ವೈದ್ಯಕೀಯ, ಶಸ್ತ್ರ ಚಿಕಿತ್ಸೆ, ಸ್ತ್ರೀರೋಗ, ಬಂಜೆತನ ನಿವಾರಣೆ, ಕೀಲು ಮತ್ತು ಮೂಳೆ, ಕಿವಿ ಮತ್ತು ಗಂಟಲು, ಸಕ್ಕರೆ ಕಾಯಿಲೆ, ಹೃದ್ರೋಗ, ನೇತ್ರ ಚಿಕಿತ್ಸೆ, ನರರೋಗ ಮತ್ತು ಮಾನಸಿಕ, ದಂತ, ಡಯಾಗ್ನಾಸ್ಟಿಕ್, ಮೂತ್ರಪಿಂಡ, ಚರ್ಮರೋಗ, ಮಕ್ಕಳ ವಿಭಾಗದ ತಜ್ಞ ವೈದ್ಯರು ಈ ಬೃಹತ್ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಬೆಳಿಗ್ಗೆಯಿಂದ ಪ್ರಾರಂಭವಾದ ಶಿಬಿರಕ್ಕೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಂದ ಆಗಮಿಸಿದ್ದ ೭೦೦ಕ್ಕೂ ಹೆಚ್ಚು ಮಂದಿಯನ್ನು ತಪಾಸಣೆಗೊಳಪಡಿಸಲಾಯಿತು. ಶಿಬಿರದಲ್ಲಿ ಉಚಿತವಾಗಿ ಹೃದಯ ,ನೇತ್ರ ತಪಾಸಣೆ,ಕಿವಿಮೂಗು ಗಂಟಲು,ಮೂಳೆ ಮತ್ತು ಕೀಲುರೋಗ,ಮೂತ್ರಪಿಂಡ ತೊಂದರೆ ಮುಂತಾದ ಖಾಯಿಲೆಗಳಿಗೆ ಸಂಬಂಧಿಸಿದ ಪರೀಕ್ಷೆ ನಡೆಸಲಾಯಿತು.ಅಗತ್ಯವಿರುವ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು೭೦ಕ್ಕೂ ಹೆಚ್ಚು ರೋಗಿಗಳನ್ನು ಶಸ್ತ್ರ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು.
ಈ ವೇಳೆ ಸಂಘದ ಅಧ್ಯಕ್ಷ ಹೆಚ್.ಎನ್.ವೆಂಕಟೇಶ್,ವೈದ್ಯಾಧಿಕಾರಿ ಶೋಭಾ,ಗ್ರಾಪಂ ಸದಸ್ಯ ಶಂಕರ್, ಮಂಜು,ದಿವಾಕರ್ ಸೇರಿದಂತೆ ಸಂಘದ ಸದಸ್ಯರು, ಸಪ್ತಗಿರಿ ಆಸ್ಪತ್ರೆ ನುರಿತ ವೈದ್ಯರು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ