ಸರ್ಕಾರದ ಬರಪರಿಹಾರ ಯೋಜನೆಯಡಿ ಪಟ್ಟಣದ ಪಶು ಆರೋಗ್ಯಕೇಂದ್ರದಲ್ಲಿ ಹುಳಿಯಾರು ಹಾಗೂ ಸುತ್ತಮುತ್ತಲ ಹಳ್ಳಿಗಳ ರೈತರಿಗೆ ಜಾನುವಾರುಗಳ ಮೇವಿಗಾಗಿ ಬಿತ್ತನೆ ಬೀಜದ ಜೋಳನ್ನು ಉಚಿತ ವಿತರಣೆ ಗ್ರಾ.ಪಂ.ಅಧ್ಯಕ್ಷೆ ಪುಟ್ಟಿಬಾಯಿ ಶನಿವಾರ ಚಾಲನೆ ನೀಡಿದರು.
ಬರಪರಿಹಾರ ಯೋಜನೆಯಡಿ ಜಾನುವಾರುಗಳ ಮೇವಿಗಾಗಿ ಬಿತ್ತನೆ ಬೀಜದ ಜೋಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಯಿತು.ಗ್ರಾ.ಪಂ.ಅಧ್ಯಕ್ಷೆ ಪುಟ್ಟಿಬಾಯಿ,ತಾ.ಪಂ.ಸದಸ್ಯರಾದ ಕೆಂಕೆರೆ ನವೀನ್,ಜಯಣ್ಣ ಪಶು ವೈಧ್ಯಾಧಿಕಾರಿ ಡಾ||ಮಂಜುನಾಥ್ ಇದ್ದಾರೆ. |
ಈ ಸಂಧರ್ಭದಲ್ಲಿ ಪಶು ವೈಧ್ಯಾಧಿಕಾರಿ ಡಾ||ಮಂಜುನಾಥ್ ಮಾತನಾಡಿ,ಸರ್ಕಾರದವತಿಯಿಂದ ರೈತರಿಗಾಗಿ ಸಾಕಷ್ಟು ಸೌಲಭ್ಯಗಳಿವೆ ಅಂತೆಯೇ ತಮ್ಮ ಪಶು ಇಲಾಖೆವತಿಯಿಂದ ಉಚಿತ ಬಿತ್ತನೆ ಬೀಜ,ರಾಸುಗಳಿಗೆ ಉಚಿತ ಲಸಿಕೆ ಹಾಕುವ ಕಾರ್ಯಕ್ರಮ,ಗೊಬ್ಬರ ವಿತರಣೆಯನ್ನು ಮಾಡಲಾಗುತ್ತಿದೆ. ಕಳೆದ ಎರಡು-ಮೂರು ವರ್ಷಗಳಿಂದ ಈ ಭಾಗದಲ್ಲಿ ಬರಗಾಲ ವ್ಯಾಪಿಸಿದ್ದು ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ,ಮೇವಿಲ್ಲದೆ ರೈತರು ದನಕರುಗಳನ್ನು ಖಾಸಾಯಿ ಖಾನೆಗೆ ದೂಡುತ್ತಿದ್ದಾರೆ.ಇದನ್ನು ಅರಿತ ಸರ್ಕಾರ ಜಾನುವಾರುಗಳಿಗೆ ಅಗತ್ಯವಾಗಿ ಬೇಕಾಗಿರುವ ಮೇವನ್ನು ಬೇಳೆದುಕೊಳ್ಳಲು ರೈತರಿಗೆ ಉಚಿತವಾಗಿ ಮೇವಿಗೆ ಯೋಗ್ಯವಾದ ಜೋಳವನ್ನು ನೀಡುತ್ತಿದೆ.ಈ ಜೋಳವನ್ನು ಭಿತ್ತಿ ಕಟಾವು ಮಾಡಿದ ನಂತರ ಸ್ವಲ್ಪ ನೀರು ಹಾಯಿಸಿದರೆ ಪುನ: ಚಿಗುರುತ್ತದೆ ಎಂದರು. ರಾಸುಗಳಿಗೆ ಬರುವ ಕಲುಬಾಯಿ ರೋಗಕ್ಕೆ ಲಸಿಕೆ ಹಾಕುವ ಕಾರ್ಯಕ್ರಮವಿದ್ದು ಪಟ್ಟಣದಲ್ಲಿ ಮೂರುಕಡೆ ಲಸಿಕಾ ಕೇಂದ್ರಗಳನ್ನು ಸ್ಥಾಪಿಸುತ್ತವೆ ಹಾಗೂ ಹಳ್ಳಿಗಳಿಗೆ ಸ್ವತ: ತಾವೇ ಹೋಗಿ ಲಸಿಕೆ ಹಾಕುತ್ತವೇ. ಪ್ರತಿಯೊಬ್ಬ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಜಾನುವಾರುಗಳನ್ನು ರಕ್ಷಿಸಿಕೊಳ್ಳುವಂತೆ ತಿಳಿಸಿದರು ಹಾಗೂ ಲಸಿಕೆ ಹಾಕುವ ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯ್ತಿಯವರು ಬಹಿರಂಗ ಪ್ರಚಾರ ಮಾಡುವಂತೆ ಕೋರಿದರು.
ತಾ.ಪಂ.ಸದಸ್ಯ ಕೆಂಕೆರೆ ನವೀನ್ ಮಾತನಾಡಿ,ಪ್ರಸ್ತುತ ಜಾನುವಾರುಗಳ ಸಂಖ್ಯೆ ಕ್ಷೀಣಿಸಿದ್ದು,ರೈತರು ವ್ಯವಸಾಯವನ್ನು ಬಿಟ್ಟು ನಗರಗಳತ್ತ ವಲಸೆ ಹೋಗುತ್ತಿದ್ದಾರೆ ಎಂದು ವಿಷಾದಿಸಿದರು. ಬರಗಾಲದಿಂದ ರೈತರು ಹೆಚ್ಚಿನ ಕಷ್ಟದಲ್ಲಿ ಸಿಲುಕಿದ್ದು,ಇತ್ತ ಉತ್ತಮ ಮಳೆಯಾಗದೇ ಬೆಳೆಯು ಇಲ್ಲ,ಜಾನುವಾರುಗಳಿಗೆ ಮೇವು ಇಲ್ಲದಂತಾಗಿ ಪರಿತಪಿಸುತ್ತಿದ್ದಾರೆ ಎಂದರು.ರೈತರು ತಮ್ಮ ಜಾನುವಾರುಗಳಿಗೆ ಯಾವುದೇ ಸಮಸ್ಯೆ ಬಂದರೂ ನಿರ್ಲಕ್ಷಿಸದೆ ತಕ್ಷಣವೇ ಪಶು ವೈದ್ಯರನ್ನು ಭೇಟಿ ಮಾಡಿ ಪಶುಗಳಿಗೆ ಜೌಷದೋಪಚಾರ ಮಾಡಿಸಿ,ಈ ಭಾಗದಲ್ಲಿ ಮಂಜುನಾಥ್ ಅವರಂತಹ ಉತ್ತಮ ಡಾಕ್ಟರ್ ಇರುವುದು ನಮ್ಮೆಲ್ಲರಿಗೂ ಹೆಚ್ಚಿನ ಉಪಯೋಗವಾಗಲಿದೆ ಎಂದರು.
ನೇಪಿಯಲ್ ಕಡ್ಡಿ ಮೇವನ್ನು ಬೆಳೆಯುಲು ಮುಂದಾಗಿರುವ ರೈತರಿಗೆ ಉಚಿತವಾಗಿ ಒಂದು ಫೈಬರ್ ಬಾಂಡ್ಲಿ,ಪಿಕಾಸಿ,ಎರಡು ಚೀಲ ಯೂರಿಯಾ,ಒಂದು ಚೀಲ ಡಿಎಪಿ ಗೊಬ್ಬರವನ್ನು ವಿತರಿಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ಪುಟ್ಟಿಬಾಯಿ,ತಾ.ಪಂ.ಸದಸ್ಯ ಜಯಣ್ಣ ಸೇರಿದಂತೆ ಹುಳಿಯಾರು ಹಾಗೂ ಸುತ್ತಮುತ್ತಲ ಹಳ್ಳಿಗಳ ರೈತರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ