ಆಗ್ನೇಯ ಪದವಿದರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಾರಾಯಣಸ್ವಾಮಿಯ ಗೆಲುವು ಖಚಿತ: ತಾ.ಪಂ.ಸದಸ್ಯ ಕೆಂಕೆರೆ ನವೀನ್
ಕಳೆದ ಬಾರಿ ಪದವಿದರ ಕ್ಷೇತ್ರದಿಂದ ಪಕ್ಷೇತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಅಭೂತಪೂರ್ವ ಗೆಲುವನ್ನು ಪಡೆದಿದ್ದರು,ಅಲ್ಲದೆ ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಾರಾಯಣಸ್ವಾಮಿಯ ಗೆಲುವು ಖಚಿತವಾದದ್ದು ಎಂದು ತಾ.ಪಂ.ಸದಸ್ಯ ಕೆಂಕೆರೆ ನವೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗ್ನೇಯ ಭಾಗದ ಶಿಕ್ಷಕರು ಬುದ್ದಿವಂತ ಮತದಾರರಾಗಿದ್ದು ಯಾರಿಗೆ ತಮ್ಮ ಮತ ನೀಡಬೇಕೆಂದು ತಿಳಿದಿದೆ. ಜೊತೆಗೆ ಕಳೆದ ಸುಮಾರು 45 ವರ್ಷಗಳಿಂದ ಯಾವುದೇ ಬೇರೆ ಸರ್ಕಾರಗಳು ಸರ್ಕಾರಿ ಶಿಕ್ಷಕ ಬಂಧುಗಳಿಗೆ ಯಾವುದೇ ರೀತಿಯ ಸವಲತ್ತುಗಳನ್ನು ದೊರಕಿಸಿ ಕೊಟ್ಟಿಲ್ಲ,ಆದರೆ ಬಿಜೆಪಿ ಸರ್ಕಾರ ತನ್ನ ಅಧಿಕಾವಧಿಯಲ್ಲಿ ಶಿಕ್ಷಕ ಕ್ಷೇತ್ರಕ್ಕೆ ಹಿಂದೆಂದು ಕಂಡರಿಯದ ಸವಲತ್ತುಗಳನ್ನು ಒದಗಿಸಿ ಕೊಟ್ಟಿದೆ ಎಂದರು.ಕಳೆದ ಬಾರಿ ನಾರಾಯಣಸ್ವಾಮಿಯವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ 35 ಲಕ್ಷಕ್ಕೂ ಹೆಚ್ಚಿನ ಅನುದಾವನ್ನು ಮಂಜೂರು ಮಾಡಿಸಿದ್ದಾರೆ.ಅಲ್ಲದೆ ಬಿಜೆಪಿ ಸರ್ಕಾರ ತನ್ನ ಬಜೆಟ್ ನಲ್ಲಿ ಶಿಕ್ಷಕ ಹಾಗೂ ಶಿಕ್ಷಣ ಕ್ಶೇತ್ರಕ್ಕೆ ಹೆಚ್ಚಿನ ಅನುದಾನಗಳನ್ನು ಕಲ್ಪಿಸಿಕೊಟ್ಟಿದೆ. ನಾರಾಯಣಸ್ವಾಮಿಯವರು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಶಿಕ್ಷಕರಿಗಾಗಿ ಅನೇಕ ಕಾರ್ಯಗಳನ್ನು ಮಾಡಿದ್ದು,ಸಾವಿರಾರು ಸಹಶಿಕ್ಷಕರಿಗೆ ಬಡ್ತಿಯನ್ನು,ಸುಮಾರು 18ಸಾವಿರ ಶಿಕ್ಷಕರಿಗೆ ಜೀವನವನ್ನು ಕಟ್ಟಿಕೊತ್ತಿರುವ ಒಬ್ಬ ನಿಷ್ಪಕ್ಷಪಾತ ವ್ಯಕ್ತಿಯಾಗಿದ್ದು,ಶಿಕ್ಷಕರ ಮನೆ ಹಾಗೂ ಅವರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.ಈ ಎಲ್ಲಾ ಅಂಶಗಳಿಂದ ಇವರು ಪ್ರಚಂಡ ಬಹುಮತದಿಂದ ಜಯ ಸಾಧಿಸುತ್ತಾರೆ ಎಂದು ನವೀನ್ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ