ಹುಳಿಯಾರು ಪಟ್ಟಣದ ಕಿಡ್ ಜೀ ಶಾಲೆಯ ಪುಟಾಣಿಗಳಿಗೆ ಸ್ಪಂದನ ದಂತ ಚಿಕಿತ್ಸಾಕೇಂದ್ರದಿಂದ ಉಚಿತ ದಂತ ತಪಾಸಣೆ ಶಿಬಿರ ನಡೆಯಿತು. ಶಾಲೆಯ ಪ್ರತಿ ಮಗುವಿಗೂ ದಂತ ತಪಾಸಣೆ ನಡೆಸಿದ ದಂತವೈದ್ಯರಾದ ಡಾ||ವಿಜಯ್ ಗೌಡ ಮಕ್ಕಳಿಗೆ ಹಲ್ಲುಗಳ ಆರೋಗ್ಯ, ಅದರ ಸಂರಕ್ಷಣೆ ಹಾಗೂ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿದರು.
ಅಶೋಕ ಹಾರ್ಡ್ ವೇರ್ ಮಾಲೀಕರಾದ ಅಶೋಕ್ ರವರು ಮಕ್ಕಳಿಗೆ ದಂತ ಆರೋಗ್ಯದ ಬಗ್ಗೆ ಮಾತನಾಡಿ ಚಿಕ್ಕವಯಸ್ಸಿನ ಮಕ್ಕಳಿಗೆ ಬಾಧಿಸುವ ಹುಳುಕು ಹಲ್ಲಿನ ಸಮಸ್ಯೆ ಬಗ್ಗೆ ಕಾಳಜಿವಹಿಸಬೇಕೆಂದರು.
ಶಿಬಿರದಲ್ಲಿ ಪ್ರಾಂಶುಪಾಲರಾದ ಅಶೋಕ್ ಚಂದ್ರ, ಸಂಯೋಜಕರಾದ ಮನು, ಸ್ಪಂದನ ನರ್ಸಿಂಗ್ ಹೋಂ ನ ಮುಖ್ಯಸ್ಥರಾದ ಡಾ|| ನಾಗರಾಜ್ ಹಾಗೂ ಜೀ ಲರ್ನ್ ಲಿಮಿಟೆಡ್ ನ ವಿಭಾಗೀಯ ಸಂಯೋಜಕರಾದ ವಿನಯ್ ರವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ