ಹುಳಿಯಾರು:ಅಧಿಕ ವೇಗ ಹಾಗೂ ನಿರ್ಲಕ್ಷ್ಯದ ವಾಹನ ಚಾಲನೆ ಅಪಘಾತಕ್ಕೆ ಆಹ್ವಾನ ನೀಡಿದಂತೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಮೋಟಾರುವಾಹನ ನಿರೀಕ್ಷಕ ಮಂಜುನಾಥ್ ಪ್ರಸಾದ್ ಎಚ್ಚರಿಸಿದರು.
ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಯಲು ಆಲಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಅವರು ಮಾತನಾಡಿ ವಾಹನ ಚಲಾವಣೆಯಲ್ಲಿ ಜಾಗರೂಕತೆ ಅತಿ ಮುಖ್ಯವಾಗಿದ್ದು ಅತಿ ವೇಗವಾಗಿ ವಾಹನ ಚಲಾಯಿಸಿ ತಮ್ಮ ಜೀವಕ್ಕೆ ಆಪತ್ತು ತಂದುಕೊಳ್ಳಬಾರದು ಎಂದರು.
ವಿದ್ಯಾರ್ಥಿಗಳಿಗೆ ರಸ್ತೆ ಸಪ್ತಾಹ ಮಾಸಾಚರಣೆ ಕುರಿತು ವಿವರಿಸಿ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಿದರು. ರಸ್ತೆ ಹೇಗೆ ದಾಟಬೇಕು. ಚಾಲಕರಿಗೆ ಪರವಾನಗಿ ಏಕೆ ಅಗತ್ಯ. ಇನ್ಸೂರೆನ್ಸ್ ಏಕೆ ಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಅತಿಯಾದ ವೇಗದಿಂದಾಗುವ ಅಪಘಾತ,ಮದ್ಯಪಾನದಿಂದಾಗುವ ದುಷ್ಪರಿಣಾಮ ವಾಹನ ಚಲಾವಣೆ ಮಾಡುವಾಗ ಮೊಬೈಲ್ ಬಳಕೆಯಿಂಡಾಗುವ ಸಮಸ್ಯೆ ಕುರಿತು ಜಾಗೃತಿ ಮೂಡಿಸಿದರಲ್ಲದೆ ವಾಹನಗಳ ಹೆಡ್‌ಲೈಟ್, ರೆಡ್‌ಲೈಟ್, ಹಾರನ್, ಹ್ಯಾಂಡಲ್ ಲಾಕ್, ಟಯರ್ ಗಳು ಸುಸ್ಥಿತಿಯಲ್ಲಿರುವಂತೆ ಚಾಲಕರು, ಮಾಲಿಕರು ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ಪ್ರಾಂಶುಪಾಲ ಬಿಳಿಗೆರೆ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಅಧಿಕಾರಿಗಳಾದ ಇಬ್ರಾಹಿಂ, ಶಿವಯ್ಯ, ಆರ್. ಅಶೋಕ್, ಡಾ.ಬಾಳಪ್ಪ, ಚಿಕ್ಕನಾಯಕನಹಳ್ಳಿ ಡ್ರೆವಿಂಗ್ ಸ್ಕೂಲ್ ಬಸವರಾಜು, ಮಂಜು, ಕಾಲೇಜಿನ ವಿದ್ಯಾರ್ಥಿಗಳು ಮತ್ತಿತರರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ