ತುಮಕೂರು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನಿಂದ ಮತ್ತಿಘಟ್ಟದ ಎಳ್ಳೇನಹಳ್ಳಿಯಲ್ಲಿ ವಿಕಸಿತ್ ಭಾರತ್ ಸಂಪರ್ಕ ಯಾತ್ರೆ ಅರಿವು ಕಾರ್ಯಾಗಾರ
ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತಿಘಟ್ಟ ಶಾಖೆ ಹಾಗೂ ಆರ್ಥಿಕ ಸಾಕ್ಷರತಾ ಕೇಂದ್ರ ಚಿಕ್ಕನಾಯಕನಹಳ್ಳಿ ಇವರ ಜಂಟಿ ಆಶ್ರಯದಲ್ಲಿ ಮತ್ತಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಳ್ಳೇನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ವಿಕಸಿತ್ ಭಾರತ್ ಸಂಪರ್ಕ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ವಿಕಸಿತ್ ಭಾರತ್ ಸಂಪರ್ಕ ಯಾತ್ರೆ ಅಂಗವಾಗಿ ಕೇಂದ್ರ ಸರ್ಕಾರವು ನಿರ್ದೇಶಕ ವಾಹನಗಳ ಮೂಲಕ ಸರ್ಕಾರದ ಅನೇಕ ಯೋಜನೆಗಳ ಪ್ರಯೋಜನಗಳನ್ನು ಜನರಿಗೆ, ಅದರಲ್ಲೂ ಗ್ರಾಮೀಣ ಭಾಗದವರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜನವರಿ 26-1- 2024 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡಿದರು.
ಮತ್ತಿಘಟ್ಟ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರಾದ G.S.ಶ್ರೀ ಹರ್ಷ ಮಾತನಾಡಿ ನಮ್ಮ ಬ್ಯಾಂಕು 25,000/-ಗಳವರೆಗೆ ಕಾಗದ ರಹಿತವಾಗಿ ವ್ಯವಹಾರ ಮಾಡುವ ಸೌಲಭ್ಯ ಹೊಂದಿದೆ, ಅಲ್ಲದೆ ನಮ್ಮ ಬ್ಯಾಂಕು ರೂ300000/- ವರೆಗೆಕಡಿಮೆ ಬಡ್ಡಿ ದರದಲ್ಲಿ ಕಿಸಾನ್ ಕ್ರೆಡಿಟ್ ಸಾಲವನ್ನು ನೀಡುತ್ತದೆ ಎಂದು ತಿಳಿಸಿದರು.
ಚಿಕ್ಕನಾಯಕನಹಳ್ಳಿ, ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರರಾದ ಶ್ರೀ ಆರ್.ಎಂ.ಕುಮಾರಸ್ವಾಮಿ ಪ್ರಧಾನಮಂತ್ರಿಯವರ ಸುರಕ್ಷಾ ಹಾಗೂ ಜೀವನ ಜ್ಯೋತಿ ವಿಮಾ ಯೋಜನೆಯಲ್ಲಿ ಕುಟುಂಬದ ಎಲ್ಲಾ ಸದಸ್ಯರು ನೋಂದಾಯಿಸುವಂತೆ ಸಲಹೆ ನೀಡಿದ್ದರಲ್ಲದೆ ಸ್ವಸಹಾಯ ಸಂಘದ ಸದಸ್ಯರುಗಳು ಲೆಕ್ಕಪತ್ರ ನಿರ್ವಹಿಸುವ ಬಗ್ಗೆ ತರಬೇತಿ ನೀಡಿದರು.
ಈ ಕಾರ್ಯಗಾರದಲ್ಲಿ ಬ್ಯಾಂಕಿನ ಅಧಿಕಾರಿಗಳಾದ ಮಂಜುನಾಥ್ ,ಬಿ.ಸಿ.ಸುದರ್ಶನ್,ಎಂಬಿಕೆ ಪಂಕಜ , ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುವರ್ಣಮ್ಮ ,ರಂಗೇನಹಳ್ಳಿ ಮಂಜಣ್ಣ ,ರಾಮಕೃಷ್ಣಪ್ಪ, ಎಳ್ಳೆನಹಳ್ಳಿ ರಾಜು ಮಂಜುನಾಥ್ ,ಗುಡಿ ಗೌಡ ಕುಮಾರಣ್ಣ, ಕಲಾವತಿ ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಾಗಾರದಲ್ಲಿ ಎಳ್ಳೇನಹಳ್ಳಿ ಹಾಗೂ ರಂಗೇನಹಳ್ಳಿಯ ರೈತರು, ಸ್ವಸಹಾಯ ಸಂಘದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಾಗಾರವನ್ನು ಯಶಸ್ವಿಗೊಳಿಸಿದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ