ಹುಳಿಯಾರು : ಅಬಾಕಸ್ ಪದ್ಧತಿಯ ಮೂಲಕ ಮಕ್ಕಳಿಗೆ ತರಬೇತಿ ನೀಡಿದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚುವುದರ ಮೂಲಕ ಏಕಾಗ್ರತೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆಯಲ್ಲದೇ ಮಕ್ಕಳು ಹೆಚ್ಚು ಕ್ರಿಯಾಶೀಲರಾಗುತ್ತಾರೆ. ಇಂದೂ ಸಹ ಮುಂದುವರಿದ ದೇಶವಾದ ಚೀನಾ ಮತ್ತು ಅಮೆರಿಕ ದೇಶದಲ್ಲಿ ಇದು ಹೆಚ್ಚಾಗಿ ಬಳಕೆಯಾಗುತ್ತಿದ್ದು, ಇದನ್ನು ನಮ್ಮ ಹುಳಿಯಾರಿನಂತಹ ಗ್ರಾಮೀಣ ಭಾಗದಲ್ಲೂ ಸಹ ತರಬೇತಿ ಮೂಲಕ ಮಕ್ಕಳಿಗೆ ಅಬಾಕಸ್ ಜ್ಞಾನವನ್ನು SVB ಅಕಾಡೆಮಿಯಿಂದ ಯಶಸ್ವಿಯಾಗಿ ನೀಡುತ್ತಿರುವುದು ಸಂತೋಷದ ವಿಷಯ ಎಂದು ಹುಳಿಯಾರಿನ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಕುಮಾರಿ ಗೀತಕ್ಕ ಶ್ಲಾಘಿಸಿದರು. ಪಟ್ಟಣದ ಎಸ್‌ವಿಬಿ ಅಕಾಡೆಮಿಯಿಂದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಎಸ್‌ವಿಬಿ ಅಕಾಡೆಮಿಯ ಮಾರ್ಗದರ್ಶಕರಾದ ಶ್ರುತಿರವರು ಎಲ್ಲಾ ಮಕ್ಕಳಿಗೂ ಅಬಕಸ್ ತರಬೇತಿ ಉತ್ತಮವಾಗಿ ನೀಡುತ್ತಿದ್ದು ಪಟ್ಟಣದ ರೀತಿಯಲ್ಲಿಯೇ ಹಳ್ಳಿಯ ಮಕ್ಕಳಿಗೂ ಸಹ ಉತ್ತಮ ಜ್ಞಾನ, ಶಿಕ್ಷಣ ನೀಡುತ್ತಿದ್ದಾರೆ ತಮ್ಮ ಮಕ್ಕಳ್ಳನ್ನು ಇಲ್ಲಿ ದಾಖಲಿಸಿಸುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆದುಕೊಳ್ಳಿ ಎಂದರು. ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070