ವಿಷಯಕ್ಕೆ ಹೋಗಿ

ಹುಳಿಯಾರು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಾಸವಿ ಶಾಲೆಗೆ ಸಮಗ್ರ ಪ್ರಶಸ್ತಿ

                   ಇಲ್ಲಿನ ವಾಸವಿ ಶಾಲಾ ಮೈದಾನದಲ್ಲಿ  ಮೂರು ದಿನಗಳು ನಡೆದ ಪ್ರಾಥಮಿಕ ಶಾಲೆಗಳ ಎ ವಿಭಾಗದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹೋಬಳಿಯ ನಾನಾ ಶಾಲೆಗಳ ಸ್ಪರ್ಧಾಳುಗಳು ಸ್ಪರ್ಧಿಸಿದ್ದು, ಅನೇಕ ಮಕ್ಕಳು ಉತ್ತಮ ಪ್ರದರ್ಶನ ನೀಡಿ ಬಹುಮಾನ ಪಡೆದಿವೆ. ಹುಳಿಯಾರಿನ ವಾಸವಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳು ಗುಂಪು ಆಟದಲ್ಲಿ 8  ಸ್ಥಾನ ಹಾಗೂ ಅಥ್ಲೆಟಿಕ್ಸ್ ನಲ್ಲಿ 9 ಸ್ಥಾನ ಪಡೆಯುವ ಮೂಲಕ  ಬಹುಮಾನಗಳನ್ನು ಪಡೆದುಕೊಂಡಿದ್ದಲ್ಲದೆ, ಕ್ರೀಡಾಕೂಟದ ಸಮಗ್ರ ಕೀಡಾಪ್ರಶಸ್ತಿಯನ್ನು ಈ ಶಾಲೆ ಪಡೆದುಕೊಂಡಿದೆ.
ಕ್ರೀಡಾಕೂಟದಲ್ಲಿ ಬಹುಮಾನ ಪಡೆದವರು:-
ಬಾಲಕರ ವಿಭಾಗ:- 100 ಮೀ ಓಟ: ಪ್ರಥಮಸ್ಥಾನ ಚಿರಂಜೀವಿ.ಎಲ್.ಆರ್ (ವಾಸವಿಶಾಲೆ). ದ್ವಿತೀಯಸ್ಥಾನ  ಕೆ.ವಿ.ಸುಹಾಸ್ (ವಾಸವಿಶಾಲೆ), 200 ಮೀ ಓಟ: ಪ್ರಥಮಸ್ಥಾನ ಎಸ್.ಮಂಜುನಾಥ್ (ವಾಸವಿಶಾಲೆ), ದ್ವಿತೀಯಸ್ಥಾನ ಕೆ.ಎನ್.ವೆಂಕಟೇಶ್ (ಕನಕದಾಸ ಶಾಲೆ), 400 ಮೀ. ಓಟ: ಪ್ರಥಮಸ್ಥಾನ ಎಸ್.ಡಿ.ಭರತ್(ವಾಸವಿಶಾಲೆ), ದ್ವಿತೀಯಸ್ಥಾನ ಎಸ್.ಕೆ.ಸಂಜಯ್ (ವಾಸವಿಶಾಲೆ), 600 ಮೀ ಓಟ: ಪ್ರಥಮಸ್ಥಾನ ಕೆ.ವಿ.ಸುಹಾಸ್(ವಾಸವಿಶಾಲೆ), ದ್ವಿತೀಯಸ್ಥಾನ ಪ್ರಸನ್ನಕುಮಾರ್(ಯಳನಡು ಎಂಪಿಎಸ್),ಗುಂಡು ಎಸೆತ: ಪ್ರಥಮಸ್ಥಾನ  ಸೈಯದ್ ಮುಖ್ತ್ಯಾರ್(ಹುಳಿಯಾರು ಎಂಪಿಎಸ್),ದ್ವಿತೀಯಸ್ಥಾನ  ನವಾಜ್(ವಾಸವಿಶಾಲೆ),ಚಕ್ರಎಸೆತ: ಪ್ರಥಮಸ್ಥಾನ ಸೈಯದ್ ಮುಖ್ತ್ಯಾರ್ (ಹುಳಿಯಾರು ಎಂಪಿಎಸ್), ದ್ವಿತೀಯಸ್ಥಾನ  ದಾದಾಪೀರ್(ಹುಳಿಯಾರು ಎಂಪಿಎಸ್), ಉದ್ದ ಜಿಗಿತ: ಪ್ರಥಮಸ್ಥಾನ ಎಸ್.ಡಿ.ಭರತ್(ವಾಸವಿ ಆಂಗ್ಲಶಾಲೆ), ದ್ವಿತೀಯಸ್ಥಾನ ಎಸ್.ಮಂಜುನಾಥ್(ವಾಸವಿ ಆಂಗ್ಲಶಾಲೆ), ಎತ್ತರ ಜಿಗಿತ: ಪ್ರಥಮಸ್ಥಾನ  ಗುರುಕಿರಣ್(ತಮ್ಮಡಿಹಳ್ಳಿ ಜಿ.ಹೆಚ್.ಪಿ.ಎಸ್),ದ್ವಿತೀಯಸ್ಥಾನ  ಪ್ರಸನ್ನಕುಮಾರ್(ಯಳನಡು ಜಿ.ಹೆಚ್.ಪಿ.ಎಸ್),ರಿಲೇ 100X4: ಪ್ರಥಮಸ್ಥಾನ ವಾಸವಿ ಆಂಗ್ಲಶಾಲೆ,ದ್ವಿತೀಯಸ್ಥಾನ ಹುಳಿಯಾರು ಕೇಶವ ಹೆಚ್.ಪಿ.ಎಸ್ ಶಾಲೆ
ಬಾಲಕಿಯರ ವಿಭಾಗ:  100ಮೀ ಓಟ: ಪ್ರಥಮಸ್ಥಾನ  ಹೆಚ್.ಎಂ.ಮೇಘ (ವಾಸವಿಶಾಲೆ),ದ್ವಿತೀಯಸ್ಥಾನ  ಹೆಚ್.ಕೆ. ಶಶಿಕಲಾ (ಹುಳಿಯಾರು ಹೆಚ್.ಪಿ.ಚಿ.ಎಸ್),200ಮೀ ಓಟ: ಪ್ರಥಮಸ್ಥಾನ  ಸಂಗೀತ(ಕನಕದಾಸ ಶಾಲೆ), ದ್ವಿತೀಯಸ್ಥಾನ  ಕೆ.ಸ್ನೇಹಾ(ಡಿಂಕನಹಳ್ಳಿ ಹೆಚ್.ಪಿ.ಎಸ್),400ಮೀ. ಓಟ: ಪ್ರಥಮಸ್ಥಾನ ಸುಕನ್ಯ( ಯಳನಡು ಎಂಪಿಎಸ್),ದ್ವಿತೀಯಸ್ಥಾನ ಕಾವ್ಯ (ಹುಳಿಯಾರು ಹೆಚ್.ಪಿ.ಜಿ.ಎಸ್),600ಮೀ ಓಟ: ಪ್ರಥಮಸ್ಥಾನ  ಕೆ.ಚೈತ್ರ(ತಮ್ಮಡಿಹಳ್ಳಿ ಹೆಚ್.ಪಿ.ಎಸ್),ದ್ವಿತೀಯಸ್ಥಾನ  ಹೆಚ್.ಟಿ.ತನುಜ (ಹುಳಿಯಾರು ಹೆಚ್.ಪಿ.ಜಿ.ಎಸ್),ಗುಂಡು ಎಸೆತ: ಪ್ರಥಮಸ್ಥಾನ  ಕವನ (ಡಿಂಕನಹಳ್ಳಿ ಜಿ.ಹೆಚ್.ಪಿ.ಎಸ್),ದ್ವಿತೀಯಸ್ಥಾನ  ಟಿ.ಲಕ್ಷ್ಮೀ(ಹುಳಿಯಾರು ಹೆಚ್.ಪಿ.ಜಿ.ಎಸ್), ಚಕ್ರ ಎಸೆತ: ಪ್ರಥಮಸ್ಥಾನ ನಯನ(ಸೀಗೆಬಾಗಿ ಜಿ.ಹೆಚ್.ಪಿ.ಎಸ್), ದ್ವಿತೀಯಸ್ಥಾನ ಕವನ(ಡಿಂಕನಹಳ್ಳಿ ಜಿ.ಹೆಚ್.ಪಿ.ಎಸ್), 
ಉದ್ದ ಜಿಗಿತ: ಪ್ರಥಮಸ್ಥಾನ  ಹೆಚ್.ಎಂ.ಮೇಘ(ವಾಸವಿಶಾಲೆ),ದ್ವಿತೀಯಸ್ಥಾನ  ವೈ.ಪಿ.ಮೇಘನ (ಹುಳಿಯಾರು ಕೇಶವ ಹೆಚ್.ಪಿ.ಎಸ್),ಎತ್ತರ ಜಿಗಿತ:  ಡಿ.ಎಸ್.ಸಹನ(ವಾಸವಿ ಆಂಗ್ಲಶಾಲೆ),ದ್ವಿತೀಯಸ್ಥಾನ  ಬಿ.ಎಲ್.ಸಹನ(ವಾಸವಿ ಆಂಗ್ಲಶಾಲೆ),ರಿಲೇ: ಪ್ರಥಮಸ್ಥಾನ ಹುಳಿಯಾರು ಹೆಚ್.ಪಿ.ಜಿ.ಎಸ್, ದ್ವಿತೀಯಸ್ಥಾನ ವಾಸವಿ ಆಂಗ್ಲ ಶಾಲೆ.
ಗುಂಪು ಕ್ರೀಡೆ: ಬಾಲಕರ ವಿಬಾಗ: ಖೋಖೋ: ಪ್ರಥಮಸ್ಥಾನ ವಾಸವಿಶಾಲೆ, ದ್ವಿತೀಯಸ್ಥಾನ ಯಳನಡು ಎಂಪಿಎಸ್, ಥ್ರೋಬಾಲ್:  ಪ್ರಥಮಸ್ಥಾನ ವಾಸವಿಶಾಲೆ, ದ್ವಿತೀಯಸ್ಥಾನ ಹುಳಿಯಾರು ಎಂಪಿಎಸ್,ವಾಲಿಬಾಲ್: ಪ್ರಥಮಸ್ಥಾನ ವಾಸವಿಶಾಲೆ,ದ್ವಿತೀಯಸ್ಥಾನ ತಮ್ಮಡಿಹಳ್ಳಿ ಜಿ.ಹೆಚ್.ಪಿ.ಎಸ್,ಷಟಲ್ ಬ್ಯಾಡ್ಮಿಂಟನ್: ಪ್ರಥಮಸ್ಥಾನ ವಾಸವಿಶಾಲೆ,ದ್ವಿತೀಯಸ್ಥಾನ ಯಳನಡು ಜಿ.ಹೆಚ್.ಪಿ.ಎಸ್, ಕಬ್ಬಡಿ : ಪ್ರಥಮಸ್ಥಾನ ತಮ್ಮಡಿಹಳ್ಳಿ ಜಿ.ಹೆಚ್.ಪಿ.ಎಸ್, ದ್ವಿತೀಯಸ್ಥಾನ ಹುಳಿಯಾರು ಎಂಪಿಎಸ್,
ಬಾಲಕಿಯರ ವಿಭಾಗ: ಖೋಖೋ: ಪ್ರಥಮಸ್ಥಾನ ವಾಸವಿಶಾಲೆ,ದ್ವಿತೀಯಸ್ಥಾನ  ಹುಳಿಯಾರು ಹೆಚ್.ಪಿ.ಜಿ.ಎಸ್,ಥ್ರೋಬಾಲ್: ಪ್ರಥಮಸ್ಥಾನ ವಾಸವಿಶಾಲೆ, ದ್ವಿತೀಯಸ್ಥಾನ ಯಳನಡು ಜಿ.ಹೆಚ್.ಪಿ.ಎಸ್,ವಾಲಿಬಾಲ್: ಪ್ರಥಮಸ್ಥಾನ ವಾಸವಿಶಾಲೆ,ದ್ವಿತೀಯಸ್ಥಾನ ತಮ್ಮಡಿಹಳ್ಳಿ ಜಿ.ಹೆಚ್.ಪಿ.ಎಸ್,ಷಟಲ್ ಬ್ಯಾಡ್ಮಿಂಟನ್: ಪ್ರಥಮಸ್ಥಾನ ವಾಸವಿಶಾಲೆ,ದ್ವಿತೀಯಸ್ಥಾನ ಬರಗೀಹಳ್ಳಿ ಜಿ.ಹೆಚ್.ಪಿ.ಎಸ್,ಕಬ್ಬಡಿ : ಪ್ರಥಮಸ್ಥಾನ ಹುಳಿಯಾರು ಕೇಶವಶಾಲೆ, ದ್ವಿತೀಯಸ್ಥಾನ ಸೀಗೇಬಾಗಿ ಜಿ.ಹೆಚ್.ಪಿ.ಎಸ್.
                    ಸಮಗ್ರ ಕ್ರೀಡಾಪ್ರಶಸ್ತಿಗೆ ಬಾಜನರಾಗಿರುವ ವಾಸವಿಶಾಲಾ ಮಕ್ಕಳನ್ನು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಲಕ್ಷ್ಮಿಕಾಂತ್,ಚುರುಮುರಿ ಶ್ರೀನಿವಾಸ್,ಎಲ್.ಆರ್.ಚಂದ್ರಶೇಖರ್,ರಾಮನಾಥ್ ಸೇರಿದಂತೆ ಶಾಲಾ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...