ಶಾಲಾ ಶೈಕ್ಷಣಿಕ ಚಟುವಟಿಕೆಯ ಭಾಗವಾಗಿರುವ ಕ್ರಿಡಾಕೂಟದಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡು,ಪ್ರತಿಯೊಂದು ಆಟದಲ್ಲಿ ಉತ್ಸಾಹದಿಂದ ಆಡುತ್ತಾ ಸೋಲು,ಗೆಲುವನ್ನು ಸರಿಸಮನಾಗಿ ತೆಗೆದುಕೊಳ್ಳಬೇಕೆ ಹೊರತು ಸಣ್ಣಪುಟ್ಟ ಕಾರಣಗಳಿಂದಾಗಿ ಕ್ರಿಡಾಪಟುಗಳಾಗಲಿ,ತರಬೇತುದಾರರಾಗಲಿ ದ್ವೇಷ,ಅಸೂಯೆಯ ಭಾವನೆಯನ್ನು ಬೆಳೆಸಿಕೊಳ್ಳಬಾರದೆಂದು ವಾಸವಿ ವಿದ್ಯಾಸಂಸ್ಥೆಯ ಸಹಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್ ಕಿವಿಮಾತು ಹೇಳಿದರು.
ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯ ಮೈದಾನದಲ್ಲಿ ಮಂಗಳವಾರ ಪ್ರಾರಂಭವಾದ ಪ್ರಾಥಮಿಕ ಶಾಲೆಗಳ ಎ ವಿಭಾಗದ ಹೋಬಳಿ ಮಟ್ಟದ ಕ್ರಿಡಾಕೂಟದಲ್ಲಿ ಕ್ರಿಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ,ಅವರು ಮಾತನಾಡಿದರು ,
ಹುಳಿಯಾರಿನ ವಾಸವಿಶಾಲಾ ಮೈದಾನದಲ್ಲಿ ಪ್ರಾರಂಭಗೊಂಡ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಿಗೆ ಸಂಸ್ಥೆಯ ಸಹಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್ ಪ್ರತಿಜ್ಞಾವಿಧಿ ಬೋಧಿಸಿದರು. |
ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಒಂದು ವೇದಿಕೆಯಾಗಿ ಕ್ರೀಡಾಕೂಟ ಬಿಂಬಿತವಾಗಬೇಕು ಹಾಗೂ ಶಿಕ್ಷಕರು ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಉತ್ಸಾಹದ ಮನೋಭಾವ ಮೂಡಿಸಿ ಪ್ರತಿಯೊಂದು ಮಗು ತನಗಿಷ್ಟವಾದ ಒಂದು ಆಟದಲ್ಲಾದರೂ ಸ್ಪರ್ಧಿಸುವಂತೆ ಮಾಡಬೇಕು ಎಂದರು.ಕ್ರೀಡಾಕೂಟದಲ್ಲಿ ಭಾಗವಹಿಸಿರುವ ವಿವಿಧ ಶಾಲೆಯ ಮಕ್ಕಳು ತಾವೆಲ್ಲಾ ಒಂದೇ ಶಾಲಾ ಮಕ್ಕಳು ಎಂದು ಭಾವಿಸಿ ಆಟಗಳನ್ನು ಆಡುತ್ತಾ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕು.ಸ್ಪರ್ಧಾಳುಗಳು ಆಡುವ ಆಟವನ್ನು ಶ್ರದ್ದೆಯಿಂದ ಆಡಿದರೆ ಗೆಲವು ಲಭಿಸುತ್ತದೆ ಎಂದು ಕ್ರಿಡಾಪಟುಗಳನ್ನು ಹಾರೈಸಿದರು.
ಕ್ರೀಡಾಂಗಣದ ಅವಶ್ಯಕತೆ ಇದೆ: ಹುಳಿಯಾರು ಹೋಬಳಿಯಾದ್ಯಂತ ಸಾಕಷ್ಟು ಶಾಲೆಗಳಿದ್ದರೂ ಸಹ ಕೇವಲ ಎರಡು ಮೂರು ಶಾಲೆಗಳು ವಿಶಾಲ ಆಟದ ಮೈದಾನ ಹೊಂದಿವೆ ಹೊರತು ಉಳಿದ ಅನೇಕ ಶಾಲೆಗಳಲ್ಲಿ ವಿಶಾಲ ಆಟದ ಮೈದಾನವಿಲ್ಲ, ಇದನ್ನು ಶಿಕ್ಷಣ ಇಲಾಖೆಯವರು ಗಂಭೀರವಾಗಿ ಪರಿಗಣಿಸಿ ಸುಸಜ್ಜಿತವಾದ ಹಾಗೂ ಕ್ರಿಡಾಕೂಟಗಳನ್ನು ನಡೆಸಲು ಅಗತ್ಯವಾದ ಮೂಲಸೌಕರ್ಯಗಳನ್ನು ಒಳಗೊಂಡಂತಹ ಒಂದು ಕ್ರೀಡಾಂಗಣವನ್ನು ಪಟ್ಟಣದಲ್ಲಿ ಅಗತ್ಯವಾಗಿ,ಶೀಘ್ರದಲ್ಲಿ ನಿರ್ಮಿಸಬೇಕಿದೆ ಎಂದರು.
ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ನರಸಿಂಹಮೂರ್ತಿ ಮಾತನಾಡಿ, ಪ್ರತಿ ಮಗುವು ಆಟದಲ್ಲಿ ನೆಪ ಮಾತ್ರಕ್ಕೆ ಭಾಗವಹಿಸದೆ ಒಂದು ಗುರಿಯನ್ನು ಹೊಂದಿ ಮುನ್ನೆಡೆಯಬೇಕು ಎಂದರು.ಕ್ರಿಡಾಕೂಟದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶಕೊಡದೆ,ಹರ್ಷದಾಯಕವಾಗಿ ಕ್ರಿಡೆಗಳನ್ನು ನಡೆಸುವಂತೆ ಸಿಬ್ಬಂದಿವರ್ಗದವರಿಗೆ ತಿಳಿಸಿದರು.
ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಆರ್.ಲಕ್ಷ್ಮಿಕಾಂತ್ ಕ್ರೀಡಾಕೂಟದ ಅಧ್ಯಕ್ಷತೆವಹಿಸಿದ್ದು, ಸಂಸ್ಥೆಯ ನಿರ್ದೇಶಕ ಅಜೆಯ್ ವಾಲಿಬಾಲನ್ನು ಚಿಮ್ಮುವ ಮೂಲಕ ಕ್ರಿಡಾಕೂದ ಉದ್ಘಾಟನೆ ನೆರವೇರಿಸಿದರು.ಗ್ರಾ.ಪಂ.ಅಧ್ಯಕ್ಷೆ ಪುಟ್ಟಿಬಾಯಿ, ವಾಸವಿ ಶಾಲೆಯ ಮುಖ್ಯಶಿಕ್ಷಕಿ ಗಾಯತ್ರಿ, ಸಿಅರ್.ಪಿ.ಗಳಾದ ಮಹಲಿಂಗಪ್ಪ,ಉಮಾಮಹೇಶ್, ಸಂಸ್ಥೆಯ ಕಾರ್ಯದರ್ಶಿ ರಾಮನಾಥ್, ಪದಾಧಿಕಾರಿಗಳಾದ ರಾಮಕಾಂತ್,ಶ್ರೀನಿವಾಸ್ ಬಿ.ವಿ,ಜ್ಯೋತಿನಾಗರಾಜು ಸೇರಿದಂತೆ ನಾನಾ ಶಾಲೆಗಳ ದೈಹಿಕಶಿಕ್ಷಕರು,ಸಿಬ್ಬಂದಿಯವರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ