ಹುಳಿಯಾರು:ಪಟ್ಟಣದ ಅಯ್ಯಪ್ಪ ಸ್ವಾಮಿ ಸೇವಾಸಮಿತಿಯಿಂದ ಶ್ರೀ ಸ್ವಾಮಿಯವರ ೨೪ ನೇ ವರ್ಷದ ಉತ್ಸವವು ಮಂಗಳವಾರದಂದು ಸಂಜೆ ೬ ಗಂಟೆಯಿಂದ ನಡೆಯಲಿದೆ.
ಅಯ್ಯಪ್ಪ ಸ್ವಾಮಿಯೊಂದಿಗೆ ಗ್ರಾಮದೇವತೆಗಳಾದ ಹುಳಿಯಾರಮ್ಮ ಹಾಗೂ ದುರ್ಗಮ್ಮನವರನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಭಜನಾಮಂಡಳಿಗಳಿಂದ ಭಜನೆ, ಸ್ವಾಮಿಯ ಶರಣ ಘೋಷ ಹಾಗೂ ವಾದ್ಯಗೋಷ್ಟಿಯೊಂದಿಗೆ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು.
ಉತ್ಸವ ಕಾಲದಲ್ಲಿ ಜ್ಯೋತಿಯೊಂದಿಗೆ ಪಾಲ್ಗೊಳ್ಳುವ ಬಾಲಕಿಯರು ಸನ್ನಿಧಾನಕ್ಕೆ ತಟ್ಟೆ,ಲೋಟ ಹಾಗೂ ಪಂಚಾರತಿಯೊಂದಿಗೆ ಬರತಕ್ಕದ್ದು.ಉತ್ಸವದಲ್ಲಿ ಚಂಡೇವಾದ್ಯ,ಲಿಂಗದ ಬೀರರ ಸೇವೆ,ಗಾರುಡಿಗೊಂಬೆಯ ಯಕ್ಷಗಾನವಿದ್ದು ಶಾಸಕರ ಸೇವಾರ್ಥದಲ್ಲಿ ಅನ್ನಸಂತರ್ಪಣೆ ನಡೆಯುವುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ