ವಿದೇಶಿ ಬಂಡವಾಳ ಹೂಡಿಕೆಯಿಂದ ರಾಜ್ಯದ ಅಭಿವೃದ್ದಿಯಾಗುತ್ತದೆಂದು ನೆಪ ಹೇಳುತ್ತಾ ನಮ್ಮ ರಾಜ್ಯದ ನೆಲ,ಜಲ ಸೇರಿದಂತೆ ಇತರ ಸಂಪನ್ಮೂಲವನ್ನು ಬಂಡವಾಳಶಾಹಿಗಳ ಬಾಯಿಗೆ ಹಾಕುವಂತಹ ಯೋಜನೆಯನ್ನು ರಾಜ್ಯ ಸರ್ಕಾರ ವಿದೇಶಿ ಬಂಡವಾಳ ಹೂಡಿಕೆದಾರರ (ಜಿಮ್) ಸಮಾವೇಶವಾಗಿ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯವರು ನಾಳೆ(ತಾ.7) ಗುರುವಾರ ಬೆಳಿಗ್ಗೆ ಬೆಂಗಳೂರಿನ ನೆಲಮಂಗಳ ರಸ್ತೆಯ ಅಂತರಾಷ್ಟ್ರೀಯ ವಸ್ತುಪ್ರದರ್ಶನದ ಆವರಣದಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಿದೆ ಎಂದು ರಾಜ್ಯ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ತಿಳಿಸಿದ್ದಾರೆ.
ರಾಜ್ಯದ ಅಭಿವೃದ್ದಿ ಹಾಗೂ ರೈತರ ಪ್ರಗತಿ ಮಾಡುವುದಾಗಿ ತಿಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ ತನ್ನ 4 ವರ್ಷದ ಆಡಳಿತಾವಧಿಯಲ್ಲಿ ರಾಜ್ಯದ ಜನತೆಗೆ ಜೀವಿಸಲು ಅಗತ್ಯವಾದ ಆಹಾರ ವಸ್ತುಗಳ ಉತ್ಪಾದನೆಗೆ ಅಗತ್ಯವಾದ ಭೂಮಿ,ನೀರು,ಗೊಬ್ಬರ-ಬೀಜ ಮುಂತಾದ ಜೀವನಾವಶ್ಯಕ ವಸ್ತುಗಳನ್ನು ಪೂರೈಸಿ ನಾಡಿನ ಜನತೆಯ ಯಶೋಭಿವೃದ್ದಿಗೆ ಶ್ರಮಿಸುವ ಬದಲು ವಿದೇಶಿ ಬಂಡವಾಳ ಹೂಡಿಕೆಯಿಂದ ರಾಜ್ಯ ಪ್ರಗತಿಯಾಗುತ್ತದೆ ಎಂಬ ಕತ್ತಲ ಕೂಪಕ್ಕೆ ರಾಜ್ಯವನ್ನು ಕೊಂಡೈಯುತ್ತಿದೆ ಎಂದರು.
ಮೂರು ಬಾರಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡ ಹೊರಟಿರುವ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ಲಕ್ಷಾಂತರ ಎಕರೆ ಗೋಮಾಳ,ಗುಂಡುತೋಪು,ಹುಲ್ಲುಬನ್ನಿ ಸೇರಿದಂತೆ ಅನೇಕ ಕೃಷಿಗೆ ಪೂರಕವಾದ ಭೂಮಿಯನ್ನು ವಿದೇಶಿಯರ ಕೈಗೆ ಕೊಡಲೋರಟಿರುವ ರಾಜ್ಯ ಸರ್ಕಾರ ದ್ಯೇಯವೇನು ಎಂಬುದು ತಿಳಿಯುವುದಿಲ್ಲ.ಅಲ್ಲದೆ ರಾಜ್ಯದ ರೈತರಿಗಾಗಿ ವಿಷೇಶ ಬಜೆಟ್ ಮಂಡಿಸಿದ್ದ ಬಿಜೆಪಿ ಸರ್ಕಾರ ರೈತರನ್ನೇ ಮರೆತು ಕುಳಿತಿದೆ.ಇದೇ ರೀತಿಯ ವ್ಯವಸ್ಥೆ ಮುಂದುವರೆದರೆ ಮುಂದೊಂದು ದಿನ ವಿದೇಶಿಯರ ದಾಸ್ಯಕ್ಕೆ ಒಳಗಾಗಬೇಕಾಗುತ್ತದೆ,ಅದಕ್ಕಾಗಿ ಇಂದು ನಾಡಿನ ಜನತೆ ಎಚ್ಚೆತ್ತುಕೊಳ್ಳಬೇಕಿದ್ದು,ತಮ್ಮ ಕುರುಡು ವ್ಯಾಮೋಹವನ್ನು ಬದಿಗೊತ್ತಿ ನಾಡನ್ನು ಉಳಿಸಿ,ಸರ್ಕಾರದ ಇಂತಹ ನೀತಿಯ ವಿರುದ್ದ ತಿರುಗಿ ನಿಂತು ಸರ್ಕಾರವನ್ನು ಸರಿದಾರಿಗೆ ತರುವ ಕಾರ್ಯ ನಾಡಿನ ಜನತೆಯಿಂದ ಮಾತ್ರ ಸಾಧ್ಯ.ಈ ಹಿನ್ನಲೆಯಲ್ಲಿ ಸರ್ಕಾರ ನಡೆಸುತ್ತಿರುವ ರೈತ ವಿರೋಧಿ ಆಡಳಿತದ ವಿರುದ್ದ ರಾಜ್ಯ ರೈತಸಂಘದ ರಾಜ್ಯಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನೆಗೆ ರಾಜ್ಯದ ರೈತರು ಹಾಗೂ ಜನತೆ ಸಕ್ರೀಯವಾಗಿ ಪಾಲ್ಗೊಂಡು ನಮ್ಮ ನಾಡನ್ನು ಉಳಿಳಿ,ಬೆಳೆಸುವ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ