ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಉಚಿತ ಸಾಮೂಹಿಕ ವಿವಾಹ

ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ಸನ್ನಿಧಿಯಲ್ಲಿ ರೋಟರಿ ಕಮ್ಯೂನಿಟಿ ಕಾರ್ಪ್ಸ್ ನವರು ನಡೆಸಿದ ಉಚಿತ ಸಾಮೂಹಿಕ ವಿವಾಹಮೋತ್ಸವದಲ್ಲಿ ಸಂಸಾರ ಬಂಧನಕ್ಕೊಳಗಾದ ನವ ಜೋಡಿಗಳೊಂದಿಗೆ ಗೋಡೆಕೆರೆ ಮೃತ್ಯುಂಜಯ ದೇಶೀಕೇಂದ್ರ ಸ್ವಾಮಿಗಳು,ರಾಮ್ ಹಾಲ್ ನ ಲಕ್ಷ್ಮಿಕಾಂತ್,ಇ.ರವೀಶ್,ವಿಶ್ವನಾಥ್,ಮಂಜುನಾಥ ಗುಪ್ತ,ಗಂಗಣ್ಣ ಸೇರಿದಂತೆ ಯೋಗಿನಾರಾಯಣ ಐಟಿಐ ಕಾಲೇಜಿನ ನ ವಿದ್ಯಾರ್ಥಿಗಳು ಹಾಗೂ ಇತರರು ಇದ್ದಾರೆ. ಹುಳಿಯಾರಿನ ಶ್ರೀ ಗಣಪತಿ ದೇವಾಲಯದಲ್ಲಿ ರೋಟರಿ ಕಮ್ಯೂನಿಟಿ ಕಾರ್ಪ್ಸ್ ನವರು ಭಾನುವಾರ ನಡೆಸಿದ ಉಚಿತ ಸಾಮೂಹಿಕ ವಿವಾಹಮೋತ್ಸವದಲ್ಲಿ ನವ ವಧುವರರಿಗೆ ಗೋಡೆಕೆರೆ ಮೃತ್ಯುಂಜಯ ದೇಶೀಕೇಂದ್ರ ಸ್ವಾಮಿಜೀಯವರು ವಸ್ತ್ರಗಳನ್ನು ವಿತರಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅಸಂಘಟಿತ ಕಾರ್ಮಿಕರಿಗೆ ಸ್ವಾವಲಂಬನ್ ಪಿಂಚಣಿ ಸೌಲಭ್ಯ

ಹುಳಿಯಾರಿನ ಬಾಪೂಜಿ ಟೈಲರ್ ಆಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಗುರುತಿನ ಪತ್ರಗಳ ವಿತರಣಾ ಸಮಾರಂಭವನ್ನು ತಾ.ಪಂ.ಅಧ್ಯಕ್ಷ ಸೀತಾರಾಂ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ನಮ್ಮ ರಾಜ್ಯದಲ್ಲಿ ಸಾವಿರಾರು ಮಂದಿ ಆಸಂಘಟಿತ ಕಾರ್ಮಿಕರಿದ್ದು, ಅವರಿಗೆ ಇದುವರೆವಿಗೂ ಯಾವುದೇ ಉತ್ತಮ ಸೌಲಭ್ಯಗಳಿಲ್ಲದೆ ಅವರು ಮೂಲೆಗುಂಪಾಗಿದ್ದರು.ಅಂತಹವರನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇಶದಲ್ಲೇ ಮೊದಲಬಾರಿ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಮೂಲಕ ನಿರ್ಲಕ್ಷಕ್ಕೊಳಗಾದ ಕಾರ್ಮಿಕರ ಯಶೋಭಿವೃದ್ದಿಗೆ ಮುಂದಾಗಿದೆ ಎಂದು ತಾ.ಪಂ.ಸದಸ್ಯ ನವೀನ್ ತಿಳಿಸಿದರು. ಹುಳಿಯಾರಿನ ಬಾಪೂಜಿ ಟೈಲರ್ ಆಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಗುರುತಿನ ಪತ್ರಗಳ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡಿದರು. ಈ ಯೋಜನೆಯಡಿ ದರ್ಜಿಗಳು, ದೋಬಿಗಳು, ಹಮಾಲರು, ಆಟೊ ಮತ್ತು ಟ್ಯಾಕ್ಸಿ ಚಾಲಕರು, ಹೋಟೆಲ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ದೊರೆಯಲಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಖಾಸಗಿ ಬಸ್ ಚಾಲಕರು, ನಿರ್ವಾಹಕರು, ಆಟೊಮೊಬೈಲ್ ವರ್ಕ್‌ಶಾಪ್‌ನಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಯೋಚನೆಯನ್ನು ಸರ್ಕಾರ ಮಾಡಿದೆ ಎಂದರು. ಹಾಗೆಯೇ ಬೀಡಿ ಕಾರ್ಮಿಕರು, ಮನೆಕೆಲಸದವರು, ಮೀನುಗಾರರು ಹಾಗೂ

ಪ್ರತಿಭಟನೆ

ÔÚßؾÚáÛÁÚß  ®Úloy¥ÚÆÇÁÚßÈÚ ®ÛâÚÉßOÚ AÁæàÞVÚÀ OæÞM¥ÚÃ¥ÚÆÇ ÈÚßàÄÑèOÚ¾Úß%¥Ú OæàÁÚ}æ B¥Úߧ, B¥ÚÂM¥Ú ÁæàÞWVÚØVæ ~ÞÈÚà }æàM¥ÚÁæ¾ÚáÛVÚß~¡¥æ. ÌÞYÚ´Ã OÚÃÈÚß OæçVæà×ÚÙ†æÞOÚß GM¥Úß J}Û¡¿ßÒ ÉÉ¨Ú ÑÚMYÚl«æVÚ×Úß AÑÚ°}æà ÈÚßßMºÛVÚ ËÚ¬ÈÛÁÚ ®ÚÃ~ºÚnÒ¥ÚÈÚâ´.  ®ÚloyÈÚâ´ fÅæǾÚß VÚt ºÛVÚÈÛW¥Úߧ, @~ ¥æàsÚu ÔæàÞ…Ø OæÞM¥ÚÃÈÛW¥æ. ÔÛVÛW BÆÇÁÚßÈÚM}ÚÔÚ ÑÚOÛ% ®ÛâÚÉßOÚ AÁæàÞVÚÀ OæÞM¥ÚÃOæQ ®ÚÃ~¬}ÚÀ ÔæàޅؾÚß ÑÚß}Ú¡Æ«Ú «ÚàÁÛÁÚß ÈÚßM¦ ÁæàÞWVÚ×Úß _P}æÓVÛW AÑÚ°}æÃVæ …ÁÚß}Û¡Áæ. BÆÇ«Ú d«ÚÑÚMSæÀVæ @«ÚßVÚßyÈÛW ®ÛâÚÉßOÚ AÁæàÞVÚÀ OæÞM¥ÚÃÈÚ«Úß„ ÑÚÈÚßߥ۾Úß AÁæàÞVÚÀ OæÞM¥ÚÃÈÚ«Û„W ÈæßÞħeæ%Væ HÂÑÚ†æÞP}Úß¡. B¥ÛÀÈÚâ´¥Ú«Úà„ ÈÚáÛsÚÅÛWÄÇ GM¥Úß ®ÚÃ~ºÚl«ÛOÛÁÚÁÚß AOæàÃÞËÚ ÈÚÀOÚ¡®ÚtÒ¥ÚÁÚß.  AÑÚ°}æþÚß ÑÚÈÚßÑæÀVÚ×Úß: «ÚàÁÛÁÚß d«Ú …M¥Úß ÔæàÞVÚßÈÚ AÑÚ°}æÃVæ SÛ¾ÚßM Èæç¥ÚÀÂÄÇ¥Úߧ ®ÚÃÈÚßßR ÑÚÈÚßÑæÀ¾ÚáÛW¥æ. BÁÚ†æÞP¥Ú§ B…¹ÁÚß SÛ¾ÚßM Èæç¥ÚÀÁÚ ÑÛ¤«ÚOæQ OæÞÈÚÄ ¬¾æàÞd«æ ÈæßÞÅæ J…¹ÁÚß Èæç¥ÚÀÁÚß …ÁÚß~¡ÁÚßÈÚâ´¥Úß ®ÚÃÈÚßßR ÑÚÈÚßÑæÀ. ÁæàÞWVÚØVÚ«ÚßVÚßyÈÛW «ÚÑé%VÚØÄǦÁÚßÈÚâ´¥Úß OÚàsÛ ÑÚÈÚßÑæÀ¾ÚáÛW¥æ. ËÚߥڪ OÚßt¾ÚßßÈÚ ¬ÞÂ«Ú ÈÚÀÈÚÑ椾ÚáÛVÚÆ, D}Ú¡ÈÚß

ಭೂಮಿಯ ಮೇಲೆ ಒಂದು ಕಣವನ್ನು ಸೃಷ್ಠಿಸದ ಮಾನವನಿಗೆ ಈ ಪರಿಸರವನ್ನು ನಾಶ ಮಾಡುವ ಹಕ್ಕಿಲ್ಲ: ನ್ಯಾಯಾಧೀಶ ಕೆ.ಎಂ.ರಾಜಶೇಖರ್

ಭೂಮಿಯ ಮೇಲೆ ಬುದ್ದಿವಂತ ಪ್ರಾಣಿ ಮಾನವ,ಆದರೆ ಇಂದು ತನ್ನ ತನವನ್ನು ಮರೆತಿದ್ದಾನೆ.ಅಲ್ಲದೆ ಭೂಮಿಯ ಮೇಲೆ ಒಂದು ಕಣವನ್ನು ಸೃಷ್ಥಿಸದ ಮಾನವ ಭೂಮಿಯ ಸೃಷ್ಠಿಯ ವಸ್ತುಗಳನ್ನು ನಾಶಮಾಡುತ್ತಿದ್ದಾನೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎಂ.ರಾಜಶೇಖರ್ ಅಭಿಪ್ರಾಯಪಟ್ಟರು. ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರ,ತಾಲ್ಲೂಕು ಕಾನೂನು ಸೇವೆ ಸಮಿತಿ , ವಕೀಲ ಸಂಘ ಹಾಗೂ ಆರಣ್ಯ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ ಸುರ್ವಣಮುಖಿ ಕ್ಯಾಂಪಸ್ ನಲ್ಲಿ ವಿಶ್ವ ಪರಿಸರ ದಿನಾಚಾರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಸಾಕ್ಷರತಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಪ್ರಸ್ತುತದಲ್ಲಿ ಮಾನವ ಅನೇಕ ಸಂಶೋಧನೆಗಳನ್ನು ಮಾಡುತ್ತಾ ಪ್ರಕೃತಿಯನ್ನು ತನಗೆ ಇಷ್ಟ ಬಂದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ.ಅಲ್ಲದೆ ಮುಂದಿನ ಪೀಳಿಗೆಯವರಿಗೆ ಬೇಕಾದಂತಹ ಸಂಪನ್ಮೂಲಗಳು ದೊರೆಯದಂತೆ ಮಾಡುತ್ತಿರುವುದು ಮಾನವನನ್ನು ವಿನಾಶದ ಕಡೆ ಕೊಂಡೈಯುತ್ತಿದೆ. ಪರಿಸರಕ್ಕೆ ಸಂಭಂಧಿಸಿದ ವಿವಿಧ ಕಾರ್ಯಕ್ರಮಗಳು ಪ್ರತಿಯೊಂದು ಶಾಲೆಗಳಲ್ಲಿ ನಡೆಯುವ ಮೂಲಕ ಮಕ್ಕಳು ಹಾಗೂ ಪೋಷಕರಲ್ಲಿ ಪರಿಸರ ಪ್ರಜ್ಞೆ ಉಂಟಾಗುವಂತೆ ಮಾಡಬೇಕಿದ್ದು,ಪ್ರಕೃತಿಯ ಮಹತ್ವವನ್ನು ಸಾರಿ ಹೇಳುವ ಆಂದೋಲನಗಳನ್ನು ಹಮ್ಮಿಕೊಂಡು ಪರಿಸರ ಸಂರಕ್ಷಣೆಯನ್ನು ಕೈಗೊಳ್ಳಬೇಕು ಎಂದರು. ವಕೀಲರಾದ ಎಸ್.ಹೆಚ್.ಚಂದ್ರಶೇಖರಯ್ಯ ಪ

ನಾಳೆಯಿಂದ (ತಾ.8) ಉಚಿತ ಯೋಗ,ಪ್ರಾಣಾಯಾಮ,ಮುದ್ರಾ ಶಿಬಿರ

ತುಮಕೂರಿನ ಶ್ರೀ ಮಂಜುನಾಥೇಶ್ವರ ಯೋಗ ಪ್ರತಿಷ್ಠಾನ ಸಂಸ್ಥೆಯವರು ಹೋಬಳಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದವರ ಸಂಯುಕ್ತಾಶ್ರಯದಲ್ಲಿ ನಾಳೆ (ತಾ.8) ಶುಕ್ರವಾರದಿಂದ ತಾ.17ರ ಭಾನುವಾರದವರೆಗೆ 10 ದಿನಗಳ ಕಾಲ ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಹಾಗೂ ಸಂಜೆ 5.30 ರಿಂದ 6.30 ರವರೆಗೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆಶ್ರಮದಲ್ಲಿ ಉಚಿತ ಯೋಗ,ಪ್ರಾಣಾಯಾಮ,ಮುದ್ರಾ ಶಿಬಿರವನ್ನು ಆಯೋಜಿಸಿದ್ದಾರೆ. ಶಿಬಿರದಲ್ಲಿ ಮಧುಮೇಹ,ರಕ್ತದೊತ್ತಡ,ಥೈರಾಯಿಡ್,ದೇಹತೂಕ ಹೆಚ್ಚಾಗಿರುವುದು,ಕಡಿಮೆ ಇರುವುದು,ಮಾನಸಿಕ ಖಿನ್ನತೆ,ನಿದ್ರಾಕೊರತೆ,ಬೆನ್ನು ನೋವು,ಹಿಮ್ಮಡಿನೋವು,ಆಸ್ತಮಾ,ಗ್ಯಾಸ್ಟ್ರಿಕ್,ಹೊಟ್ಟೆ ಉಬ್ಬರ,ಕೂದಲು ಉದರುವಿಕೆ,ತಲೆನೋವು ಸೇರಿದಂತೆ ಇತರೆ ವಿವಿಧ ತೊಂದರೆಗಳನ್ನು ಅನುಭವಿಸುತ್ತಿರುವವರಿಗೆ ವಿಶೇಷ ಮುದ್ರೆ,ಆಕ್ಯುಪ್ರೆಶರ್ ಬಿಂದು ಹಾಗೂ ಯೋಗ ಚಿಕಿತ್ಸೆ ಮೂಲಕ ಅವರು ಈ ತೊಂದರೆಗಳಿಂದ ಮುಕ್ತವಾಗುವಂತೆ ಮಾಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ 9844010386,8277568538 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ನಾಳೆ(ತಾ.7) ಹಸಿರು ಸೇನೆ ಹಾಗೂ ರಾಜ್ಯರೈತ ಸಂಘದಿಂದ ಜಿಮ್ ವಿರುದ್ದ ಪ್ರತಿಭಟನೆ

ವಿದೇಶಿ ಬಂಡವಾಳ ಹೂಡಿಕೆಯಿಂದ ರಾಜ್ಯದ ಅಭಿವೃದ್ದಿಯಾಗುತ್ತದೆಂದು ನೆಪ ಹೇಳುತ್ತಾ ನಮ್ಮ ರಾಜ್ಯದ ನೆಲ,ಜಲ ಸೇರಿದಂತೆ ಇತರ ಸಂಪನ್ಮೂಲವನ್ನು ಬಂಡವಾಳಶಾಹಿಗಳ ಬಾಯಿಗೆ ಹಾಕುವಂತಹ ಯೋಜನೆಯನ್ನು ರಾಜ್ಯ ಸರ್ಕಾರ ವಿದೇಶಿ ಬಂಡವಾಳ ಹೂಡಿಕೆದಾರರ (ಜಿಮ್) ಸಮಾವೇಶವಾಗಿ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯವರು ನಾಳೆ(ತಾ.7) ಗುರುವಾರ ಬೆಳಿಗ್ಗೆ ಬೆಂಗಳೂರಿನ ನೆಲಮಂಗಳ ರಸ್ತೆಯ ಅಂತರಾಷ್ಟ್ರೀಯ ವಸ್ತುಪ್ರದರ್ಶನದ ಆವರಣದಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಿದೆ ಎಂದು ರಾಜ್ಯ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ತಿಳಿಸಿದ್ದಾರೆ. ರಾಜ್ಯದ ಅಭಿವೃದ್ದಿ ಹಾಗೂ ರೈತರ ಪ್ರಗತಿ ಮಾಡುವುದಾಗಿ ತಿಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ ತನ್ನ 4 ವರ್ಷದ ಆಡಳಿತಾವಧಿಯಲ್ಲಿ ರಾಜ್ಯದ ಜನತೆಗೆ ಜೀವಿಸಲು ಅಗತ್ಯವಾದ ಆಹಾರ ವಸ್ತುಗಳ ಉತ್ಪಾದನೆಗೆ ಅಗತ್ಯವಾದ ಭೂಮಿ,ನೀರು,ಗೊಬ್ಬರ-ಬೀಜ ಮುಂತಾದ ಜೀವನಾವಶ್ಯಕ ವಸ್ತುಗಳನ್ನು ಪೂರೈಸಿ ನಾಡಿನ ಜನತೆಯ ಯಶೋಭಿವೃದ್ದಿಗೆ ಶ್ರಮಿಸುವ ಬದಲು ವಿದೇಶಿ ಬಂಡವಾಳ ಹೂಡಿಕೆಯಿಂದ ರಾಜ್ಯ ಪ್ರಗತಿಯಾಗುತ್ತದೆ ಎಂಬ ಕತ್ತಲ ಕೂಪಕ್ಕೆ ರಾಜ್ಯವನ್ನು ಕೊಂಡೈಯುತ್ತಿದೆ ಎಂದರು. ಮೂರು ಬಾರಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡ ಹೊರಟಿರುವ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ಲಕ್ಷಾಂತರ ಎಕರೆ ಗೋಮಾಳ,ಗುಂಡುತೋಪು,ಹುಲ್ಲುಬನ್ನಿ ಸೇರಿದಂತೆ ಅನೇಕ ಕೃಷಿಗೆ ಪೂರಕವಾದ

ನಾರಾಯಣಸ್ವಾಮಿಯವರ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ ಮಾಜಿ ಶಾಸಕ ಕೆ.ಎಸ್.ಕೆ

ಆಗ್ನೇಯ ಪದವಿದರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಾರಾಯಣಸ್ವಾಮಿಯವರ ಪರ ಚುನಾವಣಾ ಪ್ರಚಾರದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ತಾ.ಪಂ.ಅಧ್ಯಕ್ಷ ಸೀತಾರಾಂ,ಸದಸ್ಯರಾದ ಕೆಂಕೆರೆ ನವೀನ್,ವಸಂತಯ್ಯ, ಬಿಜೆಪಿ ತಾಲ್ಲೂಕ್ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ ,ಮಾಜಿ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಇತರರು ಹೋಬಳಿಯ ನಾನಾ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ್ದರು. ಆಗ್ನೇಯ ಪದವಿದರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಾರಾಯಣಸ್ವಾಮಿಯವರ ಪರವಾಗಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಸೇರಿದಂತೆ ಬಿಜೆಪಿಯ ಹಲವರು ಮಂಗಳವಾರದಂದು ಹೋಬಳಿಯ ನಾನಾ ಶಾಲಾ ಕಾಲೇಜುಗಳಿಗೆ ತೆರಳಿ ಭಿತ್ತಿ ಪತ್ರಗಳನ್ನು ನೀಡುವ ಮೂಲಕ ಪದವಿದರ ಶಿಕ್ಷಕರಲ್ಲಿ ಮತಯಾಚನೆ ಮಾಡಿದರು. ಮಂಗಳವಾರದಂದು ಹೋಬಳಿಯ ಹುಳಿಯಾರು-ಕೆಂಕೆರೆ ಸರ್ಕಾರಿ ಫ್ರೌಡಶಾಲೆ,ಸಂಯುಕ್ತ ಪದವಿ ಪೂರ್ವ ಕಾಲೇಜು,ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಬಸವೇಶ್ವರ ಫ್ರೌಡಶಾಲೆ,ಕನಕದಾಸ ಹಾಗೂ ವಾಸವಿ ಶಾಲೆಗಳಿಗೆ ತೆರಳಿದ್ದ ಬಿಜೆಪಿ ಕಾರ್ಯಕರ್ತರು ನಾರಾಯಣಸ್ವಾಮಿಯವರಿಗೆ ತಮ್ಮ ಮತ ಹಾಕುವ ಮೂಲಕ ಅವರನ್ನು ಜಯಶೀಲರನ್ನಾಗಿ ಮಾಡಿ ಎಂದು ಚುನಾವಣಾ ಪ್ರಚಾರ ನೆಡೆಸಿದರು. ತಾ.ಪಂ.ಅಧ್ಯಕ್ಷ ಸೀತಾರಾಂ,ಸದಸ್ಯರಾದ ಕೆಂಕೆರೆ ನವೀನ್,ವಸಂತಯ್ಯ, ಬಿಜೆಪಿ ತಾಲ್ಲೂಕ್ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ ,ಮಾಜಿ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಇತರ

ಆಗ್ನೇಯ ಪದವಿದರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಾರಾಯಣಸ್ವಾಮಿಯ ಗೆಲುವು ಖಚಿತ: ತಾ.ಪಂ.ಸದಸ್ಯ ಕೆಂಕೆರೆ ನವೀನ್

ಕಳೆದ ಬಾರಿ ಪದವಿದರ ಕ್ಷೇತ್ರದಿಂದ ಪಕ್ಷೇತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಅಭೂತಪೂರ್ವ ಗೆಲುವನ್ನು ಪಡೆದಿದ್ದರು,ಅಲ್ಲದೆ ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಾರಾಯಣಸ್ವಾಮಿಯ ಗೆಲುವು ಖಚಿತವಾದದ್ದು ಎಂದು ತಾ.ಪಂ.ಸದಸ್ಯ ಕೆಂಕೆರೆ ನವೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಗ್ನೇಯ ಭಾಗದ ಶಿಕ್ಷಕರು ಬುದ್ದಿವಂತ ಮತದಾರರಾಗಿದ್ದು ಯಾರಿಗೆ ತಮ್ಮ ಮತ ನೀಡಬೇಕೆಂದು ತಿಳಿದಿದೆ. ಜೊತೆಗೆ ಕಳೆದ ಸುಮಾರು 45 ವರ್ಷಗಳಿಂದ ಯಾವುದೇ ಬೇರೆ ಸರ್ಕಾರಗಳು ಸರ್ಕಾರಿ ಶಿಕ್ಷಕ ಬಂಧುಗಳಿಗೆ ಯಾವುದೇ ರೀತಿಯ ಸವಲತ್ತುಗಳನ್ನು ದೊರಕಿಸಿ ಕೊಟ್ಟಿಲ್ಲ,ಆದರೆ ಬಿಜೆಪಿ ಸರ್ಕಾರ ತನ್ನ ಅಧಿಕಾವಧಿಯಲ್ಲಿ ಶಿಕ್ಷಕ ಕ್ಷೇತ್ರಕ್ಕೆ ಹಿಂದೆಂದು ಕಂಡರಿಯದ ಸವಲತ್ತುಗಳನ್ನು ಒದಗಿಸಿ ಕೊಟ್ಟಿದೆ ಎಂದರು.ಕಳೆದ ಬಾರಿ ನಾರಾಯಣಸ್ವಾಮಿಯವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ 35 ಲಕ್ಷಕ್ಕೂ ಹೆಚ್ಚಿನ ಅನುದಾವನ್ನು ಮಂಜೂರು ಮಾಡಿಸಿದ್ದಾರೆ.ಅಲ್ಲದೆ ಬಿಜೆಪಿ ಸರ್ಕಾರ ತನ್ನ ಬಜೆಟ್ ನಲ್ಲಿ ಶಿಕ್ಷಕ ಹಾಗೂ ಶಿಕ್ಷಣ ಕ್ಶೇತ್ರಕ್ಕೆ ಹೆಚ್ಚಿನ ಅನುದಾನಗಳನ್ನು ಕಲ್ಪಿಸಿಕೊಟ್ಟಿದೆ. ನಾರಾಯಣಸ್ವಾಮಿಯವರು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಶಿಕ್ಷಕರಿಗಾಗಿ ಅನೇಕ ಕಾರ್ಯಗಳನ್ನು ಮಾಡಿದ್ದು,ಸಾವಿರಾರು ಸಹಶಿಕ್ಷಕರಿಗೆ ಬಡ್ತಿಯನ್ನು,ಸುಮಾರು 18ಸಾವಿರ ಶಿಕ್ಷಕರಿಗೆ ಜೀವನವನ್ನು ಕಟ್ಟಿಕೊತ್ತಿರುವ ಒಬ್ಬ ನಿಷ್ಪಕ್ಷಪಾತ ವ್ಯಕ್ತಿಯಾಗಿದ್ದು,ಶಿಕ್ಷಕರ ಮನೆ ಹ

ಚಂಡಿಗಡ್ ಗೆ ವರ್ಗಾವಣೆ

ಪಟ್ಟಣದ ಕೆನರಾ ಬ್ಯಾಂಕ್ ನ ವ್ಯವಸ್ಥಾಪಕರಾಗಿ 3 ವರ್ಷಗಳ ಸೇವೆ ಸಲ್ಲಿಸಿದ ಹೆಚ್.ಎಲ್.ಸತೀಶ್ ಅವರು ಚಂಡಿಗಡ್ ರಾಜ್ಯಕ್ಕೆ ವರ್ಗಾವಣೆಯಾಗಿದ್ದಾರೆ.ಇವರು ವೃತಿಯಲ್ಲಿ ಮ್ಯಾನೇಜರ್ ಆಗಿದ್ದು,ಪ್ರವೃತ್ತಿಯಲ್ಲಿ ಒಬ್ಬ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟು, ಅನೇಕ ಸಲ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.ಅಲ್ಲದೆ ಕ್ರೀಯಾಶಿಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯೊಂದಿಗೆ ಸೇರಿಕೊಂಡು ಪ್ರಪ್ರಥಮ ಬಾರಿ ಹುಳಿಯಾರಿನಲ್ಲಿ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ನಡೆಸಿದರು. ಅಲ್ಲದೆ ಗ್ರಾಮೀಣ ಮಟ್ಟದ ಪ್ರತಿಭಾವಂತ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟುಗಳ ಆಯ್ಕೆಗಾಗಿ ನಡೆದ ತರಬೇತಿ ಹಾಗೂ ಆಯ್ಕೆ ಶಿಬಿರದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಅಲ್ಲದೆ ಇವರು ಹುಳಿಯಾರು ಶಾಖೆಯಲ್ಲಿ ಮ್ಯಾನೇಜರ್ ಆಗಿ ತಮ್ಮ ಮೂರು ವರ್ಷದ ಸೇವೆಯಲ್ಲಿ ಸುತ್ತಮುತ್ತಲಿಗೆ ರೈತರಿಗೆ ಬ್ಯಾಂಕಿನಿಂದ ದೊರೆಯುವಂತಹ ಸೌಲಭ್ಯಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡುವ ಮೂಲಕ ರೈತರಿಗೆ ಸಹಕಾರವನ್ನು ನೀಡಿದ್ದಾರೆ.ಅಲ್ಲದೆ ಇವರು ಸಾರ್ವಜನಿಕರೊಂದಿಗೆ ಸರಳ ಸಜ್ಜನಿಕೆಯಿಂದ ನಡೆದುಕೊಳ್ಳುವ ಜನರ ಸಮಸ್ಯೆಗಳನ್ನು ಬಗೆ ಹರಿಸಿಕೊಡುತ್ತಿದ್ದರು.ಈ ಮೊದಲು ಕೆನರಾ ಬ್ಯಾಂಕ್ ಎಂದರೆ ಗಂಟೆಗಟ್ಟಲೇ ಕಾದು ಕೂರಬೇಕಿತ್ತು ಎಂಬ ಜನರ ಮನೋಭಾವನೆಯನ್ನು ದೂರ ಮಾಡಿ ಅವರ ಸಮಸ್ಯೆಗಳನ್ನು ಕಡಿಮೆ ಕಾಲಾವಧಿಯಲ್ಲಿ ಪರಿಹರಿಸಿ ಕೊಡುತ್ತಿದ್ದರು.ಬ್ಯಾ