ತಾಲ್ಲೂಕ್ ಪ್ರೌಢಶಾಲಾ ಕನ್ನಡ ಭಾಷಾ ಭೋದಕರ ಪುನಶ್ಚೇತನ ಕಾರ್ಯಕ್ರಮವನ್ನು ಕೆಂಕೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಜ.೧೨ರಂದು.ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ೧೦.೩೦ರಿಂದ ೧.೩೦ರವರೆಗೆ ೧೦ನೇ ತರಗತಿಯ ವ್ಯಾಕರಣಾಂಶಗಳ ಬಗ್ಗೆ ಹಾಗೂ ಮಧ್ಯಾಹ್ನ ೨.೩೦ರಿಂದ ೪.೩೦ರವರೆಗೆ ಎಂಟು,ಒಂಬತ್ತನೆ ತರಗತಿಯ ನೀಲನಕ್ಷೆ ಪ್ರಶ್ನೆಪತ್ರಿಕೆ ತಯಾರಿಸುವ ಬಗ್ಗೆ ಕಾರ್ಯಾಗಾರ ನಡೆಯಲಿದೆ.
ಸಂಪನ್ಮೂಲ ವ್ಯಕ್ತಿಯಾಗಿ ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಸರ್ಕಾರಿ ಪ್ರೌಡಶಾಲೆಯ ಕನ್ನಡ ಶಿಕ್ಷಕರಾದ ಮಂಜಯ್ಯಗೌಡ್ರು ಭಾಗವಹಿಸಲಿದ್ದು ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಯ ಕನ್ನಡ ಭಾಷಾ ಭೋದಕರು ಕಡ್ಡಾಯವಾಗಿ ಕಾರ್ಯಾಗಾರಕ್ಕೆ ಹಾಜರಾಗಬೇಕು ಹಾಗೂ ಬರುವಾಗ ೮,೯ಮತ್ತು ೧೦ ನೇ ತರಗತಿಯ ಕನ್ನಡ ಪಠ್ಯಪುಸ್ತಕವನ್ನು ತರಬೇಕಾಗಿ ತಾಲ್ಲೂಕ್ ಪ್ರೌಢಶಾಲಾ ಕನ್ನಡ ಭಾಷಾ ಭೋದಕರ ಸಂಘದ ಅಧ್ಯಕ್ಷರಾದ ಕೆ.ವೀರಣ್ಣನವರು ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ