ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಪಡೆದಿದ್ದ ಸಮೀಪದ ದೊಡ್ಡ ಎಣ್ಣೇಗೆರೆ ಗ್ರಾಮದ ಗವಿರಂಗನಾಥ ಸ್ವಾಮಿ ವಿದ್ಯಾಪೀಠ ಪ್ರೌಢಶಾಲೆ ವಿದ್ಯಾರ್ಥಿನಿಯಾಗಿದ್ದ ಜೆ.ರಕ್ಷಿತಾಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ೨೦೧೫ ಮತ್ತು ೧೬ ನೇ ಸಾಲಿನ ಕನ್ನಡ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಧಾನಸೌದ ಬ್ಯಾಂಕ್ಟೆಟ್ ಸಭಾಂಗಣದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯಾರ್ಥಿನಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಹತ್ತು ಸಾವಿರ ನಗದು, ಪ್ರಶಸ್ತಿ ಫಲಕ, ಕೈಗಡಿಯಾರ, ಶಾಲಾ ಬ್ಯಾಗ್, ಎರಡು ಕನ್ನಡ ಇಂಗ್ಲಿಷ್ ನಿಘಂಟು ವಿತರಿಸಿದರು. ಮುಖ್ಯ ಶಿಕ್ಷಕರಾದ ಎ.ಎಸ್. ಬಸವಲಿಂಗಯ್ಯ, ಕಾರ್ಯದರ್ಶಿ ಕಾಂತರಾಜು, ಅಧ್ಯಕ್ಷರಾದ ಲಿಂಗರಾಜು ಅರಸು ವಿದ್ಯಾರ್ಥಿನಿಯ ಸಾಧನೆಯನ್ನು ಪ್ರಶಂಸಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ