ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಹುಳಿಯಾರು ಪೋಲಿಸ್ ರಿಂದ ಜನಸಂಪರ್ಕ ಸಭೆ

ಹುಳಿಯಾರು ಪೋಲಿಸ್ ಠಾಣೆಯಲ್ಲಿ ನಡೆದ ಜನಸಂಪರ್ಕ ಸಭೆ.ಎಸ್ಐ ಪಾರ್ವತಿಯಾದವ್,ಎಎಸ್ಐ ಈರಮರಿಯಪ್ಪ ಇದ್ದಾರೆ.

ಹುಳಿಯಾರಿನಲ್ಲಿ ಫೆ 10 ರಂದು ಉಚಿತ ಕೃತಕ ಕಾಲು ವಿತರಣೆ

ಹುಳಿಯಾರಿನಲ್ಲಿ ಫೆ 10 ರಂದು ಉಚಿತ ಕೃತಕ ಕಾಲು ವಿತರಣೆ ------------------------------------ ಹುಳಿಯಾರು: ಹುಳಿಯಾರಿನ ಸನ್ಮಾರ್ಗ ಥಿಯಸಾಫಿಕಲ್ ಸೇವಾ ವಿಭಾಗವು, ಬೆಂಗಳೂರಿನ ಅಂಗಕಾರುಣ್ಯ ಕೇಂದ್ರ, ತುಮಕೂರಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾ ಅಂಗವಿಕಲ ಪುನರ್ವಸತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 10 ರ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಉಚಿತ ಜೈಪುರ್ ಕೃತಕ ಕಾಲು ಹಾಗೂ ಪೋಲಿಯೋ ಪೀಡಿತ ಮಕ್ಕಳಿಗೆ ಉಚಿತ ಕ್ಯಾಲಿಪರ್ ವಿತರಣಾ ಶಿಬಿರ ಏರ್ಪಡಿಸಿದೆ. ಕಳೆದ ಡಿಸೆಂಬರ್ ಮಾಹೆಯಲ್ಲಿ ಈ ಸಂಬಂಧ ಅಪಘಾತದಲ್ಲಿ, ಶಸ್ತಚಿಕಿತ್ಸೆಯಲ್ಲಿ ಮೊಣಕಾಲಿನಿಂದ ಕೆಳಭಾಗದ ಕಾಲನ್ನು ಕಳೆದುಕೊಂಡವರಿಗೆ ಸೂಕ್ತವಾದ ಕೃತಕ ಕಾಲು ರಚಿಸುವ ಹಾಗೂ ಪೋಲಿಯೋ ಪೀಡಿತರಾಗಿ ನರದೌರ್ಬಲ್ಯದಿಂದ ನಡೆಯಲಾಗದವರಿಗೆ ಕ್ಯಾಲಿಪಸರ್್ ಇದ್ದಪಡಿಸುವ ಸಲುವಾಗಿ ಶಿಬಿರ ಏರ್ಪಡಿಸಿ ಫಲಾನುಭವಿಗಳ ಅಳತೆಗಳನ್ನು ಪಡೆಯಲಾಗಿತ್ತು. ಅಂದಿನ ಶಿಬಿರದಲ್ಲಿ ಭಾಗವಹಿಸಿ ಅಳತೆ ನೀಡಿದ 60 ತಕ್ಕೂ ಹೆಚ್ಚು ಮಂದಿಗೆ ಈ ಶಿಬಿರದಲ್ಲಿ ಉಚಿತವಾಗಿ ಕೃತಕ ಕಾಲು, ಕ್ಯಾಲಿಪರ್ ವಿತರಿಸಲಾಗುವುದು. ಫಲಾನುಭವಿಗಳು ಹೆಚ್ಚಿನ ಮಾಹಿತಿಗಾಗಿ ಶಿಬಿರದ ಸಂಚಾಲಕ ಎಂ.ಆರ್.ಗೋಪಾಲ್ (9449511936) ಅಥವಾ ಥಿಯಸಾಫಿಕಲ್ ಕಾರ್ಯದರ್ಶಿ ಎಚ್.ಬಿ.ಗೋಪಾಲ್ (9945707021) ಇವರನ್ನು ದೂರವಾಣಿ ಮಾಲಕ ಸಂಪಕರ್ಿಸಿ ಶಿಬಿರಕ್ಕೆ ಹಾಜರಾಗುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೋರನಕಣಿವೆ ಜಲಾಶಯಕ್ಕೆ ನದಿ ನೀರು ಹರಿಸಲು ಒತ್ತಾಯಿಸಿ

ಬೋರನಕಣಿವೆ ಜಲಾಶಯಕ್ಕೆ ನದಿ ನೀರು ಹರಿಸಲು ಒತ್ತಾಯಿಸಿ ಫೆಬ್ರವರಿ 15 ರಂದು ಹುಳಿಯಾರ್ ಬಂದ್ ------------------------- --------------------------------------------------------- ಚಿಕ್ಕನಾಯಕನಹಳ್ಳಿ ತಾಲೂಕಿನ ವಿವಿಧ ಕೆರೆಗಳ ಮೂಲಕ ನೈಸರ್ಗಿಕವಾಗಿ ಹುಳಿಯಾರು ಹೋಬಳಿ ಬೋರನಕಣಿವೆ ಜಲಾಶಯಕ್ಕೆ ನದಿ ಮೂಲದ ನೀರು ಹರಿಸಲು ಒತ್ತಾಯಿಸಿ ಹುಳಿಯಾರ್ ಬಂದ್ಗೆ ಕರೆ ನೀಡಲು ರೈತ ಸಂಘ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳು ನಿರ್ಧರಿಸಿವೆ. ಹುಳಿಯಾರಿನ ಪ್ರವಾಸಿ ಮಂದಿರಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಈ ಸಂಬಂಧ ಕರೆಯಲಾಗಿದ್ದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೆ, ಬಂದ್ ನ ಭಾರಿ ಪ್ರತಿಭಟನಾ ಮೆರವಣಿಗೆಯಲ್ಲಿ ಸರ್ಕಾರ ತಮ್ಮ ನಿಲುವು ಪ್ರಕಟಿಸದಿದ್ದಲ್ಲಿ ತಾಲೂಕು ಕಛೇರಿಗೆ ಪಾದಯಾತ್ರೆ, ವಿಧಾನಸೌಧಕ್ಕೆ ಬೈಕ್ ರಾಲಿ ಹಾಗೂ ಇಲ್ಲಿನ ನಾಡ ಕಛೇರಿ ಮುಂದೆ ಆಹೋರಾತ್ರಿ ಧರಣಿ ನಡೆಸುವ ಮೂಲಕ ಸರ್ಕಾರದ ಮೇಲೆ ಮತ್ತೊಷ್ಟು ಒತ್ತಡ ತರಲು ತೀರ್ಮಾನಿಸಲಾಯಿತು. ಚಿಕ್ಕನಾಯಕನಹಳ್ಳಿ ತಾಲೂಕಿಗೆ ಯಾವುದೇ ನೀರಾವರಿ ಸೌಲಭ್ಯ ಇಲ್ಲದೆ ಮಳೆ ಹಾಗೂ ಅಂತರ್ಜಲ ನಂಬಿ ಜೀವನ ಸಾಗಿಸುವ ಅನಿವಾರ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಿಲ್ಲ, ಅಂತರ್ಜಲವೂ ಸಹ ಕುಸಿತವಾಗಿ ಸಾವಿರ ಅಡಿ ಕೊರೆದರೂ ನೀರು ...

ಹುಳಿಯಾರು ವಿದ್ಯಾವಾರಿಧಿ ವಿದ್ಯಾರ್ಥಿಗಳೊಂದಿಗೆ ಕೃಷಿ ಸಚಿವರ ಸಂವಾದ

ಹುಳಿಯಾರು ವಿದ್ಯಾವಾರಿಧಿ ವಿದ್ಯಾರ್ಥಿಗಳೊಂದಿಗೆ ಕೃಷಿ ಸಚಿವರ ಸಂವಾದ ------------------------------------------- ಕೃಷಿ ಸಚಿವ ರವೀಂದ್ರನಾಥ್ ಅವರು ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಕೃಷಿ ವಿಚಾರವಾಗಿ ಸಂವಾದ ನಡೆಸಿದರು. ಮೆಡಿಸಿನ್ ಸೌತೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿರುವ, ಬಿಟಿ ಬದನೆಗಳ ದುಷ್ಪರಿಣಾಮಗಳ ಹಾಗೂ ನಿಷೇಧದ ಬಗ್ಗೆ ಗಂಭೀರ ಚರ್ಚೆಗಳು ನಡೆಯಿತು. ರೈತರ ಆತ್ಮಹತ್ಯೆ ತಡೆಗಟ್ಟುವ ಬಗ್ಗೆ, ರಾಸಾಯನಿಕ ಗೊಬ್ಬರಗಳ ಸಾಧಕ ಬಾದಕಗಳ ಚಚರ್ೆಯೂ ಸಹ ಜರುಗಿತು, ಹೈವೆಯಲ್ಲಿ ಶೋ ಪ್ಲಾಂಟ್ಗಳ ಬದಲು ಹಣ್ಣಿನ ಸಸಿಗಳನ್ನು ನೆಡುವ, ಗ್ಲೋನಲ್ ವಾರ್ಮಿಂಗ್ ತಡೆಗಟ್ಟಲು ಕೃಷಿ ಚಟುವಟಿಕೆ ಹೆಚ್ಚಿಸುವ, ಜನಸಂಖ್ಯೆಗೆ ಅನುಗುಣವಾಗಿ ಬೆಳೆಗಾರರ ಸಂಖ್ಯೆಯನ್ನು ಹೆಚ್ಚಿಸಲು ಪ್ರೋತ್ಸಾಹ ಯೋಜನೆಗಳ ಜಾರಿಗೆ ತರುವ ಸಲಹೆಗಲು ಈ ಸಂವಾದದಲ್ಲಿ ಕೇಳಿ ಬಂದು. ಸಂವಾದದ ತರುವಾಯ ಕೃಷಿ ಸಚಿವ ರವೀಂದ್ರನಾಥ್ ಅವರು ಮಾತನಾಡಿ ಮಕ್ಕಳು ಶಾಲೆಗೆ ಚಕ್ಕರ್ ಹೊಡೆದಿದಕ್ಕೆ ಕೊಡುವ ಸಮಜಾಯಿಸಿಯಿಂದ ಸುಳ್ಳು ಹೇಳುವ ಪ್ರಕ್ರಿಯೆ ಆರಂಭವಾಗುತ್ತದೆ. ಇದನ್ನು ಆದಷ್ಟು ತಡೆಗಟ್ಟಬೇಕು.ಎಕ್ಸ್ಪೋರ್ಟ್ ಆಗುವ ದಿನಸಿಗಳಲ್ಲಿ ಕಳಪೆ ಹಾಗೂ ತರಾವರಿ ದಿನಸಿಗಳನ್ನು ಮಿಕ್ಸ್ ಮಾಡುತ್ತಿದ್ದ...

ಹುಳಿಯಾರು ಅಭಿಮಾನಿಗಳಿಂದ ವಿಷ್ಣು ಪುಣ್ಯ ತಿಥಿ

ಹುಳಿಯಾರು ಅಭಿಮಾನಿಗಳಿಂದ ವಿಷ್ಣು ಪುಣ್ಯ ತಿಥಿ -------------------------------- ಹುಳಿಯಾರು: ಸಾಹಸ ಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರು ಇಹ ಲೋಕ ತ್ಯಜಿಸಿ ಜನವರಿ 30 ಕ್ಕೆ ತಿಂಗಳಾಯಿತು. ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ಅನಭಿಶಕ್ತ ದೊರೆಯಾಗಿ ಇಂದಿಗೂ ನೆಲೆಸಿದ್ದಾರೆ. ಹಾಗಾಗಿಯೇ ಅಭಿಮಾನಿಗಳ ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದಕ್ಕೆ ಹುಳಿಯಾರಿನಲ್ಲಿ ವಿಷ್ಣು ಅಭಿಮಾನಿ ಬಳಗ ವಿಷ್ಣು ಅವರ ತಿಂಗಳ ಪುಣ್ಯ ತಿಥಿಯನ್ನು ಅರ್ಥಪೂರ್ಣವಾಗಿ ಆಚರಿಸಿತು. ಮುಂಜಾನೆ 9 ಗಂಟೆಯಿಂದಲೆ ಇಲ್ಲಿನ ವಿನಾಯಕ ನಗರದ ದ್ವಾರ ಬಾಗಿಲಿನ ಬಳಿ ಶಾಮಿಯಾನ ನೆಟ್ಟು ವಿಷ್ಣುವರ್ಧನ್ ಅವರ ಆಕರ್ಷಕ ಭಾವಚಿತ್ರವನ್ನು ವಿದ್ಯುತ್ ದೀಪ, ಬಣ್ಣ ಬಣ್ಣದ ಪುಷ್ಪಗಳೊಂದಿಗೆ ಸಿಂಗಾರಗೊಂಡ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪೂಜೆ ಪನಸ್ಕಾರಗಳನ್ನು ನೆರವೇರಿಸಲಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಎತ್ತರದ ವಿಷ್ಣು ಭಾವಚಿತ್ರವನ್ನು ವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು. ಸಾರ್ವಜನಿಕರಿಗೆ ಅನ್ನಸಂತರ್ಪಣೆಯೂ ಕೂಡ ಮಾಡಿ ನಂತರ ಇಡೀ ರಾತ್ರಿ ವಿಷ್ಣು ಭಾವಚಿತ್ರದ ಮುಂದೆ ಅಭಿಮಾನಿಗಳಿಂದ ಭಜನಾ ಕಾರ್ಯಕ್ರಮ ಸಹ ಜರುಗಿತು. ಎಂ .ರಾಘವೇಂದ್ರ, ಎಚ್.ಎಸ್.ನಟರಾಜ್, ಬಾಳೆಕಾಯಿ ಮೂರ್ತಣ್ಣ, ಎಚ್.ಬಿ.ದುರ್ಗರಾಜ್, ಅಂಜುಮಣಿ, ಕೆ.ಪಿ.ಮಂಜುನಾಥ್, ಎಚ್.ಜಿ.ರಾಘವೇಂದ್ರ, ಜಗದೀಶ್, ...

ಮಂಕುತಿಮ್ಮನ ಕಗ್ಗದಲ್ಲಿನ ನಾಲ್ಕು ಸಾಲುಗಳು

ಮಂಕುತಿಮ್ಮನ ಕಗ್ಗದಲ್ಲಿನ ಅರ್ಥಗರ್ಭಿತವಾಗಿರುವ ನಾಲ್ಕು ಸಾಲುಗಳು ಹಳೆಬೇರು - ಹೊಸತಳಿರು ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತೊ ಹಳದೆಂದು ನೀನದನು ಕಳೆಯುವೆಯ, ಮರುಳೆ ? ತಳಹದಿಯದಲ್ಲೆ ನಮ್ಮೆಲ್ಲ ಹೊಸ ತಿಳಿವಿಂಗೆ ? ಹಳೆ ಬೇರು ಹೊಸ ತಳಿರು - ಮಂಕುತಿಮ್ಮ ಸಾರಂಶ: ಒಂದು ಕಾಲದ ಅರಿವು ಯುಗಯುಗಕ್ಕೂ ಬೆಳಕಾಗಿತ್ತು. ನೀನು ಅದನ್ನು ಹಳೆಯದೆಂದು ಹಳಿಯುವುದು ಮೊರ್ಖತನವಾದೀತು. ತಳಪಾಯವೇ ಮುಂದಿನ ಬೆಳೆವಣೆಗೆಗೆ ಸಹಕಾರಿಯಲ್ಲವೆ. ಹಳೆಯ ಮರದ ಬೇರಿದ್ದರಲ್ಲವೆ ಹೊಸಚಿಗುರು ಮೊಡುವುದು. ಸಂಪದ ಬ್ಲಾಗ್ ನೋಡುತ್ತಿದ್ದಾಗ ಅದರಲ್ಲಿ ಕಂಡು ಬಂದಿದ್ದನ್ನು ಎಲ್ಲರು ಓದಲಿ ಎಂದು ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿದ್ದೆನೆ.ಮಂಕುತಿಮ್ಮನ ಕಗ್ಗದ ಈ ಸಾಲುಗಳು ಅರ್ಥಪೂರ್ಣವಾಗಿದೆ ತಾನೆ?.

ಹುಳಿಯಾರಿನಲ್ಲಿ ನಡೆದ ಸಂಭ್ರಮದ ವೈಕುಂಠ ಏಕಾದಶಿ ಬಗ್ಗೆ ವಿಶೇಷ ವರದಿ

ಗುಹಾ ಪ್ರವೇಶ ದಾರಿ ಮೂಲಕ ಭಕ್ತರ ಶ್ರೀ ಸ್ವಾಮಿಯವರ ದರ್ಶನ ಹೋಗುತ್ತಿರುವುದು. ಹುಳಿಯಾರಿನ ಶ್ರೀ ಬನಶಂಕರಮ್ಮ ಅವರಿಗೆ ವೈಕುಂಠ ಏಕಾದಶಿ ಅಂಗವಾಗಿ ವೈಕುಂಠ ನಾರಾಯಣನ ಅಲಂಕಾರ ಮಾಡಿರುವುದು. ಹುಳಿಯಾರಿನ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರಕಾರೋತ್ಸವ ಹುಳಿಯಾರಿನ ಶ್ರೀ ರಂಗನಾಥ ಸ್ವಾಮಿ ಗುಡಿಯಲ್ಲಿ ಶ್ರೀ ಸ್ವಾಮಿಗೆ ಬಗೆಬಗೆಯ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಿರುವುದು. 1 ; ಹುಳಿಯಾರಿನ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಕೋದಂಡರಾಮನ ಸನ್ನಿದಾನದಲ್ಲಿ ಅನಂತಶಯನ ರಂಗನಾಥ ಸ್ವಾಮಿಯನ್ನು ಪ್ರತಿಷ್ಠಾಪಿಸಿರುವುದು. ಹುಳಿಯಾರಿನಲ್ಲಿ ನಡೆದ ಸಂಭ್ರಮದ ವೈಕುಂಠ ಏಕಾದಶಿ ಬಗ್ಗೆ ವಿಶೇಷ ವರದಿ --------------------------- ಇದನ್ನು ಬರೆದಿದ್ದು:ಕಿರಣ್ ಕುಮಾರ್ ಹೆಚ್.ಬಿ ಹಾಗೆಯೆ ಇದಕ್ಕೆ ಸಂಭಂದಿಸಿದ ವಿಶೇಷ ಛಾಯಚಿತ್ರಗಳನ್ನು ತೆಗೆದಿದ್ದು ಸ್ಟುಡಿಯೊ ದುರ್ಗರಾಜು ಮತ್ತು ಅಂಬಿಕಾ ಸುಧಿ.ವೆಬ್ ಗೆ ಹಾಕಿದ್ದು ನಾನು. ಹುಳಿಯಾರಿನ ಶ್ರೀ ಕನ್ನಿಕ ಪರಮೇಶ್ವರಿ ದೇವಸ್ಥಾನ, ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಬನಶಂಕರಿ ದೇವಸ್ಥಾನಗಳಲ್ಲಿ ದೇವಾಲಯವನ್ನು ಬಣ್ಣಬಣ್ಣದ, ಬಗೆ ಬಗೆಯ ಹೂಗಳಿಂದ ಹಾಗೂ ತಳಿರು ತೋರಣದಿಂದ ಶೃಂಗರಿಸಿ, ಝಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸುವ ಮೂಲಕ ವೈಕುಂಠ ಏಕಾದಶಿಯನ್ನು ಅಪಾರ ಭಕ್ತ ಸಮೂಹದೊಂದಿಗೆ ಸಂಭಮದಿಂದ ಆಚರಿಸಲಾಯಿತು. ಗ್ರಾಮದ ಪೇಟೆ ಬೀದಿಯಲ್ಲಿರುವ ಶ್ರೀ ಕನ್ನಿಕ...