ಹುಳಿಯಾರಿನ ಬಾಪೂಜಿ ಟೈಲರ್ ಆಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಗುರುತಿನ ಪತ್ರಗಳ ವಿತರಣಾ ಸಮಾರಂಭವನ್ನು ತಾ.ಪಂ.ಅಧ್ಯಕ್ಷ ಸೀತಾರಾಂ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.
ನಮ್ಮ ರಾಜ್ಯದಲ್ಲಿ ಸಾವಿರಾರು ಮಂದಿ ಆಸಂಘಟಿತ ಕಾರ್ಮಿಕರಿದ್ದು, ಅವರಿಗೆ ಇದುವರೆವಿಗೂ ಯಾವುದೇ ಉತ್ತಮ ಸೌಲಭ್ಯಗಳಿಲ್ಲದೆ ಅವರು ಮೂಲೆಗುಂಪಾಗಿದ್ದರು.ಅಂತಹವರನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇಶದಲ್ಲೇ ಮೊದಲಬಾರಿ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಮೂಲಕ ನಿರ್ಲಕ್ಷಕ್ಕೊಳಗಾದ ಕಾರ್ಮಿಕರ ಯಶೋಭಿವೃದ್ದಿಗೆ ಮುಂದಾಗಿದೆ ಎಂದು ತಾ.ಪಂ.ಸದಸ್ಯ ನವೀನ್ ತಿಳಿಸಿದರು.
ಹುಳಿಯಾರಿನ ಬಾಪೂಜಿ ಟೈಲರ್ ಆಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಗುರುತಿನ ಪತ್ರಗಳ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡಿದರು.
ಈ ಯೋಜನೆಯಡಿ ದರ್ಜಿಗಳು, ದೋಬಿಗಳು, ಹಮಾಲರು, ಆಟೊ ಮತ್ತು ಟ್ಯಾಕ್ಸಿ ಚಾಲಕರು, ಹೋಟೆಲ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ದೊರೆಯಲಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಖಾಸಗಿ ಬಸ್ ಚಾಲಕರು, ನಿರ್ವಾಹಕರು, ಆಟೊಮೊಬೈಲ್ ವರ್ಕ್‌ಶಾಪ್‌ನಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಯೋಚನೆಯನ್ನು ಸರ್ಕಾರ ಮಾಡಿದೆ ಎಂದರು. ಹಾಗೆಯೇ ಬೀಡಿ ಕಾರ್ಮಿಕರು, ಮನೆಕೆಲಸದವರು, ಮೀನುಗಾರರು ಹಾಗೂ ಬೀದಿಬದಿಯ ವ್ಯಾಪಾರಿಗಳ ಸಹ ಇದರ ಸದುಪಯೋಗವನ್ನು ಪಡೆಯುವ ಮೂಲಕ ಸಾಮಾಜಿಕ ಭದ್ರತೆಯನ್ನು ಹೊಂದಬಹುದಾಗಿದೆ ಎಂದರು.
ಸ್ವಾವಲಂಬನ್ ಪಿಂಚಣಿ ಯೋಜನೆ: ಅಸಂಘಟಿತ ಕಾರ್ಮಿಕರಿಗೆ ನಿವೃತ್ತ ವೇತನ ಕಲ್ಪಿಸಲು ಕೇಂದ್ರ ಸರಕಾರ ಹೊಸದಾಗಿ ಜಾರಿಗೆ ತಂದಿರುವ ಸ್ವಾವಲಂಬನ್ ಪಿಂಚಣಿ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದ್ದು, ಯೋಜನೆಗೆ ಒಳಪಡುವ ಅಸಂಘಟಿತ ಕಾರ್ಮಿಕರು ಸದಸ್ಯತ್ವವನ್ನು ಪಡೆದು ಪ್ರತಿ ತಿಂಗಳು ೧೦೦ ರೂ.ನಂತೆ ವಂತಿಕೆ ನೀಡಿದರೆ, ಪ್ರತಿ ಕಾರ್ಮಿಕನಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ವಾರ್ಷಿಕವಾಗಿ 1 ಸಾವಿರ ದಿಂದ 1200 ರೂ.ಗಳನ್ನು ನೀಡುತ್ತದೆ . ಇದರಿಂದ ಕನಿಷ್ಠ 5೦0 ರೂ. ಮಾಸಿಕ ಪಿಂಚಣಿ ಲಭಿಸಲಿದ್ದು. ಈ ಯೋಜನೆ 18ರಿಂದ 60 ವಯೋಮಾನದ ಕಾರ್ಮಿಕರಿಗೆ ಲಭ್ಯವಾಗಲಿದೆ. ಪಲಾನುಭವಿಗಳಿಗೆ ಶೈಕ್ಷಣಿಕ ಧನಸಹಾಯ, ಅಪಘಾತವಾದಲ್ಲಿ ಪರಿಹಾರ, ಅಂತ್ಯಕ್ರಿಯೆಗೆ ಧನಸಹಾಯವು ಸಹ ದೊರೆಯಲಿದೆ.
ಸಮಾರಂಭವನ್ನು ತಾ.ಪಂ.ಅಧ್ಯಕ್ಷ ಸೀತಾರಾಂ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು,ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಜಲಾಲ್ ಸಾಬ್,ಕನಕ ವಾಣೀಜ್ಯ ಶಾಲೆಯ ಶಂಕರಾಚಾರ್,ತಾ.ಪಂ.ಮಾಜಿ ಸದಸ್ಯ ಮಲ್ಲಿಕಾರ್ಜುನಯ್ಯ,ಟಿಪ್ಪು ಸಂಘದ ಅಪ್ಸರ್,ಇಮ್ರಾಜ್,ಬಾಪೂಜಿ ಟೈಲರ್ ಸಂಘದ ಅಧ್ಯಕ್ಷ ಹೆಚ್,ಎ.ರಮೇಶ್ ಸದಸ್ಯರಾದ ಮಹಂತೇಶ್,ಮೋಹನ್,ಮಹೇಶ್,ನಾರಾಯಣ್,ಕೆ.ರಮೇಶ್ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ