ಪಟ್ಟಣದ ಕೆನರಾ ಬ್ಯಾಂಕ್ ನ ವ್ಯವಸ್ಥಾಪಕರಾಗಿ 3 ವರ್ಷಗಳ ಸೇವೆ ಸಲ್ಲಿಸಿದ ಹೆಚ್.ಎಲ್.ಸತೀಶ್ ಅವರು ಚಂಡಿಗಡ್ ರಾಜ್ಯಕ್ಕೆ ವರ್ಗಾವಣೆಯಾಗಿದ್ದಾರೆ.ಇವರು ವೃತಿಯಲ್ಲಿ ಮ್ಯಾನೇಜರ್ ಆಗಿದ್ದು,ಪ್ರವೃತ್ತಿಯಲ್ಲಿ ಒಬ್ಬ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟು, ಅನೇಕ ಸಲ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.ಅಲ್ಲದೆ ಕ್ರೀಯಾಶಿಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯೊಂದಿಗೆ ಸೇರಿಕೊಂಡು ಪ್ರಪ್ರಥಮ ಬಾರಿ ಹುಳಿಯಾರಿನಲ್ಲಿ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ನಡೆಸಿದರು. ಅಲ್ಲದೆ ಗ್ರಾಮೀಣ ಮಟ್ಟದ ಪ್ರತಿಭಾವಂತ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟುಗಳ ಆಯ್ಕೆಗಾಗಿ ನಡೆದ ತರಬೇತಿ ಹಾಗೂ ಆಯ್ಕೆ ಶಿಬಿರದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು.
ಅಲ್ಲದೆ ಇವರು ಹುಳಿಯಾರು ಶಾಖೆಯಲ್ಲಿ ಮ್ಯಾನೇಜರ್ ಆಗಿ ತಮ್ಮ ಮೂರು ವರ್ಷದ ಸೇವೆಯಲ್ಲಿ ಸುತ್ತಮುತ್ತಲಿಗೆ ರೈತರಿಗೆ ಬ್ಯಾಂಕಿನಿಂದ ದೊರೆಯುವಂತಹ ಸೌಲಭ್ಯಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡುವ ಮೂಲಕ ರೈತರಿಗೆ ಸಹಕಾರವನ್ನು ನೀಡಿದ್ದಾರೆ.ಅಲ್ಲದೆ ಇವರು ಸಾರ್ವಜನಿಕರೊಂದಿಗೆ ಸರಳ ಸಜ್ಜನಿಕೆಯಿಂದ ನಡೆದುಕೊಳ್ಳುವ ಜನರ ಸಮಸ್ಯೆಗಳನ್ನು ಬಗೆ ಹರಿಸಿಕೊಡುತ್ತಿದ್ದರು.ಈ ಮೊದಲು ಕೆನರಾ ಬ್ಯಾಂಕ್ ಎಂದರೆ ಗಂಟೆಗಟ್ಟಲೇ ಕಾದು ಕೂರಬೇಕಿತ್ತು ಎಂಬ ಜನರ ಮನೋಭಾವನೆಯನ್ನು ದೂರ ಮಾಡಿ ಅವರ ಸಮಸ್ಯೆಗಳನ್ನು ಕಡಿಮೆ ಕಾಲಾವಧಿಯಲ್ಲಿ ಪರಿಹರಿಸಿ ಕೊಡುತ್ತಿದ್ದರು.ಬ್ಯಾಂಕಿನ ಇತರ ಕೆಲಸಗಾರರ ಜೊತೆ ತಾವು ಅವರಂತೆಯೇ ಎಂದು ಸೇವೆ ಮಾಡುತ್ತಿದ್ದ ಇವರು ವರ್ಗಾವಣೆಯಾಗಿರುವುದು ಬೇಸರವನ್ನುಂಟು ಮಾಡಿದೆ.ಆದರೆ ಬ್ಯಾಂಕಿನ ನಿಯಮದಂತೆ ಅವರು ವರ್ಗಾವಣೆಯಾಗಿದ್ದಾರೆ.ಮತ್ತೊಮ್ಮೆ ಅವರು ಈ ಶಾಖೆಗೆ ಶಾಖಾ ವ್ಯವಸ್ಥಾಪಕರಾಗಿ ಬರಲಿ ಎಂಬು ಎಲ್ಲರ ಹಾರೈಕೆಯಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ