ಹುಳಿಯಾರು ಸಮೀಪದ ಕಾಮಶೆಟ್ಟಿಪಾಳ್ಯದಲ್ಲಿ ಬನಶಂಕರಿ ಅಮ್ಮನವರ ಪುನರ್ ಚೈತನ್ಯ ಜೀವಕಳಾ,ಕರಿಬಾಣಸಾಲು ಸ್ಥಾಪನೆ,ಬನದ ಹುಣ್ಣಿಮೆ ಮುಂತಾದ ಪೂಜಾ ಕಾರ್ಯಕ್ರಮಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಲಾಯಿತು.
ಕೆಂಕೆರ ಕಾಳಮ್ಮ ಹಾಗೂ ಹುಳಿಯಾರಿನ ಕೆಂಚಮ್ಮ ದೇವಿಯು ಆಗಮನದೊಂದಿಗೆ ಗಂಗಾಪೂಜೆ ನೆರವೇರಿಸಿ ದೇವಾಲಯ ಪ್ರವೇಶದೊಂದಿಗೆ ಪೂಜಾ ಕಾರ್ಯಕ್ರಮ ಪ್ರಾರಂಭವಾಯಿತು.
ಶನಿವಾರದಂದು ಬೆಳಿಗ್ಗೆ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಬನಶಂಕರಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ.ಸಂಜೆ ೬ ಗಂಟೆಗೆ ಕಲಶ ಸ್ಥಾಪನೆ,ಪೂಜೆ ಮತ್ತು ಕರಿಬಾಣಸಾಲು ಸ್ಥಾಪನೆ ಮುಂತಾದ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದೆ.
೨೪ರ ಭಾನುವಾರದಂದು ಕುಪ್ಪೂರು ತಮ್ಮಡಿಹಳ್ಳಿಯ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬೆಳಿಗ್ಗೆ ಐದಕ್ಕೆ ಅಮ್ಮನವರಿಗೆ ಜೀವಕಳಾ ಚೈತನ್ಯ ಪೂರಕ ಮಂತ್ರಪಠನ,ರುದ್ರಾಭಿಷೇಕ,ಅಷ್ಟೋತ್ತರ ಪೂಜೆ,ಗಣಪತಿ ಹೋಮ,ವಾಸ್ತು ಹೋಮ,ನವಗ್ರಹ ಹೋಮ,ರುದ್ರ ಚಂಡೀಕಾ ದುರ್ಗಾ ಹೋಮ,ಪೂರ್ಣಾಹುತಿ ಮತ್ತು ನವ ಕನ್ನಿಕೆಯರಿಂದ ಅಮ್ಮನವರಿಗೆ ಕುಂಬಾಭಿಷೇಕ,ಕುಂಕುಮಾರ್ಚನೆ,ಮಹಾಮಂಗಳಾರತಿ ನಡೆದು ನಂತರ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.ರಾತ್ರಿ ೮ ಗಂಟೆಯಿಂದ ಅನ್ನ ಸಂತರ್ಪಣೆ ನಡೆಯಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕಾಗಿ ಬನಶಂಕರಿ ದೇವಾಲಯ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ