ನಗರ ಪ್ರದೇಶಗಳ ಶಾಲೆಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದ ಶಾಲೆಗಳಲ್ಲಿ ಅಭ್ಯಾಸಿಸುತ್ತಿರುವ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು, ಓದು,ಕ್ರೀಡೆ,ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಕೊಂಡಿರುತ್ತಾರೆ.ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರ್ತಿಸಿ,ಪ್ರೋತ್ಸಾಹಿಸಿ,ಬೆಳೆಸುವ ಕಾರ್ಯವನ್ನು ಹಿರಿಯರಾದ ನಾವು ಮಾಡಬೇಕಿದೆ ಎಂದು ಕನಕದಾಸ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಪ್ಪ ಅಭಿಪ್ರಾಯಪಟ್ಟರು.
ಹುಳಿಯಾರಿನ ಶ್ರೀಕನಕದಾಸ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದವತಿಯಿಂದ ಆಯೋಜಿಸಿದ್ದ ಪ್ರತಿಭಾಪುರಸ್ಕಾರ ಹಾಗೂ 2013-14ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷೆತವಹಿಸಿ ಮಾತನಾಡಿದರು.
ಕನಕದಾಸ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದವತಿಯಿಂದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾಪುರಸ್ಕಾರವನ್ನು ಹಾಗೂ ಸಂಘದ ಕಾರ್ಯದರ್ಶಿ ಶಂಕರ್ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿದರು. |
ವಿದ್ಯಾರ್ಥಿಗಳು ತಾವು ಓದಿದ ಶಾಲೆಯನ್ನು ಎಂದಿಗೂ ಮರೆಯದೇ, ಓದು ಮುಗಿದು ಯಾವುದೋ ಕೆಲಸಕ್ಕೆ ಸೇರಿ ಸಂಬಳ ಪಡೆಯುವ ಹಂತ ತಲುಪಿದಾಗ ತಾನು ಈ ಸ್ಥಾನ ಪಡೆಯಲು ಕಾರಣವಾದ ಶಾಲೆಯ ಬಗ್ಗೆ ಯೋಚಿಸಿ, ತಮ್ಮ ದುಡಿಮೆಯಲ್ಲಿನ ಸ್ವಲ್ಪಭಾಗವನ್ನು ಆ ಶಾಲೆಗೆ ಸಹಾಯ ಮಾಡುವ ವಿಶಾಲ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದರು.ಪ್ರತಿಭೆ ಎಂಬುದು ಎಲ್ಲರಲ್ಲಿಯೂ ಅಡಕವಾಗಿರುತ್ತದೆ ಅದನ್ನು ತೋರ್ಪಡಿಸಬೇಕಾದರೆ ಅಭ್ಯಾಸ ಅತ್ಯಗತ್ಯ, ವಿದ್ಯಾರ್ಥಿ ನಿತ್ಯ ಅಭ್ಯಾಸ ಮಾಡುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಯಾಗಿ ಹೊರಹುಮ್ಮುತ್ತಾರೆ ಎಂದರು. ಇಂದು ಅನೇಕ ವಿದ್ಯಾವಂತ ಯುವಕರು ಹೆಚ್ಚು ಹಣವನ್ನು ಮೋಜು ಮಾಡಲು ಬಳಸುತ್ತಾರೆ, ಆದರೆ ಕನಕದಾಸ ಶಾಲೆಯ ಹಿರಿಯ ವಿದ್ಯಾರ್ಥಿಗಳು ಸಂಘವನ್ನು ರಚಿಸಿಕೊಂಡು ದಾನ,ಧರ್ಮ ಮನೋಭಾವ ಹೊಂದಿ ಯುವ ಮಕ್ಕಳಿಗೆ ಪ್ರೊತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಕನಕದಾಸ ಸಂಸ್ಥೆಯ ಕಾರ್ಯದರ್ಶಿ ಶಿವಪ್ರಕಾಶ್ ಮಾತನಾಡಿ,ಮಕ್ಕಳು ಉತ್ತಮ ಅಂಕಗಳಿಸುವುದು ಎಷ್ಟು ಮುಖ್ಯವೋ ಅಂತೆಯೇ ಸಮಾಜದಲ್ಲಿ ಇತರರಿಗೆ ತೊಂದರೆಕೊಡದೆ,ಸೇವಾ ಮನೋಭಾವನೆಯಿಂದ ಜೀವನ ನಡೆಸಿದರೆ ಪೋಷಕರಿಗೆ,ತಾವು ಓದಿದ ಶಾಲೆಗೆ ಕೀರ್ತಿ ತಂದಂತೆ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಮಸ್ತಾಪ್ ಮತ್ತು ವಿವೇಕ್ ಅವರಿಗೆ ಕನಕದಾಸ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದವತಿಯಿಂದ ಪ್ರತಿಭಾಪುರಸ್ಕಾರವನ್ನು ಹಾಗೂ ಸಂಘದ ಕಾರ್ಯದರ್ಶಿ ಶಂಕರ್ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿದರು. ಶಾಲಾವತಿಯಿಂದ ಮುಖ್ಯ ಶಿಕ್ಷಕಿ ಗಾಯತ್ರಿ ಅವರನ್ನು ಸನ್ಮಾನಿಸಲಾಯಿತು.
ವಾಸವಿ ಶಾಲೆಯ ಮುಖ್ಯ ಶಿಕ್ಷಕಿ ಗಾಯತ್ರಿ ಸಮಾರಂಭದ ಉದ್ಘಾಟಿಸಿದರು.ನಿವೃತ್ತ ಶಿಕ್ಷಕ ತಿಮ್ಮಯ್ಯ,ನಾರಾಯಣಪ್ಪ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಾಜಿ,ಖಜಾಂಜಿ ಶಿವಣ್ಣ,ಸುರೇಶ್,ಪುಷ್ಪಲತಾ,ರಂಗನಾಥ್(ಗೌಡಿ), ತಮ್ಮಯ್ಯ,ಮಂಜು,ಶಶಿಕುಮಾರ್ ಉಪಸ್ಥಿತರಿದ್ದು,ಶಿಕ್ಷಕ ಚಂದ್ರಶೇಖರ್ ಸ್ವಾಗತಿಸಿ,ಜಗದೀಶ್ ನಿರೂಪಿಸಿ,ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ