ಕಳೆದ ಒಂದೂವರೆ ವರ್ಷದಿಂದ ಶಾಲೆಗೆ ಸರಿಯಾಗಿ ಬಾರದೆ ಗೈರುಹಾಜರಾಗುತ್ತಿದ್ದ ಹುಳಿಯಾರು ಹೋಬಳಿ ಹೊಯ್ಸಲಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿ ಶಿಕ್ಷಕ ಆರ್. ಪರಶಿವಮೂರ್ತಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹೊಯ್ಸಲಕಟ್ಟೆ ಕರ್ನಾಟಕ ರಕ್ಷಣಾ ವೇದಿಕೆಯವರು ಹಾಗೂ ಗ್ರಾಮಸ್ಥರು ಶಾಲೆ ಮುಖ್ಯ ದ್ವಾರಕ್ಕೆ ಬೀಗ ಜಡಿದು ಶುಕ್ರವಾರ ಪ್ರತಿಭಟಿಸಿದ್ದಾರೆ.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸರ್ಕಾರಿ ನೌಕರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಆರ್. ಪರಶಿವಮೂರ್ತಿ ಶಾಲೆಗೆ ಸರಿಯಾಗಿ ಬಾರದೇ ತಿಂಗಳಿಗೊಮ್ಮೆ ಬಂದು ಹಾಜರಾತಿ ಹಾಕಿ ಸಂಬಳ ಪಡೆಯುತ್ತಿದ್ದಾರೆ,ಅಲ್ಲದೆ ತನ್ನ ಪ್ರಭಾವದಿಂದ ಮುಖ್ಯಶಿಕ್ಷಕರನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ತನಗೆ ಬೇಕಾದ ಶಾಲೆಗೆ ಬಂದು ಹೋಗುತ್ತಿದ್ದಾರೆ ಎಂದು ಗ್ರಾಮಸ್ಥರಾದ ಬಾದೇಗೌಡ ದೂರಿದ್ದಾರೆ. ಅತಿಯಾದ ರಾಜಕೀಯ ಆಸಕ್ತಿ ಹೊಂದಿರುವ ಈತ ಈ ಬಾರಿಯ ರಾಜ್ಯ ಸರ್ಕಾರಿ ನೌಕರರ ಸಂಗದ ಚುನಾವಣೆಯಲ್ಲಿ ಸ್ವರ್ಧಿಸಿದ್ದಾರೆ,ಅಲ್ಲದೆ ತನ್ನೊಂದಿಗೆ ಬಿಇಓ ಅವರೊಂದಿಗೆ ಉತ್ತಮ ಸಂಬಂಧಹೊಂದಿದ್ದು, ಹಲವು ಬಾರಿ ಈ ಶಿಕ್ಷಕ ಮಾಡುತ್ತಿರುವ ಕಾರ್ಯದ ಬಗ್ಗೆ ಶಾಲಾಭಿವೃದ್ದಿಯವರು ದೂರು ನಿಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಹಾಗೂ ಯಾವುದೇ ಸರ್ಕಾರಿ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ ಈ ಹಿನ್ನಲೆಯಲ್ಲಿ ಶಾಲೆಗೆ ಬಾರದೆ, ಶಾಲಾ ಮಕ್ಕಳಿಗೆ ಪಾಠ ಮಾಡದೇ ಸರ್ಕಾರಕ್ಕೆ ಮೋಸ ಮಾಡುತ್ತಿರುವ ಶಿಕ್ಷಕನವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಕರವೇ ಗ್ರಾಮ ಘಟಕದ ಅಧ್ಯಕ್ಷ ನಾಗರಾಜು ಆಗ್ರಹಿಸಿದ್ದಾರೆ.
ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಶಿಕ್ಷಣ ಸಂಯೋಜಕಿ ವಿಜಯಕುಮಾರಿ, ಸಿಆರ್ ಪಿ ಮೋಹನ್ ಕುಮಾರ್,ಪಿಎಸೈ ಅಂಜಪ್ಪ ಪ್ರತಿಭಟನಾಕಾರರೊಂದಿಗೆ ಚರ್ಚಿಸಿ,ಸೋಮವಾರ ಡಿಡಿಪಿಐ ಅವರನ್ನು ಶಾಲೆಗೆ ಕರೆಯಿಸಿ ಆರ್. ಪರಶಿವಮೂರ್ತಿ ಅವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ಪ್ರತಿಭಟನಾಕಾರರ ಮನವೋಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದ್ದಾರೆ.ಈ ಸಂಧರ್ಭದಲ್ಲಿ ಕರವೇಯ ಗೀರೀಶ್,ಲೋಕೇಶ್,ಗುರು,ಚಿದಾನಂದ ಸೇರಿದಂತೆ ಗ್ರಾಮಸ್ಥರು ಜಮಾಯಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ