ಧೀಮಂತ ಸಾಹಿತಿಯಾದ ತೀನಂಶ್ರೀ ಅವರ ಜಯಂತಿಯನ್ನು ತಾಲೂಕು ಆಡಳಿತದಿಂದ ಪ್ರತಿ ವರ್ಷ ಆಚರಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಹುಳಿಯಾರು ಘಟಕದಿಂದ ಒತ್ತಾಯ
ತಾಲ್ಲೂಕನ್ನು ವಿಶ್ವವ್ಯಾಪಿಯಾಗಿ ಬೆಳಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಆದರೆ ತಾಲ್ಲೂಕು ಆಡಳಿತ ಅವರ ಸಾಧನೆಯನ್ನು ನೆನಪು ಮಾಡಿಕೊಳ್ಳದೆ ಅವರ ಜನ್ಮದಿನದಂದು ಅಂತಹ ಧೀಮಂತ ಸಾಹಿತಿಯವರನ್ನು ಮರೆತಿರುವುದು ಬೇಸರದ ಸಂಗತಿಯಾಗಿದೆ. ತಾಲ್ಲೂಕಿನ ಕಂದಿಕೆರೆ ಹೋಬಳಿ, ತೀರ್ಥಪುರದಲ್ಲಿ 1906 ರ ನವಂಬರ್ 26 ರಂದು ಜನಿಸಿದ್ದು, ಸದರಿ ತಾಲ್ಲೂಕಿನ ಸರ್ಕಾರಿ ಕಛೇರಿಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಸದರಿ ಸಾಹಿತಿಯವರನ್ನು ನೆನಪಿಸುವಂತ ಕಾರ್ಯವನ್ನು ಮಾಡಿ ಪ್ರತಿ ವರ್ಷ ಅವರ ಜನ್ಮದಿನದಂದು ತೀನಂಶ್ರೀರವರ ಜನ್ಮ ದಿನವನ್ನು ಸ್ಮರಿಸಬೇಕು ಎಂದು ಎಬಿವಿಪಿ ಒತ್ತಾಯಿಸಿದೆ
2005-06 ರಲ್ಲಿ ನಡೆದ ತೀನಂಶ್ರೀ ಶತಮಾನೋತ್ಸವ ಸಂದರ್ಭದಲ್ಲಿ ನಿರ್ಮಿಸಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ತೀನಂಶ್ರೀ ರವರ ಹೆಸರನ್ನು ಇಡಲು ನಿರ್ಲಕ್ಷಿಸಲಾಗಿದೆ. ಸದರಿ ಗ್ರಾಮದಲ್ಲಿ ತೀನಂಶ್ರೀ ಭವನ ನಿರ್ಮಿಸಲು ನಿವೇಶನ ನೀಡಿದರೂ ಇದುವರೆವಿಗೂ ಯಾವ ಕಾಮಗಾರಿಯೂ ಸಹ ನಡೆದಿಲ್ಲ. ಆದ್ದರಿಂದ ಇವರ ಜನ್ಮ ದಿನವನ್ನು ತಾಲ್ಲೂಕಿನಾಂದ್ಯತ ಆಚರಿಸಿ, ಶಾಲಾ ಕಾಲೇಜುಗಳಲ್ಲಿ ಇನ್ನು ಮುಂದೆ ಆಚರಿಸುವಂತೆ ಮತ್ತು ಮುಂದೆ ತಾಲ್ಲೂಕಿನಲ್ಲಿ ಒಂದು ಕೋಚಿಂಗ್ ಸೆಂಟರ್ ತೆಗೆದು ಅದಕ್ಕೆ ತೀನಂಶ್ರೀ ಎಂಬ ಹೆಸರನ್ನು ಇಡುವಂತೆ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಎಬಿಪಿವಿ ಒತ್ತಾಯಿಸಿದೆ
ABVP ಚಿಕ್ಕನಾಯಕನಹಳ್ಳಿ ತಾಲೂಕು ಸಂಚಾಲಕರಾದ ದೀಪಕ್ ಕೆಂಕೆರೆ, ಹುಳಿಯಾರು ನಗರ ಸಹ ಕಾರ್ಯದರ್ಶಿ ಶಾಂತಕುಮಾರ್ ,ಕಾರ್ಯಕರ್ತರಾದ ಗಜೇಂದ್ರ, ಸಂಜಯ್ ,ಸಿದ್ದೇಶ್ ,ಮಹೇಶ್ ಇತರರಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ