ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತುಮಕೂರು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನಿಂದ‌ ಮತ್ತಿಘಟ್ಟದ ಎಳ್ಳೇನಹಳ್ಳಿಯಲ್ಲಿ ವಿಕಸಿತ್ ಭಾರತ್ ಸಂಪರ್ಕ ಯಾತ್ರೆ ಅರಿವು ಕಾರ್ಯಾಗಾರ

ಹುಳಿಯಾರು : ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಎಂಬುದು ಸರ್ಕಾರದ ಯೋಜನೆಗಳನ್ನು ಬ್ಯಾಂಕುಗಳ ಮುಖಾಂತರ   ಜನರಿಗೆ ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದು ಸೇತುವೆಯಂತೆ ಕೆಲಸ ಮಾಡುತ್ತಿದೆ ಎಂದು  ತುಮಕೂರಿನ ಲೀಡ್ ಬ್ಯಾಂಕ್ ಡಿಸ್ಟ್ರಿಕ್ಟ್ ಮ್ಯಾನೇಜರ್  ಪ್ರಕಾಶ್ ತಿಳಿಸಿದರು.                     ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತಿಘಟ್ಟ ಶಾಖೆ ಹಾಗೂ ಆರ್ಥಿಕ ಸಾಕ್ಷರತಾ ಕೇಂದ್ರ ಚಿಕ್ಕನಾಯಕನಹಳ್ಳಿ ‌ ಇವರ ಜಂಟಿ ಆಶ್ರಯದಲ್ಲಿ  ಮತ್ತಿಘಟ್ಟ ಗ್ರಾಮ ಪಂಚಾಯಿತಿ  ವ್ಯಾಪ್ತಿಯಲ್ಲಿ ಬರುವ ಎಳ್ಳೇನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ವಿಕಸಿತ್ ಭಾರತ್ ಸಂಪರ್ಕ ಅಭಿಯಾನ  ಕಾರ್ಯಾಗಾರ ಉದ್ಘಾಟಿಸಿ    ಮಾತನಾಡಿದ ಅವರು ವಿಕಸಿತ್ ಭಾರತ್ ಸಂಪರ್ಕ  ಯಾತ್ರೆ ಅಂಗವಾಗಿ ಕೇಂದ್ರ ಸರ್ಕಾರವು ನಿರ್ದೇಶಕ ವಾಹನಗಳ ಮೂಲಕ ಸರ್ಕಾರದ ಅನೇಕ ಯೋಜನೆಗಳ ಪ್ರಯೋಜನಗಳನ್ನು ಜನರಿಗೆ, ಅದರಲ್ಲೂ ಗ್ರಾಮೀಣ ಭಾಗದವರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜನವರಿ 26-1- 2024  ರವರೆಗೆ ಹಮ್ಮಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡಿದರು.  ಮತ್ತಿಘಟ್ಟ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರಾದ  G.S.ಶ್ರೀ ಹರ್ಷ   ಮಾತನಾಡಿ ನಮ್ಮ ಬ್ಯಾಂಕು 25,000/-ಗಳವರೆಗೆ ಕಾಗದ ರಹಿತವಾಗಿ  ವ್ಯವಹಾರ ಮಾಡುವ ಸೌಲಭ್ಯ ಹೊಂದಿದೆ, ಅಲ್ಲದೆ ನಮ್ಮ ಬ್ಯಾಂಕು ರೂ300000/- ವರೆಗೆಕಡಿಮೆ ಬಡ್ಡಿ ದರದಲ್ಲಿ ಕಿಸಾನ್ ಕ್ರೆಡಿಟ್ ಸಾಲವನ್ನು ನೀಡುತ್ತದೆ

ಧೀಮಂತ ಸಾಹಿತಿಯಾದ ತೀನಂಶ್ರೀ ಅವರ ಜಯಂತಿಯನ್ನು ತಾಲೂಕು ಆಡಳಿತದಿಂದ ಪ್ರತಿ ವರ್ಷ ಆಚರಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಹುಳಿಯಾರು ಘಟಕದಿಂದ ಒತ್ತಾಯ

ಹುಳಿಯಾರು :ನಾಲ್ವಡಿ ಕೃಷ್ಣರಾಜ ಒಡೆಯರ್‌ರವರಿಂದ ಆರು ಚಿನ್ನದ ಪದಕ ಪಡೆದು ಕನ್ನಡ ನಾಡು ನುಡಿಯನ್ನು ಶ್ರೀಮಂತಗೊಳಿಸಿದಂತಹ ಧೀಮಂತ ಸಾಹಿತಿ ತೀ.ನಂ.ಶ್ರೀಕಂಠಯ್ಯನವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೆಮ್ಮೆಯಾಗಿದ್ದು , ತೀನಂಶ್ರೀ ಅವರ ಜಯಂತಿಯನ್ನು ತಾಲೂಕು ಆಡಳಿತದಿಂದ ಪ್ರತಿ ವರ್ಷ ಆಚರಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಒತ್ತಾಯಿಸಿದೆ.           ತಾಲ್ಲೂಕನ್ನು ವಿಶ್ವವ್ಯಾಪಿಯಾಗಿ ಬೆಳಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಆದರೆ ತಾಲ್ಲೂಕು ಆಡಳಿತ ಅವರ ಸಾಧನೆಯನ್ನು ನೆನಪು ಮಾಡಿಕೊಳ್ಳದೆ ಅವರ ಜನ್ಮದಿನದಂದು ಅಂತಹ ಧೀಮಂತ ಸಾಹಿತಿಯವರನ್ನು ಮರೆತಿರುವುದು ಬೇಸರದ ಸಂಗತಿಯಾಗಿದೆ. ತಾಲ್ಲೂಕಿನ ಕಂದಿಕೆರೆ ಹೋಬಳಿ, ತೀರ್ಥಪುರದಲ್ಲಿ 1906 ರ ನವಂಬರ್ 26 ರಂದು ಜನಿಸಿದ್ದು, ಸದರಿ ತಾಲ್ಲೂಕಿನ ಸರ್ಕಾರಿ ಕಛೇರಿಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಸದರಿ ಸಾಹಿತಿಯವರನ್ನು ನೆನಪಿಸುವಂತ ಕಾರ್ಯವನ್ನು ಮಾಡಿ ಪ್ರತಿ ವರ್ಷ ಅವರ ಜನ್ಮದಿನದಂದು ತೀನಂಶ್ರೀರವರ ಜನ್ಮ ದಿನವನ್ನು ಸ್ಮರಿಸಬೇಕು ಎಂದು ಎಬಿವಿಪಿ ಒತ್ತಾಯಿಸಿದೆ 2005-06 ರಲ್ಲಿ ನಡೆದ ತೀನಂಶ್ರೀ ಶತಮಾನೋತ್ಸವ ಸಂದರ್ಭದಲ್ಲಿ  ನಿರ್ಮಿಸಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ತೀನಂಶ್ರೀ ರವರ ಹೆಸರನ್ನು ಇಡಲು ನಿರ್ಲಕ್ಷಿಸಲಾಗಿದೆ. ಸದರಿ ಗ್ರಾಮದಲ್ಲಿ ತೀನಂಶ್ರೀ ಭವನ ನಿರ್ಮಿಸಲು ನಿವೇಶನ ನೀಡಿದರೂ ಇದುವರೆವಿಗೂ ಯಾವ ಕಾಮಗಾರಿಯೂ ಸಹ ನಡೆದಿಲ್ಲ. ಆದ್ದರ

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ. ಕೃಷ್ಣಾಬಾಯಿ ಹಾಗಲವಾಡಿ

ದಿನಾಂಕ 18 &1 9 ಜನವರಿ 2024 ರಂದು ಹುಳಿಯಾರಿನ ಎಂ ಪಿ ಎಸ್ ಶಾಲಾ ಮೈದಾನದಲ್ಲಿ ಆಯೋಜಿಸಿರುವ 11ನೇ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಂಬಂಧವಾಗಿ ಹುಳಿಯಾರಿನಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷರಾದ ಎಂ.ಎಸ್.ರವಿಕುಮಾರ್ ಕಟ್ಟೆಮನೆಯವರು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಪ್ರೊಫೆಸರ್ ಕೃಷ್ಣಾಬಾಯಿ ಹಾಗಲವಾಡಿ ಅವರನ್ನು ಜಿಲ್ಲಾ ಕಸಾಪ  ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಯ್ಯನವರ ಸೂಚನೆಯ ಮೇರೆಗೆ ಘೋಷಿಸಿದರು.                 ಸಮ್ಮೇಳನದ ಉದ್ಘಾಟನೆಗೆ ಅರುಂಧತಿನಾಗ್,ಡಾ. ಕಮಲ ಹಂಪನಾ ಇವರಲ್ಲಿ ಒಬ್ಬರನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ, ಹಾಗೆಯೇ ಸಮ್ಮೇಳನದ ಪೂರ್ಣವಲೋಕನ ಹಾಗು ಸಮಾರೋಪಕ್ಕೆ ಪ್ರೊ ಎಸ್.ಜಿ. ಸಿದ್ದರಾಮಯ್ಯ, ಡಾ.ನಟರಾಜ್ ಹುಳಿಯಾರ್ ಅವರನ್ನು ಆಮಂತ್ರಿಸಲಾಗುವುದು ಎಂದು ತಿಳಿಸಿದರು.   ಸಮ್ಮೇಳನದ ರೂಪರೇಶೆಯ ಬಗ್ಗೆ ವಿವರಿಸಿದ ತಾಲ್ಲೂಕು ಕಸಾಪ ಗೌರವ ಸಂಘಟನಾ ಕಾರ್ಯದರ್ಶಿ ಹಾಗು ಸಮ್ಮೇಳನಗಳ ವಿಷಯ ರೂಪಣಾ ಸಮಿತಿ ಪ್ರಧಾನ ಸಂಚಾಲಕರಾದ ಸಿ ಗುರುಮೂರ್ತಿ ಕೊಟ್ಟಿಗೆಮನೆಯವರು   ಇಡೀ ಸಮ್ಮೇಳನವು 'ಹಳ್ಳಿಕೇರಿ - ದೇಸಿ ಸಂಸ್ಕೃತಿ' ಆಶಯವನ್ನು ಹೊಂದಿ ಆಯೋಜಿಸಲಾಗಿದೆ ಎಂದು ತಿಳಿಸಿದರು. ಕಲೆ ಸಾಹಿತ್ಯ, ಹಳ್ಳಿ-ಕೇರಿ- ಕುಲಕಸುಬು, ಬೇಸಾಯ ಬದುಕು, ಹುಳಿಯಾರಿನ ಸಮಗ್ರತೆ, ಎಂಬ ವಿಷಯಗಳನ್ನು ಆಧರಿಸಿ ನಾಲ್ಕು ಗೋಷ್ಠಿಗಳು. ಅಸಂಘ

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023-24ನೆಯ ಸಾಲಿನ ಶೈಕ್ಷಣಿಕ ವರ್ಷದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರತಿಭಾ ದಿನ ಆಚರಣೆ

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ   2023-24ನೆಯ ಸಾಲಿನ ಶೈಕ್ಷಣಿಕ ವರ್ಷದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ದಿನವನ್ನು ಹಮ್ಮಿಕೊಳ್ಳಲಾಗಿತ್ತು.  ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹೆಚ್.ಬಿ. ಕುಮಾರಸ್ವಾಮಿ ಅವರು  ಅಸತೋಮ ಸದ್ಗಮಯ ತಮಸೋಮ ಜೋತಿರ್ಗಮಯ ಎಂಬ ಮಾತಿನಂತೆ ಇಂದಿನ ಸಮಾರಂಭದಲ್ಲಿ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ್ದೇವೆ. ಅದೇ ರೀತಿ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲೂ ಬೆಳಕಿನೆಡೆಗೆ ಸಾಗಬೇಕು. ಬೇರೆಯವರ ಬದುಕಿನಲ್ಲೂ ಅಷ್ಟೇ ನಾವು ಬೆಳಕಾಗಿರಬೇಕೇ ಹೊರತು ನಮ್ಮಿಂದ ಯಾರಿಗೂ ತೊಂದರೆಯಾಗಬಾರದು ಎಂದು ಕಿವಿಮಾತು ಹೇಳಿದರು.                                ಓದು ಬರಹದ ಜೊತೆಗೆ ಕಾಲೇಜಿನಲ್ಲಿ ನಡೆಯುವ ಪಠ್ಯಪೂರಕ ಅಂಶಗಳಾದ ಎನ್.ಎಸ್.ಎಸ್., ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ ಕ್ರಾಸ್, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಪರಿಪೂರ್ಣ ವ್ಯಕ್ತಿತ್ವವನ್ನು‌ ನಿಮ್ಮದಾಗಿಸಿಕೊಳ್ಳಬಹುದು, ಜೊತೆಗೆ ಬದುಕಿನಲ್ಲಿ ನೈತಿಕ ಮೌಲ್ಯಗಳನ್ನೂ ಅಳವಡಿಸಿಕೊಳ್ಳುವುದು ಬಹಳಮುಖ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವೀರಣ್ಣ ಎಸ್.ಸಿ.

ತಿಮ್ಮನಹಳ್ಳಿಯಲ್ಲಿ ಸಾಮೂಹಿಕ ಶ್ರೀ ಲಕ್ಷ್ಮಿ ಪೂಜಾ ಕಾರ್ಯಕ್ರಮ

"ಮಹಿಳೆಯರು ತಮ್ಮ ಸ್ವಾವಲಂಬಿ ಬದುಕು ನಡೆಸಲು ಉಳಿತಾಯ ಮನೋಭಾವನೆ ಮೂಡಿಸಿದ್ದೆ ಧರ್ಮಸ್ಥಳ ಸಂಸ್ಥೆ " ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನದ ಜಗದ್ಗುರು ಡಾ. ಶಾಂತವೀರ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.                    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಿಮ್ಮನಹಳ್ಳಿಯಲ್ಲಿ ನಡೆದ ಶ್ರೀಸಾಮೂಹಿಕ ಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.   ಸ್ವಾಮೀಜಿಯವರು ಮಾತನಾಡಿ " ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ  ನಡೆಯುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜನರಿಗೆ ನಿರಂತರವಾಗಿ ಆರ್ಥಿಕ ಜಾಗೃತಿ ಮಹಿಳಾ ಸಬಲೀಕರಣ ಸ್ವಉದ್ಯೋಗಕ್ಕಾಗಿ ಪ್ರೇರಣೆ ಮಾಡುವ ಮೂಲಕ ಜನರಿಗೆ ಶಕ್ತಿ ತುಂಬಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇಂತಹ ಧಾರ್ಮಿಕ ಆಚರಣೆ ಮೂಲಕ ಜನರಲ್ಲಿ ಸಂಘಟನಾ ಮನೋಭಾವ ಮೂಡಿಸುವ ಅವರಲ್ಲಿ ಧರ್ಮ ಜಾಗೃತಿ  ಮೂಡಿಸುವ ಕಾರ್ಯಕ್ರಮ ಮಾಡುತ್ತಿದೆ. ಈ ಬಗ್ಗೆ ಜನರ ಸಹಕಾರ ಇಂತಹ ಯೋಜನೆಗಳಿಗೆ ಅತ್ಯಗತ್ಯವಾಗಿದೆ. " ಎಂದು ಅಭಿಮತ ವ್ಯಕ್ತಪಡಿಸಿದರು. "ಕುಡಿತದಿಂದ ಎಷ್ಟೋ ಕುಟುಂಬಗಳು ಅವಸಾನ

ಹುಳಿಯಾರಿನ ಬಿ.ಎಂ.ಎಸ್. ಪದವಿ ಕಾಲೇಜಿನಲ್ಲಿ ಕನ್ನಡ ನಾಡು-ನುಡಿ ಕುರಿತ‌ ಗೀತೆಗಳ ಗಾಯನ ಸ್ಪರ್ಧೆ

ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಳಿಯಾರು-ಕೆಂಕೆರೆಯಲ್ಲಿ ಕರ್ನಾಟಕ ಸಂಭ್ರಮ - ೫೦ರ ಪ್ರಯುಕ್ತ, "ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ" ಎಂಬ ಘೋಷವಾಕ್ಯದೊಂದಿಗೆ "ಕನ್ನಡ ನಾಡು-ನುಡಿ ಕುರಿತ ಗೀತೆಗಳ ಗಾಯನ ಸ್ಪರ್ಧೆ"ಯನ್ನು ಏರ್ಪಡಿಸಲಾಗಿತ್ತು.   ಈ ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ಮತ್ತು ಸಾಂಸ್ಕೃತಿಕ ವಿಭಾಗಗಳ ವತಿಯಿಂದ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.                      ಕಾರ್ಯಕ್ರಮದ ಸಂಚಾಲಕರೂ, ಕನ್ನಡ ವಿಭಾಗದ ಮುಖ್ಯಸ್ಥರೂ ಆದ ಡಾ. ಮೋಹನ್ ಕುಮಾರ್ ಮಿರ್ಲೆ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕನ್ನಡವನ್ನು ‌ನಮ್ಮ ದಿನನಿತ್ಯದ ಎಲ್ಲಾ ಸಂದರ್ಭಗಳಲ್ಲಿಯೂ ಬಳಸುವುದರಿಂದ ಉಳಿಸಿ ಬೆಳೆಸಬಹುದು. ಕನ್ನಡದ ಮೇಲಿನ ಅಭಿಮಾನವನ್ನು ಕನ್ನಡದಲ್ಲಿ ಮಾತನಾಡುವ, ಬರೆಯುವ ಮೂಲಕ ವ್ಯಕ್ತಪಡಿಸುವ ಹಾಗೆಯೇ ಕನ್ನಡ ಗೀತೆಗಳನ್ನು ಹಾಡುವ ಮೂಲಕವೂ ವ್ಯಕ್ತಪಡಿಸಬಹುದು. ಅಂತಹ ಒಂದು ಕಾರ್ಯಕ್ರಮ ಇದಾಗಿದ್ದು, ಕನ್ನಡದ ಮೇಲಿನ ಅಭಿಮಾನ ನಮ್ಮಲ್ಲಿ ಯಾವತ್ತೂ ಸ್ಥಾಯಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಪ್ರೊ. ವೀರಣ್ಣ ಎಸ್.ಸಿ. ಅವರು ಮಾತನಾಡಿ ಇದೊಂದು ಅಪರೂಪದ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳ ಭಾಗವಹಿಸುವ

ಹುಳಿಯಾರು-ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ

ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ ಇಂದಿಗೆ 50 ವರ್ಷಗಳು ಸಂದಿಸುವ ಈ ಹೊತ್ತಿನಲ್ಲಿ “ಕರ್ನಾಟಕ ಸಂಭ್ರಮ - 50”, “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಘೋಷವಾಕ್ಯದೊಂದಿಗೆ ಹುಳಿಯಾರಿನ ಬಿ.ಎಂ.ಎಸ್. ಕಾಲೇಜಿನಲ್ಲಿ ಇಂದು ಅದ್ದೂರಿಯಾಗಿ 62ನೆಯ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.            ಮೊದಲಿಗೆ ರಾಷ್ಟ್ರಗೀತೆ, ನಾಡಗೀತೆಯನ್ನು ಹಾಡಿ, ನಂತರ ಕನ್ನಡ ಮಾತೆ ಭುವನೇಶ್ವರಿದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.             ತದನಂತರ ಕನ್ನಡದ ಪ್ರಸಿದ್ಧ ಕವಿಗಳಾದ ಹುಯಿಲಗೋಳ ನಾರಾಯಣರಾಯರು, ಕುವೆಂಪು, ದ.ರಾ.ಬೇಂದ್ರೆ, ಸಿದ್ದಯ್ಯ ಪುರಾಣಿಕ ಮತ್ತು ಚನ್ನವೀರ ಕಣವಿಯವರು ರಚಿಸಿರುವ, ಸರ್ಕಾರ ನಿಗದಿಪಡಿಸಿರುವ, ಒಟ್ಟು 5 ಕನ್ನಡ ಗೀತೆಗಳನ್ನು ಹಾಡುವ ಮೂಲಕ ಕನ್ನಡಾಂಬೆಗೆ ನುಡಿನಮನವನ್ನು ಸಲ್ಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಪ್ರೊ. ವೀರಣ್ಣ ಎಸ್.ಸಿ . ಅವರು ಮಾತನಾಡಿ ನಮ್ಮ ನಮ್ಮ ಕಾರ್ಯವನ್ನು ಭಾರ ಎಂದು ಭಾವಿಸದೆ ವಚನಕಾರರ “ಕಾಯಕವೇ ಕೈಲಾಸ” ಎಂಬ ನುಡಿಯಂತೆ ಮನಃಪೂರ್ವಕವಾಗಿ ಮಾಡಿದರೆ, ಅದೇ ನಾವು ನಮ್ಮ ನಾಡಿಗೆ ಸಲ್ಲಿಸಬಹುದಾದ ಸೇವೆ ಎಂದು ಅಭಿಪ್ರಾಯಪಟ್ಟರು.         ಅದಕ್ಕೂ ಮೊದಲು ಪ್ರಾಸ್ತಾವಿಕ ನುಡಿಗಳನ್ನು ಆಡಿದ ಕನ್ನಡ ಉಪನ್ಯಾಸಕರಾದ ಶ್ರೀ ಚಂದ್ರಹಾಸ್ ಬಿ.ಆರ್ . ಅವರು ಕನ್ನಡ ರಾಜ್ಯೋತ್ಸವ ಆಚರಣೆಯ ಹಿನ್ನೆಲೆ ಮತ್ತ

ಮತಿಘಟ್ಟದಲ್ಲಿ ಸಾಮೂಹಿಕ ಲಕ್ಷ್ಮಿ ಪೂಜಾ ಕಾರ್ಯಕ್ರಮ

ಹುಳಿಯಾರು : ತಾಲೂಕಿನ ಮತಿಘಟ್ಟದ ಶ್ರೀ ಜಯಭಾರತಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ಬಿ ಸಿ ಟ್ರಸ್ಟ್, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತಿಘಟ್ಟ ವಲಯ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ, ಗಣ್ಯರ ಸಹಕಾರದೊಂದಿಗೆ ಸಾಮೂಹಿಕ ಲಕ್ಷ್ಮಿ ಪೂಜಾ ಕಾರ್ಯಕ್ರಮ ಆಚರಿಸಲಾಯಿತು. ಕುಪ್ಪೂರು ತಮ್ಮಡಿಹಳ್ಳಿ ವಿರಕ್ತ ಮಹಾ ಸಂಸ್ಥಾನಮಠದ ಡಾ. ಅಭಿನವ ಮಲ್ಲಿಕಾರ್ಜುನಾ ದೇಶಿಕೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿ ಮಾತನಾಡಿದರು. ಮತಿಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಗೀನಾ.ಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು . ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಪ್ರೇಮಾನಂದ್ ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಲ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಠಲಮ್ಮ, ಬರಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀ ಗಣೇಶ್ ,ಮಮತಾ, ಸಿದ್ದರಾಮಯ್ಯ, ಮತಿಘಟ್ಟ ಗ್ರಾಮ ಪಂಚಾಯಿತಿ ಸದಸ್ಯರುಗಳು , ಬರಗೂರು ಗ್ರಾಮ ಪಂಚಾಯಿತಿ ಪಿಡಿಒ ಗೌರಮ್ಮ, ಮತಿಘಟ್ಟ ವಲಯ ಮೇಲ್ವಿಚಾರಕಿ ಗಾಯಿತ್ರಿ, ವಲಯ ಒಕ್ಕೂಟದ ಎಲ್ಲಾ ಅಧ್ಯಕ್ಷರುಗಳು- ಪದಾಧಿಕಾರಿಗಳು, ಹಾಲು ಉತ್ಪಾದಕ ಸಂಘಗಳ ಅಧ್ಯಕ್ಷರು, ಎಲ್ಲಾ ಸೇವಾ ಪ್ರತಿನಿಧಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.