ಸಮ್ಮೇಳನದ ಉದ್ಘಾಟನೆಗೆ ಅರುಂಧತಿನಾಗ್,ಡಾ. ಕಮಲ ಹಂಪನಾ ಇವರಲ್ಲಿ ಒಬ್ಬರನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ, ಹಾಗೆಯೇ ಸಮ್ಮೇಳನದ ಪೂರ್ಣವಲೋಕನ ಹಾಗು ಸಮಾರೋಪಕ್ಕೆ ಪ್ರೊ ಎಸ್.ಜಿ. ಸಿದ್ದರಾಮಯ್ಯ, ಡಾ.ನಟರಾಜ್ ಹುಳಿಯಾರ್ ಅವರನ್ನು ಆಮಂತ್ರಿಸಲಾಗುವುದು ಎಂದು ತಿಳಿಸಿದರು.
ಸಮ್ಮೇಳನದ ರೂಪರೇಶೆಯ ಬಗ್ಗೆ ವಿವರಿಸಿದ ತಾಲ್ಲೂಕು ಕಸಾಪ ಗೌರವ ಸಂಘಟನಾ ಕಾರ್ಯದರ್ಶಿ ಹಾಗು ಸಮ್ಮೇಳನಗಳ ವಿಷಯ ರೂಪಣಾ ಸಮಿತಿ ಪ್ರಧಾನ ಸಂಚಾಲಕರಾದ ಸಿ ಗುರುಮೂರ್ತಿ ಕೊಟ್ಟಿಗೆಮನೆಯವರು ಇಡೀ ಸಮ್ಮೇಳನವು 'ಹಳ್ಳಿಕೇರಿ - ದೇಸಿ ಸಂಸ್ಕೃತಿ' ಆಶಯವನ್ನು ಹೊಂದಿ ಆಯೋಜಿಸಲಾಗಿದೆ ಎಂದು ತಿಳಿಸಿದರು. ಕಲೆ ಸಾಹಿತ್ಯ, ಹಳ್ಳಿ-ಕೇರಿ- ಕುಲಕಸುಬು, ಬೇಸಾಯ ಬದುಕು, ಹುಳಿಯಾರಿನ ಸಮಗ್ರತೆ, ಎಂಬ ವಿಷಯಗಳನ್ನು ಆಧರಿಸಿ ನಾಲ್ಕು ಗೋಷ್ಠಿಗಳು. ಅಸಂಘಟಿತ ಕಾರ್ಮಿಕ ಹಾಗು ಹಳ್ಳಿಗಾಡಿನ ಶಿಕ್ಷಣಗಳ ಸಮಸ್ಯೆಯ ಮೇಲೆ ಒಂದು ವಿಶೇಷ ಉಪನ್ಯಾಸ ಎರಡು ಕವಿಗೋಷ್ಠಿಗಳನ್ನು ಸೇರಿಸಿದಂತೆ ಒಟ್ಟು ಏಳು ಗೋಷ್ಠಿಗಳನ್ನು ಸಮ್ಮೇಳನದಲ್ಲಿ ಆಯೋಜಿಸಲು ಆಲೋಚಿಸಲಾಗಿದೆ ಎಂದು ತಿಳಿಸಿದರು.
ಹುಳಿಯಾರು ಹೋಬಳಿ ಕಸಾಪ ಅಧ್ಯಕ್ಷರಾದ ನಾರಾಯಣಪ್ಪನವರು ಸಮ್ಮೇಳನದ ಸಿದ್ಧತೆಗಳ ಬಗ್ಗೆ ವಿವರಿಸಿ ಹುಳಿಯಾರಿನ ಎಲ್ಲಾ ಕನ್ನಡ ಮನಸುಗಳು ಈ ಸಂಬಂಧ ಬಾಗಿಗಳಾಗಬೇಕೆಂದು ಕೋರಿದರು.
ಹುಳಿಯಾರು ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಹು.ಕ.ರಾಮಯ್ಯ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರೆಲ್ಲರಿಗೂ ಆಹ್ವಾನ ಪತ್ರಿಕೆಯನ್ನು ತಲುಪಿಸಲಾಗುವುದು. ಸರ್ವರು ಭಾಗವಹಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಕೆಪಿಎಸ್ ನ ಪ್ರಾಂಶುಪಾಲರಾದ ಕೃಷ್ಣಮೂರ್ತಿ, ತಾಲೂಕು ಕಸಾಪ ಪ್ರಧಾನ ಸಂಚಾಲಕರಾದ ದಯಾನಂದ್, ಹುಳಿಯಾರ್ ಹೋಬಳಿ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಯಲ್ಲಪ್ಪ, ಹಿರಿಯರಾದ ತಮ್ಮಯ್ಯ ಮುಂತಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ