ಭೂಮಿಯ ಮೇಲೆ ಬುದ್ದಿವಂತ ಪ್ರಾಣಿ ಮಾನವ,ಆದರೆ ಇಂದು ತನ್ನ ತನವನ್ನು ಮರೆತಿದ್ದಾನೆ.ಅಲ್ಲದೆ ಭೂಮಿಯ ಮೇಲೆ ಒಂದು ಕಣವನ್ನು ಸೃಷ್ಥಿಸದ ಮಾನವ ಭೂಮಿಯ ಸೃಷ್ಠಿಯ ವಸ್ತುಗಳನ್ನು ನಾಶಮಾಡುತ್ತಿದ್ದಾನೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎಂ.ರಾಜಶೇಖರ್ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರ,ತಾಲ್ಲೂಕು ಕಾನೂನು ಸೇವೆ ಸಮಿತಿ , ವಕೀಲ ಸಂಘ ಹಾಗೂ ಆರಣ್ಯ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ ಸುರ್ವಣಮುಖಿ ಕ್ಯಾಂಪಸ್ ನಲ್ಲಿ ವಿಶ್ವ ಪರಿಸರ ದಿನಾಚಾರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಸಾಕ್ಷರತಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪ್ರಸ್ತುತದಲ್ಲಿ ಮಾನವ ಅನೇಕ ಸಂಶೋಧನೆಗಳನ್ನು ಮಾಡುತ್ತಾ ಪ್ರಕೃತಿಯನ್ನು ತನಗೆ ಇಷ್ಟ ಬಂದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ.ಅಲ್ಲದೆ ಮುಂದಿನ ಪೀಳಿಗೆಯವರಿಗೆ ಬೇಕಾದಂತಹ ಸಂಪನ್ಮೂಲಗಳು ದೊರೆಯದಂತೆ ಮಾಡುತ್ತಿರುವುದು ಮಾನವನನ್ನು ವಿನಾಶದ ಕಡೆ ಕೊಂಡೈಯುತ್ತಿದೆ. ಪರಿಸರಕ್ಕೆ ಸಂಭಂಧಿಸಿದ ವಿವಿಧ ಕಾರ್ಯಕ್ರಮಗಳು ಪ್ರತಿಯೊಂದು ಶಾಲೆಗಳಲ್ಲಿ ನಡೆಯುವ ಮೂಲಕ ಮಕ್ಕಳು ಹಾಗೂ ಪೋಷಕರಲ್ಲಿ ಪರಿಸರ ಪ್ರಜ್ಞೆ ಉಂಟಾಗುವಂತೆ ಮಾಡಬೇಕಿದ್ದು,ಪ್ರಕೃತಿಯ ಮಹತ್ವವನ್ನು ಸಾರಿ ಹೇಳುವ ಆಂದೋಲನಗಳನ್ನು ಹಮ್ಮಿಕೊಂಡು ಪರಿಸರ ಸಂರಕ್ಷಣೆಯನ್ನು ಕೈಗೊಳ್ಳಬೇಕು ಎಂದರು.
ವಕೀಲರಾದ ಎಸ್.ಹೆಚ್.ಚಂದ್ರಶೇಖರಯ್ಯ ಪರಿಸರ ಸಂರಕ್ಷಣೆ ಕುರಿತು ವಿಷಯ ಮಂಡನೆ ಮಾಡಿದರು ಹಾಗೂ ಮಕ್ಕಳು,ಪೋಷಕರಿಂದ ಬಂದಂತಹ ಸಮಸ್ಯಾ ಪ್ರಶ್ನೆಗಳಿಗೆ ಉತ್ತರಿಸಿದರು.ಸಮಾರಂಭಕ್ಕೆ ಆಗಮಿಸಿದ್ದ ಮಕ್ಕಳ ಪೋಷಕರಿಗೆ ತಲಾ ಒಂದೊಂದು ಸಸಿಯನ್ನು ಉಚಿತವಾಗಿ ವಿತರಿಸಿದರು ಹಾಗೂ ಅದನು ಹಾರೈಕೆ ಮಾಡುವ ರೀತಿಯನ್ನು ತಿಳಿಸಿಕೊಟ್ಟರು ಹಾಗೂ ಶಾಲಾ ಮಕ್ಕಳು ಪರಿಸರ ಸಂರಕ್ಷಣೆಗೆ ಸಂಭಂಧಿಸಿದ ಕೆಲ ವಿಷಯಗಳ ಬಗ್ಗೆ ಅಣುಕು ಪ್ರದರ್ಶನವನ್ನು ನಡೆಸಿಕೊಟ್ಟರು.
ಸಮಾರಂಭದಲ್ಲಿ ಸಿವಿಲ್ ನ್ಯಾಯಾಧೀಶರಾದ ನಿರ್ಮಲ,ವಕೀಲ ಸಂಘದ ಅಧ್ಯಕ್ಷ ನಿರಂಜನ್,ಕಾರ್ಯದರ್ಶಿ ಶೇಖರಯ್ಯ,ಶಾಲೆಯ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್,ಪ್ರಾಚಾರ್ಯ ರವಿ,ಆರಣ್ಯ ಇಲಾಖೆಯವರು ಸೇರಿದಂತೆ ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯರು,ವಕೀಲ ಸಂಘದವರು,ಶಿಕ್ಷಕರು ಉಪಸ್ಥಿತರಿದ್ದರು.
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಿಶ್ವ ಪರಿಸರ ದಿನಾಚಾರಣೆ ಅಂಗವಾಗಿ ನಡೆದ ಕಾನೂನು ಸಾಕ್ಷರತಾ ಸಮಾರಂಭವನ್ನು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಸಸಿ ನೆಟ್ಟು,ನೀರು ಹಾಕುವ ಮೂಲಕ ಉದ್ಘಾಟಿಸಿದರು.
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಿಶ್ವ ಪರಿಸರ ದಿನಾಚಾರಣೆ ಅಂಗವಾಗಿ ನಡೆದ ಕಾನೂನು ಸಾಕ್ಷರತಾ ಸಮಾರಂಭದಲ್ಲಿ ಪೋಷಕರಿಗೆ ಗಿಡಗಳನ್ನು ವಿತರಿಸಲಾಯಿತು. ನ್ಯಾಯಾಧೀಶರಾದ ಕೆ.ಎಂ.ರಾಜಶೇಖರ್,ಕೆ.ನಿರ್ಮಲ,ವಕೀಲ ಸಂಘದ ಅಧ್ಯಕ್ಷ ನಿರಂಜನ್,ಶೇಖರಯ್ಯ,ಶಾಲೆಯ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್ ಹಾಗೂ ಇತರರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ