ಕ್ಷುಲಕ ಕಾರಣ ನೀಡಿ ಸ್ಥಳೀಯ ಗ್ರಾ.ಪಂ. ಸದಸ್ಯರು ನೀರು ಪೋರೈಕೆ ಘಟಕಕ್ಕೆ ಬೀಗ ಹಾಕಿದ್ದನ್ನು ಪ್ರತಿಭಟಿಸಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಯವರು ರಸ್ತೆ ತಡೆ ನಡೆಸಿದ್ದಲ್ಲದೆ ಸ್ಥಳಕ್ಕೆ ತಹಶೀಲ್ದಾರರನ್ನು ಕರೆಯಿಸಿ ಘಟಕವನ್ನು ಪುನರಾರಂಭ ಮಾಡಿಸಿದ ಘಟನೆ ಸೋಮವಾರ ಜರುಗಿದೆ. ಹಿನ್ನಲೆ: ಹುಳಿಯಾರು ಗ್ರಾ.ಪಂ.ಯ ಸಹಭಾಗಿತ್ವದಲ್ಲಿ ಪೋಲೀಸ್ ಠಾಣೆಯ ಹತ್ತಿರ ಡಾಕ್ಟರ್ ವಾಟರ್ ಘಟಕವನ್ನು ಸ್ಥಾಪಿಸಿದ್ದು, 20ಲೀ ನ ಒಂದು ಕ್ಯಾನ್ ಗೆ ಏಳು ರೂ ನಂತೆ ಅಲ್ಲಿಗೆ ಬಂದು ಕೊಂಡೈಯ್ಯುವ ಆಧಾರದ ಮೇಲೆ ನೀರನ್ನು ಸರಬರಾಜು ಮಾಡಲಾಗುತ್ತಿತ್ತು.ಶುದ್ದ ನೀರು ಪ್ರತಿಯೊಂದು ಮನೆಗೂ ತಲುಪಿಸುವ ನಿಟ್ಟಿನಲ್ಲಿ ಕಳೆದ ಕೆಲ ತಿಂಗಳ ಹಿಂದೆ ನೀರಿನ ಕ್ಯಾನ್ ನ ವಿತರಣೆಯನ್ನು ಖಾಸಗಿ ವ್ಯಕ್ತಿಯವರಿಗೆ ನೀಡಿದ್ದು, ಅವರು ಪ್ರತಿ ಕ್ಯಾನ್ ಗೆ ರೂ.15ರಂತೆ ಮನೆ ಬಾಗಿಲಿಗೆ ವಿತರಣೆ ಮಾಡುತ್ತಿದ್ದರು.ಖಾಸಗಿ ವ್ಯಕ್ತಿಗೆ ವಿತರಣೆ ನೀಡಿದ್ದನ್ನು ವಿರೋಧಿಸಿ ಕೆಲ ಸದಸ್ಯರುಗಳು ಡಾಕ್ಟರ್ ವಾಟರ್ ಘಟಕಕ್ಕೆ ಬೀಗ ಹಾಕಿದ್ದಲ್ಲದೆ,ಬೋರಿನಿಂದ ಸರಬರಾಜಾಗುತ್ತಿದ್ದ ನೀರಿನ ಪೈಪನ್ನು ಸಹ ಕಿತ್ತುಹಾಕಿದ್ದರು. ಇದರಿಂದಾಗಿ ನಾಲ್ಕೈದು ದಿನಗಳಿಂದ ಈ ಘಟಕ ಸ್ಥಗಿತ ಗೊಂಡು ಜನ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿತ್ತು. ಪ್ರತಿಭಟನೆ ಏಕೆ: ಸದಸ್ಯರ ಕ್ರಮದ ಬಗ್ಗೆ ಅಸಮದಾನ ವ್ಯಕ್ತ ಪಡಿಸಿದ ಸಾರ್ವಜನಿಕರು ಘಟಕದ ಬಳಿಯೇ ಏಳು ರೂಗೆ ಕೊಡುತ್ತಿದ್ದ ನೀರನ್...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070