ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಿಮ್ಮನಹಳ್ಳಿಯಲ್ಲಿ ನಡೆದ ಶ್ರೀಸಾಮೂಹಿಕ ಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಸ್ವಾಮೀಜಿಯವರು ಮಾತನಾಡಿ " ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜನರಿಗೆ ನಿರಂತರವಾಗಿ ಆರ್ಥಿಕ ಜಾಗೃತಿ ಮಹಿಳಾ ಸಬಲೀಕರಣ ಸ್ವಉದ್ಯೋಗಕ್ಕಾಗಿ ಪ್ರೇರಣೆ ಮಾಡುವ ಮೂಲಕ ಜನರಿಗೆ ಶಕ್ತಿ ತುಂಬಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇಂತಹ ಧಾರ್ಮಿಕ ಆಚರಣೆ ಮೂಲಕ ಜನರಲ್ಲಿ ಸಂಘಟನಾ ಮನೋಭಾವ ಮೂಡಿಸುವ ಅವರಲ್ಲಿ ಧರ್ಮ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುತ್ತಿದೆ. ಈ ಬಗ್ಗೆ ಜನರ ಸಹಕಾರ ಇಂತಹ ಯೋಜನೆಗಳಿಗೆ ಅತ್ಯಗತ್ಯವಾಗಿದೆ. " ಎಂದು ಅಭಿಮತ ವ್ಯಕ್ತಪಡಿಸಿದರು.
"ಕುಡಿತದಿಂದ ಎಷ್ಟೋ ಕುಟುಂಬಗಳು ಅವಸಾನದ ದಾರಿ ತುಳಿದಾಗ ಅವರನ್ನು ಮದ್ಯವರ್ಜನಾ ಶಿಬಿರ ಕ್ಕೆ ಸೇರಿಸಿ ಮುಖ್ಯ ವಾಹಿನಿಗೆ ಕರೆ ತರುವಂತಹ ಕೆಲಸ ಮಾಡಿದ್ದು ಇದೇ ಧರ್ಮಸ್ಥಳ ಸಂಸ್ಥೆ. ಅನೇಕರ ಬದುಕು ಹಸನಾಗಲು ಕಾರಣ ಸಂಸ್ಥೆ ನೀಡುವ ಮಾಹಿತಿ ಮಾರ್ಗದರ್ಶನ ಅದಕ್ಕೆ ಎಲ್ಲರೂ ಚಿರಋಣಿ ಆಗಿರಬೇಕು." ಎಂದು ಅವರು ಸಲಹೆ ನೀಡಿದರು.
ಯೋಜನೆಯ ತುಮಕೂರು ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಯವರು ಯೋಜನೆ ನಡೆದು ಬಂದ ದಾರಿ ಹಾಗೂ ಈ ಧಾರ್ಮಿಕ ಆಚರಣೆಯ ಮಹತ್ವದ ಬಗ್ಗೆ ಮತ್ತು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. "ಸ್ವ ಸಹಾಯ ಸಂಘ ಕಾರ್ಯಕ್ರಮ, ಪ್ರಗತಿ ನಿಧಿ ಕಾರ್ಯಕ್ರಮ, ಪ್ರಗತಿ ರಕ್ಷಾ ಕಾರ್ಯಕ್ರಮ, ವಿಮಾ ಯೋಜನೆ ಕಾರ್ಯಕ್ರಮ, ಸುಜ್ಞಾನದ ಶಿಷ್ಯವೇತನ ಕಾರ್ಯಕ್ರಮ, ಮಧ್ಯವರ್ಜನ ಶಿಬಿರ, ರೈತ ಕ್ಷೇತ್ರ ಪಾಠಶಾಲೆ, ಜ್ಞಾನವಿಕಾಸ ಕಾರ್ಯಕ್ರಮ, ಹಿಂದು ರುದ್ರ ಭೂಮಿ ಅಭಿವೃದ್ಧಿ ಶುದ್ಧಗಂಗಾ ಕಾರ್ಯಕ್ರಮ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಜನಮಂಗಲ ಕಾರ್ಯಕ್ರಮ, ಸಾಮಾನ್ಯ ಸೇವಾ ಕೇಂದ್ರ ಮೂಲಕ ಕೇಂದ್ರ ಮತ್ತು ರಾಜ್ಯಸರಕಾರದ ಅನೇಕ ಕಾರ್ಯಕ್ರಮಗಳನ್ನು ತಲುಪಿಸುವ ಕೆಲಸ ಮಾಡುತ್ತಿದೆ. ಈ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಲು ಜನರ ಸಹಭಾಗಿತ್ವ ಅಗತ್ಯ "ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷರಾದ ಉಮೇಶ್ ಅವರು ವಹಿಸಿದ್ದರು.
ತಿಮ್ಮನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾರ್ವತಮ್ಮ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಂಜಮ್ಮ,ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ್ ಸ್ಥಳೀಯ ಜನಪ್ರತಿನಿಧಿಗಳು ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.ತಾಲೂಕು ಯೋಜನಾಧಿಕಾರಿ ಪ್ರೇಮಾನಂದ ಯಲ್. ಬಿ. ಸರ್ವರನ್ನು ಸ್ವಾಗತ ಮಾಡಿದರು.ವಲಯ ಮೇಲ್ವಿಚಾರಕಿ ತಿಪ್ಪಿರಮ್ಮನವರು ತಮ್ಮ ಸಾಧನ ವರದಿಯನ್ನು ಓದಿದರು . ಕೃಷಿ ಮೇಲ್ವಿಚಾರಕ ಯೋಗೀಶ್ ರವರು ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ಸಣ್ಣಲಿಂಗಯ್ಯ ಧನ್ಯವಾದಗೈದರು. ತಾಲೂಕು ನೋಡಲ್ ಅಧಿಕಾರಿ ಅನಿಲ್, ರೈತ ಉತ್ಪಾದಕ ಕಂಪನಿಯ ಜಯರಾಮ್, ಸೇವಾ ಪ್ರತಿನಿಧಿಗಳು, ಸಿಎಸ್ಸಿ ಸೇವಾದಾರರು ಸಹಕರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ