ಈ ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ಮತ್ತು ಸಾಂಸ್ಕೃತಿಕ ವಿಭಾಗಗಳ ವತಿಯಿಂದ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಚಾಲಕರೂ, ಕನ್ನಡ ವಿಭಾಗದ ಮುಖ್ಯಸ್ಥರೂ ಆದ ಡಾ. ಮೋಹನ್ ಕುಮಾರ್ ಮಿರ್ಲೆ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕನ್ನಡವನ್ನು ನಮ್ಮ ದಿನನಿತ್ಯದ ಎಲ್ಲಾ ಸಂದರ್ಭಗಳಲ್ಲಿಯೂ ಬಳಸುವುದರಿಂದ ಉಳಿಸಿ ಬೆಳೆಸಬಹುದು. ಕನ್ನಡದ ಮೇಲಿನ ಅಭಿಮಾನವನ್ನು ಕನ್ನಡದಲ್ಲಿ ಮಾತನಾಡುವ, ಬರೆಯುವ ಮೂಲಕ ವ್ಯಕ್ತಪಡಿಸುವ ಹಾಗೆಯೇ ಕನ್ನಡ ಗೀತೆಗಳನ್ನು ಹಾಡುವ ಮೂಲಕವೂ ವ್ಯಕ್ತಪಡಿಸಬಹುದು. ಅಂತಹ ಒಂದು ಕಾರ್ಯಕ್ರಮ ಇದಾಗಿದ್ದು, ಕನ್ನಡದ ಮೇಲಿನ ಅಭಿಮಾನ ನಮ್ಮಲ್ಲಿ ಯಾವತ್ತೂ ಸ್ಥಾಯಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಪ್ರೊ. ವೀರಣ್ಣ ಎಸ್.ಸಿ. ಅವರು ಮಾತನಾಡಿ ಇದೊಂದು ಅಪರೂಪದ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳ ಭಾಗವಹಿಸುವಿಕೆ ಮತ್ತು ಕನ್ನಡ ಪ್ರೇಮ ಸಂತೋಷ ತಂದಿದೆ. ಎಲ್ಲಾ ವಿದ್ಯಾರ್ಥಿಗಳು ಉತ್ತಮವಾಗಿ ಹಾಡಿದ್ದೀರಿ. ಇಂತಹ ಸಂಭ್ರಮಗಳೇ ನಿಮ್ಮ ಮುಂದಿನ ಬದುಕಿನಲ್ಲಿ ಕಾಲೇಜು ಜೀವನದ ನೆನಪುಗಳಾಗಿ ಉಳಿಯುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕರಾದ ಪ್ರೊ. ಮಂಜುನಾಥ ಕೆ.ಎಸ್., ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ. ಜಯಶ್ರೀ ಬಿ. ಕದ್ರಿ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಶಂಕರ್ ಕೆ.ಎಂ. ವೇದಿಕೆಯಲ್ಲಿ ಇದ್ದರು. ತೀರ್ಪುಗಾರರಾಗಿ ಕನ್ನಡ ವಿಭಾಗದ ಉಪನ್ಯಾಸಕರಾದ ಶ್ರೀ ಚಂದ್ರಹಾಸ ಬಿ.ಆರ್. ಮತ್ತು ರಾಜ್ಯಶಾಸ್ತ್ರದ ಉಪನ್ಯಾಸಕರಾದ ಶ್ರೀ ತಿಪ್ಪೇಸ್ವಾಮಿ ಎಂ.ಕೆ. ಕಾರ್ಯ ನಿರ್ವಹಿಸಿದ್ದರು.
ರಂಜಿತ ಆರ್., ತೃತೀಯ ಬಿ.ಎ. ಪ್ರಥಮ ಸ್ಥಾನ,ವಿಶಾಲಾಕ್ಷಿ ಪಿ.ಆರ್. ತೃತೀಯ ಬಿ.ಎ. ದ್ವಿತೀಯ ಸ್ಥಾನ ಹಾಗೂ ವೈಷ್ಣವಿ ವಿ.ಎನ್. ಮತ್ತು ಪೂಜಾಶ್ರೀ ವಿ. - ತೃತೀಯ ಸ್ಥಾನ ಪಡೆದರು.
ಮೌನಶ್ರೀ ಮತ್ತು ತಂಡ ಆರಂಭ ಗೀತೆಯನ್ನು ಹಾಡಿದರು. ನೂರ್ ಫಾತಿಮಾ ಸ್ವಾಗತಿಸಿದರು. ಮಹಮ್ಮದ್ ಸಾಹಿಲ್ ವಂದಿಸಿದರು. ಲಾವಣ್ಯ ಕೆ.ಆರ್. ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು. ವಾಣಿಜ್ಯಶಾಸ್ತ್ರ ವಿಭಾಗದ ಪ್ರೊ. ಸಂಗೀತ ಪಿ ಮತ್ತು ಶ್ರೀಮತಿ ಲಾವಣ್ಯ ಪಿ.ಸಿ. ಹಾಗೂ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ