ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನತೆ ಹಾಗೂ ಅಧಿಕಾರಿಗಳ ನಡುವೆ ಸ್ಪಂದನಾ ಮನೋಭಾವ ಬೆಳೆಯಬೇಕು: ಶಾಸಕ ಸಿ.ಬಿ.ಎಸ್

ಹುಳಿಯಾರಿನ ಎಂಪಿಎಸ್ ಶಾಲಾ ಆವರಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಡಿದರು. ಪ್ರಸ್ತುತ ಸಮಾದಲ್ಲಿನ ಆಡಳಿತಯಂತ್ರ ಸುಗಮವಾಗಿ ಸಾಗಬೇಕಾದರೆ ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆದಾಗ ಮಾತ್ರ ಸಾಧ್ಯ,ಜನತೆ ತಮ್ಮ ಸಮಸ್ಯೆಗಳನ್ನು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದು ಅವುಗಳ ಪರಿಹಾರಕ್ಕೆ ಆಗ್ರಹಿಸುವುದು ಸಹಜ ಆದರೆ ಸಮಸ್ಯೆಳಿಗೆ ಪರಿಹಾರ ಕಂಡುಕೊಳ್ಳಲು ಕೆಲಸಮಯ ತೆಗೆದು ಕೊಳ್ಳುತ್ತದೆ ಇದನ್ನು ತಿಳಿದ ಜನರು ಅಧಿಕಾರಿಗಳ ನಡುವೆ ಸ್ಪಂದನಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಹುಳಿಯಾರಿನ ಎಂಪಿಎಸ್ ಶಾಲಾ ಆವರಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಅವರು ಮಾತನಾಡಿದರು. ಇಂದು ನಾವೆಲ್ಲಾ ಗಮನಿಸಿದಂತೆ ಸರ್ಕಾರ ಜನರ ಸಮಸ್ಯೆಗಳನ್ನು ಆಲಿಸುವ ಬದಲು ತಮ್ಮತಮ್ಮಲ್ಲೇ ಕಿತ್ತಾಟವನ್ನು ಮಾಡುತ್ತಾ ಕುರ್ಚಿಯ ವ್ಯಾಮೋಹದಲ್ಲಿ ಸಿಲುಕಿದ್ದು,ರಾಜ್ಯ್ದ ಅಭಿವೃದ್ದಿಯನ್ನೇ ಮರೆತು ಕುಳಿತಿದೆ.ಈರೀತಿಯ ಬೆಳವಣಿಗೆ ಮುಂದುವರೆದರೆ ರಾಜ್ಯದ ಅಭಿವೃದ್ದಿಗೆ ತೊಡಕಾಗಿ ಪರಿಣಮಿಸುತ್ತದೆ ಎಂದರು. ತಾಲ್ಲೂಕಿನಾದ್ಯಂತ ಬರಗಾಲ ಅವರಿಸಿದ್ದು ಕುಡಿಯುವ ನೀರಿಗಾಗಿ ಬೋರ್ ವೆಲ್ ಗಳನ್ನು,ಜಾನುವಾರುಗಳಿಗೆ ಮೇವು,ನೀರಿನ ವ್ಯವಸ್ಥೆಗಾಗಿ ಗೋಶಾಲೆಗಳನ್ನು ತೆರೆಯುವ ಕಾರ್ಯಗಳು ನಡೆಯುತ್ತಿದ್ದು,ಜನರು ಸಹ ತಮ್ಮ ಪ್ರದೇಶಗಳ...

ಅರಣ್ಯಗಳನ್ನು ಸುಸ್ಥಿರವಾಗಿ ಬೆಳೆಸುವ ಪರಿಕಲ್ಪನೆ ಪ್ರತಿಯೊಬ್ಬರಲ್ಲೂ ಮೂಡಬೇಕಿದೆ: ರಾಮಕೃಷ್ಣಪ್ಪ

  ಹುಳಿಯಾರು ಹೋಬಳಿ ಬೋರನಕಣಿವೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ರಾಮಕೃಷ್ಣಪ್ಪ ಮಕ್ಕಳಿಗೆ ಪರಿಸರದ ಬಗ್ಗೆ ಮಾಹಿತಿ ನೀಡಿದರು. ನಮ್ಮ ಭಾರತ ನೈಸರ್ಗಿಕವಾಗಿ ಸಮೃದ್ದಿಯಿಂದ ಕೂಡಿದ ದೇಶ,ಹೇರಳವಾದ ಆರಣ್ಯ ಸಂಪತ್ತನ್ನು ಹೊಂದಿದಂತಹ ನಮ್ಮ ನಾಡಿನಲ್ಲಿ ಮೊದಲು ಶೇಕಡ ೩೦ಕ್ಕೂ ಹೆಚ್ಚು ಪ್ರದೇಶದಲ್ಲಿದ್ದ ಅರಣ್ಯ ಇಂದು ಶೇ.೧೫ರಷ್ಟಾಗಿರುವುದರಿಂದ ಇಂದು ಮನುಷ್ಯನ ಬದುಕು ಅಪಾಯಕ್ಕಿಡಾಗಿದೆ. ಈ ತೊಂದರೆಯಿಂದ ಪಾರಾಗಬೇಕಾದರೆ ನಾವೆಲ್ಲರೂ ಆರಣ್ಯವನ್ನು ಸುಸ್ಥಿರವಾಗಿ ಬೆಳೆಸುವ ಕಲ್ಪನೆಯನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ರಾಮಕೃಷ್ಣಪ್ಪ ಅಭಿಪ್ರಾಯಪಟ್ಟರು. ಹುಳಿಯಾರು ಹೋಬಳಿ ಬೋರನಕಣಿವೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್,ಜಿಲ್ಲಾ ಹಾಗೂ ತಾಲ್ಲೂಕು ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಆಂದೋಲನದಲ್ಲಿ "ಸುಸ್ಥಿರ ಜೀವನೋಪಾಯಕ್ಕೆ ಆರಣ್ಯ' ಎಂಬ ವಿಷಯದ ವಿಷೇಶ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಿಸರ ನಾಶದಿಂದ ಸಾಕಷ್ಟು ತೊಂದರೆಗಳು ಉಂಟಾಗುತ್ತಿರುವುದಕ್ಕೆ ಹಲವಾರು ನಿದರ್ಶನಗಳಿದ್ದು.ಇದೇ ರೀತಿ ಪರಿಸರ ನಾಶವಾದರೆ ಮನುಕುಲವೇ ನಶಿಸಿ ಹೋಗುವ ಕಾಲ ಬರುವ ಸಾಧ್ಯತೆಗಳಿವೆ ಎ...

ಇಂದು (ತಾ.9) ಸುವರ್ಣ ಮಹೋತ್ಸವ ಕಾಮಗಾರಿಗಳ ಶಿಲಾನ್ಯಾಸ

ಹುಳಿಯಾರು: ಹೋಬಳಿ ಬೋರನಕಣಿವೆ ಗ್ರಾಮದಲ್ಲಿ ಸುವರ್ಣ ಮಹೋತ್ಸವ ಕಾಮಗಾರಿಗಳ ಶಿಲಾನ್ಯಾಸ ಹಾಗೂ 2012-13 ನೇ ಸಾಲಿನ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆ,ಪ್ರತಿಭಾ ಪುರಸ್ಕಾರ,ವೃತ್ತಿ ಮಾರ್ಗದರ್ಶಿ ಘಟಕ, ಇಕೋಕ್ಲಬ್ , ಸುವರ್ಣ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಉದ್ಘಾಟನೆಯು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಇಂದು (ತಾ.9) ಸೋಮವಾರ ಬೆಳಿಗ್ಗೆ 11ಕ್ಕೆ ನಡೆಯಲಿದೆ. ಸಂಸತ್ ಸದಸ್ಯರಾದ ಜಿ.ಎಸ್.ಬಸವರಾಜು ಸಮಾರಂಭದ ಉದ್ಘಾಟನೆಯನ್ನು,ಶಾಸಕ ಸಿ.ಬಿ.ಸುರೇಶ್ ಬಾಬು ಸುವರ್ಣ ಮಹೋತ್ಸವ ಪ್ರವೇಶ ದ್ವಾರದ ಶಿಲಾನ್ಯಾಸವನ್ನು ಹಾಗೂ ಅಧ್ಯಕ್ಷತೆ ವಹಿಸಲಿದ್ದಾರೆ.ಸಭಾಂಗಣದ ಶಿಲಾನ್ಯಾಸವನ್ನು ಶಾಸಕ ಟಿ.ಬಿ.ಜಯಚಂದ್ರ ನೆರವೇರಿಸಲಿದ್ದು,ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆಯನ್ನು,ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಹಾಗೂ ಕೆ.ಎಸ್.ಕಿರಣ್ ಕುಮಾರ್ ಸುವರ್ಣ ಹಳೆಯ ವಿದ್ಯಾರ್ಥಿಗಳ ಒಕ್ಕೂಟ,ವೃತ್ತಿ ಮಾರ್ಗದರ್ಶಿ ಘಟಕದ ಉದ್ಘಾಟನೆನ್ನು,ಮಾಡುವರು.ತಾ.ಪಂ.ಅಧ್ಯಕ್ಷ ಸೀತಾರಾಂ ಇಕೋಕ್ಲಬ್ ನ ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಪಂಚಾಯ್ತಿಯ ಆನಂದರವಿ, ಜಿಲ್ಲಾ ಪ.ಪೂ.ಶಿ.ಇ. ಉಪನಿರ್ದೇಶಕ ಕೆ.ಎಸ್.ರಂಗನಾಥ್,ಜಿಲ್ಲಾ ಸಾ.ಶಿ.ಇ. ಉಪನಿರ್ದೇಶಕ ಮೋಹನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್,ಜಿ.ಪಂ.ಸದಸ್ಯೆ ನಿಂಗಮ್ಮ,ತಾ.ಪಂ.ಸದಸ್ಯರಾದ ವಸಂತಯ್ಯ,ಕವಿತಾ,ಹೊಯ್ಸಳಕಟ್ಟೆ ಗ್ರಾ.ಪ...

ಹಿಂದೂ ಸಂಸ್ಕೃತಿ ಹಾಗೂ ಸಂಘಟನೆಗಳ ಮೇಲೆ ಪ್ರಹಾರ ನಡೆಯುತ್ತಿದೆ : ಪ್ರಮೋದ್ ಮುತಾಲಿಕ್

  ದಾವಣಗೆರೆಗೆ ತೆರಳುತ್ತಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಮಾರ್ಗ ಮಧ್ಯೆ ಹುಳಿಯಾರಿನ ಹಿಂದೂಪರ ಸಂಘಟಕರೊಂದಿಗೆ ಮಾತನಡಿದು.ಜೊತೆಗೆ ಸಂಘಟಕರು ಅಭಿನಂದನೆ ಸಲ್ಲಿಸಿದರು. ಪಸ್ತುತದಲ್ಲಿ ನಾವು ಗಮನಿಸಿದಂತೆ ನಮ್ಮ ಅನೇಕ ಟಿ.ವಿ ಚಾನಲ್ ಗಳು ಹಾಗೂ ಚಲನಚಿತ್ರಗಳಲ್ಲಿ ನಮ್ಮ ಹಿಂದೂ ದೇವರುಗಳ ಪಾತ್ರಗಳನ್ನು ನಟಿಸುತ್ತಾ ಹಿಂದೂ ದೇವತೆಗಳ, ಸಂಸ್ಕೃತಿ ಹಾಗೂ ಸ್ವಾಮೀಜಿಗಳ ,ಸಂಘಟನೆಗಳ ಮೇಲೆ ದೃಶ್ಯ ಮಾಧ್ಯಮಗಳು ವ್ಯವಸ್ಥಿತ ಪ್ರಹಾರ ನಡೆಸುತ್ತಿದ್ದಾರೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದರು. ದಾವಣಗೆರೆಯಲ್ಲಿ ನಡೆಯಲಿರುವ ಕಾರ್ಯಕರ್ತರ ಸಭೆಗೆ ತೆರಳುತ್ತಿದ್ದ ಅವರು ಮಾರ್ಗ ಮಧ್ಯೆ ಹುಳಿಯಾರಿನ ಹಿಂದೂ ಜಾಗರಣ ವೇದಿಕಕೆಯ ಹಾಗೂ ಶ್ರೀ ರಾಮ ಸೇನೆಯ ಸಂಘಟಕರೊಂದಿಗೆ ಕೆಲ ಕಾಲ ಮಾತನಾಡಿದರು. ಸಿನಿಮಾ ಮಾಧ್ಯಮಗಳಲ್ಲಿ,ಧಾರವಾಹಿಗಳಲ್ಲಿ,ನಾಟಕಗಳಲ್ಲಿ,ಅಸಭ್ಯ,ಆಶ್ಲೀಲ ಪಾತ್ರಗಳನ್ನು ಅಭಿನಯಿಸುತ್ತಿದ್ದಾರೆ ಹಾಗೂ ಸಂಭಾಷಣೆಯನ್ನು ಬಳಸುತ್ತಿದ್ದು ಸಮಾಜದ ಮೇಲೆ ದುಷ್ಪರಿಣಾಮ ಬೀರುತಿವೆ,ಇದು ಉತ್ತಮ ಬೆಳವಣಿಗೆಯಲ್ಲ ಎಂದರು.ದೃಶ್ಯ ಮಾಧ್ಯಮಗಳಲ್ಲಿ ಅಸಭ್ಯ,ಆಶ್ಲೀಲತೆಯನ್ನು ತೋರಿಸಿದರೆ ಅದು ಕಾನೂನು ಬಾಹಿರವಾಗುತ್ತದೆ.ಅದರೂ ಕೆಲ ಚಾಲನ್ ಗಳಲ್ಲಿ ಇಂತಹ ದೃಶ್ಯಗಳು ಹೆಗ್ಗಿಲ್ಲದೆ ಬಿತ್ತರವಾಗುತ್ತಿವೆ.ತಿರುಪತಿ ತಿರುಮಲ ಎಂಬ ಹಿಂದೂ ದೇವರ ಹೆಸರನ್ನು ಅಪಹಾಸ್ಯವನ್ನಾಗಿ ಮಾಡಿ ಕಾರ್ಯಕ್ರಮವನ್ನು ಪ್ರಸ...

ಜಾಥಾ

  ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶಾಲೆಗಾಗಿ ನಾವು ನೀವು ಕಾರ್ಯಕ್ರಮದ ಸೈಕಲ್ ಜಾಥಾಕ್ಕೆ ಉಪಪ್ರಾಂಶುಪಾಲರಾದ ಡಿ.ಇಂದಿರಾ ಹಸಿರು ನೀಶಾನೆ ತೋರಿದರು.ಶಾಲಾ ಶಿಕ್ಷಕರು ಹಾಗೂ ಶಾಲಾ ಎಸ್.ಡಿ.ಎಂ.ಸಿ ಯವರು ಹಾಜರಿದ್ದರು. ಹುಳಿಯಾರು ಹೋಬಳಿ ಗಾಣಧಾಳು ಗ್ರಾ.ಪಂ.ವ್ಯಾಪ್ತಿಯ ಜಿ.ಗೊಲ್ಲರಹಟ್ಟಿಯ ಸರ್ಕಾರಿ ಶಾಲೆಯಲ್ಲಿ ಶಾಲೆಗಾಗಿ ನಾವು ನೀವು ಕಾರ್ಯಕ್ರಮದ ಅಂಗವಾಗಿ ಊರಿನ ಬೀದಿಗಳಲ್ಲಿ ಜಾಥಾವನ್ನು ನಡೆಸಲಾಯಿತು.

ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ಹೆಚ್ಚು : ಡಾ||ಸಿದ್ದರಾಮಯ್ಯ

ಹುಳಿಯಾರಿನ ಬ್ರಹ್ಮಕುಮಾರೀ ಈಶ್ವರೀಯ ರಾಜಯೋಗ ಭವನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ವೈದ್ಯರ ಹಾಗೂ ಪತ್ರಕರ್ತರ ದಿನಾಚರಣಾ ಸಮಾರಂಭದ ಉದ್ಘಾಟನೆಯನ್ನು ಹೋಬಳೀಯ ವೈದ್ಯರು ಹಾಗೂ ಪತ್ರಕರ್ತರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಹುಳಿಯಾರಿನ ಬ್ರಹ್ಮಕುಮಾರೀ ಈಶ್ವರೀಯ ವಿದ್ಯಾಲಯದ ರಾಜಯೋಗ ಭವನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ವೈದ್ಯರ ಹಾಗೂ ಪತ್ರಕರ್ತರ ದಿನಾಚರಣಾ ಸಮಾರಂಭದಲ್ಲಿ ವಿದ್ಯಾಲಯದ ಗೀತಕ್ಕ ಪ್ರಾಸ್ತಾವಿಕ ನುಡಿನುಡಿದರು. ಇಂದು ನಮ್ಮ ದೇಶದಲ್ಲಿ ಸಾಕಷ್ಟು ವೈದ್ಯಕೀಯ ವಿದ್ಯಾಲಯಗಳಿದ್ದು,ಪ್ರತಿ ವರ್ಷ ಸಾವಿರಾರು ಮಂದಿ ವೈದ್ಯಕೀಯ ವಿಷಯದಲ್ಲಿ ಅಧ್ಯಯನ ಮಾಡುವ ಮೂಲಕ ವೈದ್ಯ ವೃತ್ತಿಯನ್ನು ಪ್ರಾರಂಭಿಸುತ್ತಿದ್ದಾರೆ. ಆದರೆ ಇಂದಿನ ಅನೇಕ ವೈದ್ಯರು ತಮ್ಮ ವೃತ್ತಿಯನ್ನು ನಗರ ಪ್ರದೇಶ ಹಾಗೂ ವಿದೇಶಗಳಲ್ಲಿ ಮಾಡಲು ಮುಂದಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ವೈದ್ಯ ವೃತ್ತಿ ಮಾಡುವವರ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ವೈದ್ಯರ ಕೊರತೆಯಿದೆ ಎಂದು ಸಿದ್ದಶ್ರೀ ಕ್ಲಿನಿಕ್ ನ ಡಾ|| ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಹುಳಿಯಾರಿನ ಬ್ರಹ್ಮಕುಮಾರೀ ಈಶ್ವರೀಯ ರಾಜಯೋಗ ಭವನದಲ್ಲಿ ಜುಲೈ ಒಂದರ ಭಾನುವಾರ ಸಂಜೆ ಆಯೋಜಿಸಿದ್ದ ವೈದ್ಯರ ಹಾಗೂ ಪತ್ರಕರ್ತರ ದಿನಾಚರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಪ್ರತಿಯೊಬ್ಬ ಮಾನವನ ಜೀವನದಲ್ಲಿ ಸಂತೋಷದಿಂದ ಇರಬೇಕೆಂದರೆ,ಮೊದಲು ಆತನ ಆರೋಗ್ಯ ಉತ...

ಉಚಿತ ಸಾಮೂಹಿಕ ವಿವಾಹ

ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ಸನ್ನಿಧಿಯಲ್ಲಿ ರೋಟರಿ ಕಮ್ಯೂನಿಟಿ ಕಾರ್ಪ್ಸ್ ನವರು ನಡೆಸಿದ ಉಚಿತ ಸಾಮೂಹಿಕ ವಿವಾಹಮೋತ್ಸವದಲ್ಲಿ ಸಂಸಾರ ಬಂಧನಕ್ಕೊಳಗಾದ ನವ ಜೋಡಿಗಳೊಂದಿಗೆ ಗೋಡೆಕೆರೆ ಮೃತ್ಯುಂಜಯ ದೇಶೀಕೇಂದ್ರ ಸ್ವಾಮಿಗಳು,ರಾಮ್ ಹಾಲ್ ನ ಲಕ್ಷ್ಮಿಕಾಂತ್,ಇ.ರವೀಶ್,ವಿಶ್ವನಾಥ್,ಮಂಜುನಾಥ ಗುಪ್ತ,ಗಂಗಣ್ಣ ಸೇರಿದಂತೆ ಯೋಗಿನಾರಾಯಣ ಐಟಿಐ ಕಾಲೇಜಿನ ನ ವಿದ್ಯಾರ್ಥಿಗಳು ಹಾಗೂ ಇತರರು ಇದ್ದಾರೆ. ಹುಳಿಯಾರಿನ ಶ್ರೀ ಗಣಪತಿ ದೇವಾಲಯದಲ್ಲಿ ರೋಟರಿ ಕಮ್ಯೂನಿಟಿ ಕಾರ್ಪ್ಸ್ ನವರು ಭಾನುವಾರ ನಡೆಸಿದ ಉಚಿತ ಸಾಮೂಹಿಕ ವಿವಾಹಮೋತ್ಸವದಲ್ಲಿ ನವ ವಧುವರರಿಗೆ ಗೋಡೆಕೆರೆ ಮೃತ್ಯುಂಜಯ ದೇಶೀಕೇಂದ್ರ ಸ್ವಾಮಿಜೀಯವರು ವಸ್ತ್ರಗಳನ್ನು ವಿತರಿಸಿದರು.