಮೂರುಗಂಟೆ ಕಾಲ ವಿದ್ಯುತ್ ನೀಡುತ್ತಿದ್ದರು.ರಾತ್ರಿಯ ಅವೇಳೆಯಲ್ಲಿ ಜಮೀನಿಗೆ ನೀರು ಕಟ್ಟುವ ಪರಿಸ್ಥಿತಿಯಿಂದ ಬೇಸತ್ತ ರೈತರು ಹಾಗೂ ಗ್ರಾಮಸ್ಥರು ಪ್ರತಿಭಟಿಸಿದ್ದರಿಂದ ಎಚ್ಚತ್ತ ಇಲಾಖೆಯವರು ಇಂದಿನಿಂದ ಹಗಲು ಹೊತ್ತು ಎರಡು ಗಂಟೆ ಹಾಗೂ ಸಂಜೆ ನಾಲ್ಕು ಗಂಟೆಗಳ ಕಾಲ ಒಟ್ಟು ಆರು ಗಂಟೆಗಳ ಕಾಲ ವಿದ್ಯುತ್ ಜಾರಿಮಾಡಿದ್ದಾರೆ ಎಂದರು.
ಗ್ರಾಮೀಣ ಭಾಗದ ಜನರ ಸಮಸ್ಯೆಗೆ ಸ್ಪಂದಿಸಿದ ಇಲಾಖೆಯವರ ಕ್ರಮಕ್ಕೆ ಗ್ರಾಮಸ್ಥರ ಪರವಾಗಿ ರವಿಕುಮಾರ್ ಅಭಿನಂದಿಸಿದ್ದಾರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ