ಇಂದಿನ ಆಧುನಿಕ ಪ್ರಪಂಚದಲ್ಲಿ ಪ್ರತಿಯೊಂದು ಕ್ಷೇತ್ರವೂ ಪೈಪೂಟಿಯುತವಾಗಿದ್ದು, ಮಕ್ಕಳು ಯಶಸ್ಸು ಗಳಿಸಬೇಕಾದರೆ ಕೇವಲ ತರಗತಿಯಿಂದ ತರಗತಿಗೆ ಕನಿಷ್ಠ ಅಂಕ ಗಳಿಸಿ ತೇರ್ಗಡೆಯಾದರೆ ಸಾದ್ಯವಿಲ್ಲ, ಹೆಚ್ಚಿನ ಅಂಕಗಳಿಸಿದಾಗ ಮಾತ್ರ ಉನ್ನತ ವ್ಯಾಸಂಗಕ್ಕೆ ಹೆಚ್ಚೆಚ್ಚು ಅವಕಾಶಗಳು ತಾವಾಗಿಯೇ ಒದಗಿ ಬರುತ್ತವೆ ಎಂದು ಮುಖಂಡ ಮಹಮ್ಮದ್ ಸಜ್ಜಾದ್ ತಿಳಿಸಿದರು.
ರಂಜಾನ್ ಹಬ್ಬದ ಅಂಗವಾಗಿ ರಾಜ್ ಮಿನರಲ್ಸ್ ವತಿಯಿಂದ ಹುಳಿಯಾರಿನ ಸರ್ಕಾರಿ ಉರ್ದು ಪ್ರೌಢಶಾಲಾ ಮಕ್ಕಳಿಗೆ ಬುಧವಾರ ಉಚಿತವಾಗಿ ನೋಟ್ ಬುಕ್,ಬ್ಯಾಗ್,ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಳಿಯಾರಿನ ಉರ್ದುಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ, ಮುಸ್ಲಿಂ ಸಮುದಾಯದ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ನೊಂದಾಯಿಸುವ ಮೂಲಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚುವಂತೆ ಮಾಡಬೇಕಿದೆ ಎಂದರು.ಅಲ್ಲದೆ ಈ ಶಾಲೆಯಲ್ಲಿ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಮಕ್ಕಳಿಗೆ ನೀಡುತ್ತಿದ್ದು ಹಾಗೂ ದಾನಿಗಳಿಂದ ನೋಟ್ ಬುಕ್ ಸೇರಿದಂತೆ ವಿದ್ಯಾಭ್ಯಾಸಕ್ಕೆ ಅನುಕೂಲವಾದ ಸಾಮಗ್ರಿಗಳನ್ನು ಉಚಿತವಾಗಿ ನೀಡುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಉರ್ದುಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಿ ಎಂದರು. ಪ್ರತಿಯೊಬ್ಬ ವಿದ್ಯಾರ್ಥಿ ತಾನು ಬೆಳೆದು ದೊಡ್ಡವರಾದ ಮೇಲೆ ತಾನು ಓದಿದ ಶಾಲೆಯನ್ನು ಮರೆಯದೇ ತಮ್ಮಿಂದಾಗುವ ಸಹಾಯವನ್ನು ಮಾಡಿ, ಆ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ನೆರವಾಗುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು. ಉತ್ತಮ ಅಂಕಗಳಿಸಿ ಶಾಲೆಗೆ ಕೀರ್ತಿತರುವಂತೆ ಮಕ್ಕಳನ್ನು ಹಾರೈಸಿದರು.
ದಾನಿಗಳಾದ ರಾಜ್ ಮಿನರಲ್ಸ್ ನ ಷಪಿ ಅಹಮದ್ ಮಕ್ಕಳಿಗೆ ನೋಟ್ ಬುಕ್,ಬ್ಯಾಗ್ ವಿತರಿಸಿದರು, ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕ ಚೆನ್ನಿಗರಾಮಯ್ಯ, ಟಿಪ್ಪು ಬ್ಯಾಂಕ್ ನ ಇಮ್ರಾಜ್, ಸ್ಥಳೀಯರಾದ ರಹೀಂ,ಇಮ್ರಾನ್,ಶಿಕ್ಷಕರಾದ ಇರ್ಫಾನ್,ಮುಜಮಿಲ್ ಪಾಷ,ನಿರ್ಮಲ,ವಿಜಯ್ ಕುಮಾರಿ,ಸಲೀಮ್ ಸೇರಿದಂತೆ ಶಾಲಾ ಶಿಕ್ಷಕರು ಉಪಸ್ಥಿತರಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ