ಹುಳಿಯಾರು : ಸಮೀಪದ ಬೆಳಗುಲಿ ಗುಡ್ಡದಲ್ಲಿ ಶ್ರೀಹೊನ್ನಮರಡಿ ರಂಗನಾಥಸ್ವಾಮಿಯ ಸುಗ್ಗಿ ಜಾತ್ರಾಮಹೋತ್ಸವ ವೈಭವಯುತವಾಗಿ ನಡೆಯಿತು.ಸುಮಾರು ಏಳು ನೂರು ವರ್ಷಗಳ ಇತಿಹಾಸ ಹೊಂದಿರುವ ,ಪ್ರತಿ ವರ್ಷ ಮಕರ ಸಂಕ್ರಾಂತಿಯಂದೆ ನಡೆಯುವ ಈ ಸುಗ್ಗಿಜಾತ್ರಾಮಹೋತ್ಸವಕ್ಕೆ ಅಪಾರ ಸಂಖ್ಯೆಯ ಭಕ್ತಾಧಿಗಳು ದೂರದೂರುಗಳಿಂದ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಧನ್ಯತೆ ಹೊಂದಿದರು.
ಬೆಳಗುಲಿ ಗುಡ್ಡದಲ್ಲಿ ಮಧ್ಯಾಹ್ನದ ಸಮಯದಲ್ಲಿ ನಡೆಯುವ ಜಾತ್ರೆಯಲ್ಲಿ ಹೊಸಕೆರೆಯ ಉಡುಸಲಮ್ಮ ದೇವಿ,ಕೆಂಚರಾಯಸ್ವಾಮಿ ,ಜಾಲಿಮರದಮ್ಮದೊಂದಿಗೆ ರಂಗನಾಥಸ್ವಾಮಿ ಉತ್ಸವ ಮೂರ್ತಿ ಆಗಮನದೊಂದಿಗೆ ವಿಶೇಷ ಪೂಜಾ ಕೈಂಕರ್ಯ ಹಾಗೂ ಮುಳ್ಳುಹಲಗೆ ,ಗಂಡುಗತ್ತರಿ ಸೇವೆ ನಡೆಯಿತು.
ಕೇವಲ ಮೂರ್ನಾಲ್ಕು ಗಂಟೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ರಂಗಾಪುರ, ಹೊಸಹಟ್ಟಿ, ಹಳೆಹಟ್ಟಿ, ಅವಳಗೆರೆ ಹಟ್ಟಿ, ಅವಳಗೆರೆ, ಪಾಪನಕೋಣ, ಹೊಸಕೆರೆ ಗ್ರಾಮಸ್ಥರು ಸೇರಿದಂತೆ ದೂರದೂರುಗಳಿಂದ ಸಹಸ್ರಾರು ಮಂದಿ ಭಕ್ತರು ಆಗಮಿಸಿದ್ದರು.ಸಂಜೆ ರಂಗನಾಥಸ್ವಾಮಿ ಬೆಳಗುಲಿ ಗ್ರಾಮಕ್ಕೆ ತೆರಳುತ್ತಿದ್ದಂತೆ ಜಾತ್ರೆಗೆ ತೆರೆ ಬಿದ್ದಿತು.ಸಂಜೆಯ ನಂತರ ಬೆಳಗುಲಿ ಗ್ರಾಮದಲ್ಲಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ