ಹುಳಿಯಾರು ಗ್ರಾಪಂ ಆವರಣದಲ್ಲಿ ನಡೆ ಗ್ರಾಮ ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಗೀತಾ ಪ್ರದೀಪ್,ಪಿಡಿಓ ಸಿದ್ದರಾಮಯ್ಯ,ದೇವರಾಜು,ದಯಾನಂದ್, ಉಮಾ ಮಹೇಶ್,ವೆಂಕಟೇಶ್ ಇದ್ದರು. |
ಹುಳಿಯಾರು: ವಸತಿ ಯೋಜನೆಯಡಿಯಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳ ಫಲಾನುಭವಿಗಳ ಪಟ್ಟಿಮಾಡಲು ಹುಳಿಯಾರು ಗ್ರಾಮ ಪಂಚಾಯ್ತಿ ಆವರಣದಲ್ಲಿ ಕರೆಯಲಾಗಿದ್ದ ಗ್ರಾಮಸಭೆಗೆ ನೀರಸ ಪ್ರತಿಕ್ರಿಯ ಕಂಡುಬಂತು.
ವಸತಿ ಯೋಜನೆಯಲ್ಲದೆ ಐಪಿಪಿಇ-೨ ಮತ್ತು "ನಮ್ಮ ಗ್ರಾಮ ನಮ್ಮ ಯೋಜನೆ"ಯ ಬಗ್ಗೆ ಕೂಡ ಚರ್ಚಿಸಲು ಈ ಸಭೆ ಕರೆಯಲಾಗಿತ್ತು.
ಆಹ್ವಾನ ಪತ್ರಿಕೆಯಲ್ಲಿ ಸಚಿವರು,ಸಂಸದರು,ವಿಧಾನ ಪರಿಷತ್ ಸದಸ್ಯರು,ಶಾಸಕರು ಹೀಗೆ ಹಲವಾರು ಮಂದಿ ಜನಪ್ರತಿನಿಧಿಗಳ ಸಾಲುಸಾಲು ಹೆಸರಿದ್ದರೂ ಕೂಡ ಅವೆಲ್ಲಾ ಕೇವಲ ಶಿಷ್ಟಾಚಾರ ಪಾಲಿಸುವ ಸಲುವಾಗಿಯಾದ್ದರಿಂದ ಸಭೆಗೆ ಯಾವೊಬ್ಬ ಜನಪ್ರತಿನಿಧಿಗಳ ಆಗಮಿಸಿರಲಿಲ್ಲಾ.ಶಾಸಕರು ಈ ಸಭೆಗೂ ಮುಂಚೆ ಅದೇ ವೇದಿಕೆಯಲ್ಲೇ ಬೇರೊಂದು ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡಿ ಬೇರೊಂದು ಕಾರ್ಯಕ್ರಮಕ್ಕೆ ತೆರಳಿದ್ದರಿಂದ ಅವರೊಂದಿಗೆ ಅವರ ಬೆಂಬಲಿಗರು ಕೂಡ ಹೋಗಿದ್ದರಿಂದ ಸಭೆಯಲ್ಲಿ ಗ್ರಾಪಂ ಸದಸ್ಯರ ಸಂಖ್ಯೆ ಕಡಿಮೆಯಿತ್ತು.ಅಲ್ಲದೆ ಇದು ಕೇವಲ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮಾತ್ರ ಸಿಮೀತವಾಗಿರುವುದರಿಂದ ಸಾರ್ವಜನಿಕರು ಹೆಚ್ಚಾಗಿ ಕಂಡುಬಾರದೆ ಕೇವಲ ಬೆರಳೇಣಿಕೆಯಷ್ಟು ಜನ ಕಂಡುಬಂತು.
ಪಿಡಿಓ ಸಿದ್ದರಾಮಯ್ಯ ಮಾತನಾಡಿ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಎಸ್‌ಸಿಗೆ ೧೧ ಮತ್ತು ಎಸ್‌ಟಿಗೆ ೨ ಮನೆ ಸೇರಿ ಒಟ್ಟು ೧೩ ಗ್ರ್ಯಾಂಟ್ ಗಳು ಸರಕಾರದಿಂದ ಬಂದಿದ್ದು ಫಲಾನುಭವಿಗಳ ಆಯ್ಕೆ ಹಾಗೂ ಅನುಸರಿಸಬೇಕಾದ ಕ್ರಮದ ಬಗ್ಗೆ ಮಾಹಿತಿ ನೀಡಿದರು.ಈ ಬಗ್ಗೆ ಗ್ರಾಪಂ ವ್ಯಾಪ್ತಿಯ ಎಲ್ಲಡೆ ಪ್ರಚಾರ ಕೈಗೊಂಡಿದ್ದಾಗ್ಯೂ ಕೇವಲ ೧೦ ಅರ್ಜಿಗಳು ಬಂದಿದ್ದವು. ಬಂದ ೧೦ ಅರ್ಜಿಗಳಿಗೂ ಗ್ರ್ಯಾಂಟ್ ನೀಡಿ ಉಳಿದ ಫಲಾನುಭವಿಗಳನ್ನು ಮೂರ್ನಾಲ್ಕು ದಿನಗಳಲ್ಲಿ ಆಯ್ಕೆ ಮಾಡಿ ಮುಂದಿನ ಕ್ರಮಕ್ಕೆ ಕಳುಹಿಸುವುದಾಗಿ ಸಭೆಯಲ್ಲಿ ತಿಳಿಸಿದರು.
ಇದೇ ಸಮಯದಲ್ಲಿ ಹುಳಿಯಾರು ಪಟ್ಟಣಕ್ಕೆ ಸರಬರಾಜಾಗುತ್ತಿರುವ ನೀರು ದುರ್ವಾಸನೆಯಿಂದ ಕೂಡಿದ್ದು ಜನರು ದಿನಬಳಕೆಗೂ ಸಹಾ ಬಳಸಲು ಅಸಾಧ್ಯವಾಗಿದ್ದು ಕೂಡಲೇ ಟ್ಯಾಂಕನ್ನು ಶುದ್ಧೀಕರಿಸಿ ನೀರು ಸರಬರಾಜು ಮಾಡುವಂತೆ ಗ್ರಾಮಸ್ಥ ಜಗದೀಶ್ ಮನವಿ ಮಾಡಿದರು.
ಒಟ್ಟಾರೆ ಸಭೆಯಲ್ಲಿ ಯೋಜನೆ ಬಗ್ಗೆ ಸಮರ್ಪಕವಾದ ಜನಸ್ಪಂದನೆ ದೊರೆಯದೆ ಕೇವಲ ಬೆರಳೆಣಿಕೆಯ ಅರ್ಜಿ ಬಂದಿತ್ತು.ಹಾಗೂ ಹೆಚ್ಚಿನ ಚರ್ಚೆ ,ಮನವಿಗಳಿಲ್ಲದೆ ,ಎಂದಿನ ಗದ್ದಲವಿಲ್ಲದೆ ಗ್ರಾಮ ಸಭೆ ಮುಕ್ತಾಯವಾಯಿತು.
ಗ್ರಾ.ಪಂ. ಅಧ್ಯಕ್ಷೆ ಗೀತಾ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಗಣೇಶ್, ನೋಡಲ್ ಅಧಿಕಾರಿ ದೇವರಾಜು,ಸದಸ್ಯರಾದ ಬಿಂದು ರಮೇಶ್, ಗೀತಬಾಬು, ಶಶಿಕಲಾ, ಪುಟ್ಟಮ್ಮ, ವೆಂಕಟೇಶ್, ಬಡ್ಡಿಪುಟ್ಟಣ್ಣ,ಎಸ್.ಆರ್.ಎಸ್.ದಯಾನಂದ್, ಶಂಕರ್,
ಚಂದ್ರಶೇಖರ್, ಸಿದ್ದಗಂಗಮ್ಮ ಹಾಗೂ ಗ್ರಾ.ಪಂ. ಕಾರ್ಯದರ್ಶಿ ಉಮಾ ಮಹೇಶ್,ಬಿಲ್ ಕಲೆಕ್ಟರ್ ವೆಂಕಟೇಶ್ ಮತ್ತಿತರರಿದ್ದರು.
ಚಂದ್ರಶೇಖರ್, ಸಿದ್ದಗಂಗಮ್ಮ ಹಾಗೂ ಗ್ರಾ.ಪಂ. ಕಾರ್ಯದರ್ಶಿ ಉಮಾ ಮಹೇಶ್,ಬಿಲ್ ಕಲೆಕ್ಟರ್ ವೆಂಕಟೇಶ್ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ