ಶುದ್ದ ಕುಡಿಯುವ ನೀರನ್ನು ಬಳಸುವುದರಿಂದ ಸಾರ್ವಜನಿಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆಯಲ್ಲಿ ಗ್ರಾಪಂ ಹಾಗು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಸ್ಥಾಪಿಸಲಾದ ಸುಸ್ಥಿರ ಶುದ್ದ ಕುಡಿಯುವ ನೀರಿನ ಘಟಕವನ್ನು ಶಾಸಕ ಸುರೇಶ್ ಬಾಬು ಚಾಲನೆ ನೀಡಿದರು.
|
ಹೊಯ್ಸಳಕಟ್ಟೆ ಗ್ರಾಮದಲ್ಲಿ ಗ್ರಾಪಂ ಹಾಗು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಸುಸ್ಥಿರ ಶುದ್ದ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.
ಅಂತರ್ಜಲ ಕುಸಿತದಿಂದ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿದ್ದು ಆ ನೀರನ್ನು ಬಳಸುವುದರಿಂದ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ.ಕೃಷಿಕರು ಕೃಷಿಹೊಂಡಗಳನ್ನು ತೋಟ ಹೊಲದಲ್ಲಿ ರಚಿಸಿಕೊಳ್ಳುವ ಮೂಖಾಂತರ ಅಂತರ್ಜಲ ರಕ್ಷಿಸಿ ಉತ್ತಮ ನೀರನ್ನು ಪಡೆಯಬಹುದು ಎಂದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೆಶಕ ದಿನೇಶ್ ಪೂಜಾರ್ ಮಾತನಾಡಿ ವೈಯಕ್ತಿಕ ಕುಟುಂಬ ಅಭಿವೃದ್ದಿ ದೃಷ್ಟಿಯಿಂದ ಶುದ್ದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಮಂಜುಳ.ತಾಲ್ಲೂಕು ಯೋಜನಾಧಿಕಾರಿ ರೊಹಿತಾಕ್ಷ.ಸುರೇಶ್.ಮುಖಂಡರಾದ ರಾಮದಾಸಪ್ಪ.ಜಯಲಿಂಗರಾಜು.ಯುವರಾಜು.ಮಲ್ಲೆಶಯ್ಯ.ಶಾಮಣ್ಣ ಗ್ರಾಪಂ ಸದಸ್ಯರಾದ ನಾಗರತ್ನಮ್ಮ. ಮಲ್ಲಣ್ಣ.ರಂಗನಾಥ್ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ