೫ ವರ್ಷದೊಳಗಿನ ಮಕ್ಕಳಿಗೆ ಮರೆಯದೇ ಪೋಲಿಯೋ ಲಸಿಕೆ ಹಾಕಿಸಿ
------------------------------------------
ಹುಳಿಯಾರು: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜ.೧೭ರ ಬೆಳಗ್ಗೆ ೭.೩೦ಕ್ಕೆ ಮೊದಲನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು ಇದಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ರೋಟರಿ ಸಂಸ್ಥೆ ಕೈಜೋಡಿಸುತ್ತಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಮಂಜುನಾಥ್ ಗುಪ್ತಾ ತಿಳಿಸಿದರು.
ಪೋಲಿಯೋ ಲಸಿಕಾ ಕಾರ್ಯಕ್ರಮದ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು ಈ ವರ್ಷದ ಮೊದಲ ಸುತ್ತಿನ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಇದಾಗಿದ್ದು ರಾಜ್ಯಾದ್ಯಂತ ಜ.೧೭ರಿಂದ ಜ.೨೦ರವರೆಗೆ ನಡೆಯಲಿದೆ ಎಂದರು.ಫೆ ೨೧ ರಿಂದ ಎರಡನೆ ಸುತ್ತಿನ ಲಸಿಕಾ ಕಾರ್ಯಕ್ರಮ ನಡೆಯಲಿದ್ದು ೫ ವರ್ಷದೊಳಗಿನ ಮಕ್ಕಳಿಗೆ ಮರೆಯದೇ ಪೋಲಿಯೋ ಲಸಿಕೆ ಹಾಕಿಸಬೇಕೆಂದರು.ಪೋಷಕರಿಗೆ ಈ ಬಗ್ಗೆ ಜಾಗೃತಿ ಉಂಟಮಾಡಲು ಶನಿವಾರದಂದು ಬಸವೇಶ್ವರ ಶಾಲೆ ಹಾಗೂ ವಾಸವಿ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ನಡೆಸಲಾಯಿತು ಎಂದರು..
ಪೋಲಿಯೋ ಲಸಿಕೆ ಹಾಕಲು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ,ಬಸ್ ನಿಲ್ದಾಣದಲ್ಲಿ,ಅಂಗನವಾಡಿಗಳಲ್ಲಿ ಬೂತ್‌ಗಳನ್ನು ತೆರೆಯಲಾಗುವುದಿದ್ದು, ಜ.೧೭ರ ಬಳಿಕ ಮೂರು ದಿನ ಮನೆ, ಮನೆಗೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳದಿರುವ ಮಕ್ಕಳನ್ನು ಹುಡುಕಿ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುವುದು ಎಂದು ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ