ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಹುಳಿಯಾರು:ಬನಶಂಕರಿ ದೇವಾಲಯದಲ್ಲಿ ಸಂಭ್ರಮದ ಬನದ ಹುಣ್ಣಿಮೆ

ಹುಳಿಯಾರು: ದೇವಾಂಗ ಮಂಡಳಿ, ಬನದ ಹುಣ್ಣಿಮೆ ದೇವಾಂಗ ಯುವಕ ಸಂಘ, ಬನಶಂಕರಿ ದೇವಸ್ಥಾನ ಸಮಿತಿವತಿಯಿಂದ ೫ ನೇ ವರ್ಷದ ಬನದ ಹುಣ್ಣಿಮೆ ಕಾರ್ಯಕ್ರಮವು ಪಟ್ಟಣದ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಅಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು. ಹುಳಿಯಾರಿನ ಬನಶಂಕರಿ ದೇವಾಲಯದಲ್ಲಿ ಬನದಹುಣ್ಣಿಮೆ ಅಂಗವಾಗಿ ಭಜನಾಮಂಡಳಿಯಿಂದ ಭಜನೆ ನಡೆಯಿತು.         ಪುಷ್ಯಮಾಸದ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆ ಎನ್ನಲಾಗುವುದಿದ್ದು ಪೂರ್ಣಾನಂದ ಪ್ರದಾಯಕಳಾದ ಬನಶಂಕರಿ ದೇವಿಯು ನಾಡಿಗೆ ಸುಭೀಕ್ಷೆ ಹಾಗೂ ಜೀವರಾಶಿಗಳಿಗೆ ಸಮೃದ್ಧಿಯನ್ನು ಪಾಲಿಸಿದ ಪ್ರತೀಕವಾಗಿ ಬನದ ಹುಣ್ಣಿಮೆ ಆಚರಿಸಲಾಗುತ್ತದೆ.             ಭಾನುವಾರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಪಂಚದ್ರವ್ಯಗಳಿಂದ ಅಮ್ಮನವರಿಗೆ ಅಭಿಷೇಕ ನಡೆದು ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಮಧ್ಯಾಹ್ನ ಮುತ್ತೈದೆಯರಿಗೆ ಹಾಗೂ ಕನ್ನಿಕೆಗೆ ಬಾಗಿನ ಕೊಟ್ಟು, ಅಮ್ಮನವರಿಗೆ ಆರತಿ ಸೇವೆ, ಮಡಿಲಕ್ಕಿ ಸೇವೆ ನಡೆಯಿತು.ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.ಸಂಜೆ ವಿವಿಧ ಭಜನಾ ಮಂಡಳಿಯಿಂದ ಭಜನೆ,ಸೌಂದರ್ಯ ಲಹರಿ ಪಠಣ ಹಾಗೂ ಉಯ್ಯಾಲೋತ್ಸವ ನಡೆಯಿತು.                     ಈ ಸಂದರ್ಭದಲ...

ವಾಸವಿ ಆಂಗ್ಲ ಶಾಲೆಯಲ್ಲಿ ಇಂದು ಸಾಂಸ್ಕೃತಿಕ ಸಂಜೆ

ಹುಳಿಯಾರು ಪಟ್ಟಣದ ವಾಸವಿ ಆಂಗ್ಲ ಶಾಲೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಇಂದು (ಜ.೨೩ರ ಶನಿವಾರದಂದು )ಸಾಂಸ್ಕೃತಿಕ ಸಂಜೆ ಏರ್ಪಡಿಸಲಾಗಿದೆ.ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಆರ್.ಲಕ್ಷ್ಮೀಕಾಂತ್ ಅಧ್ಯಕ್ಷತೆ ವಹಿಸಲಿದ್ದು ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳಾ ಗವಿರಂಗಯ್ಯ,ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್,ಸಂಸ್ಥೆಯ ಗೌರವಾಧ್ಯಕ್ಷ ಟಿ.ಆರ್.ಶ್ರೀನಿವಾಸ ಶ್ರೇಷ್ಠಿ,ಕಾರ್ಯದರ್ಶಿ ಟಿ.ಎಸ್.ರಾಮನಾಥ್,ಆರ್ಯವೈಶ್ಯ ಮಂಡಳಿ ಅಧ್ಯಕ್ಷ ನಟರಾಜಗುಪ್ತಾ, ಎಲ್.ಆರ್.ಚಂದ್ರಶೇಖರ್,ಬಿ.ವಿ.ಶ್ರೀನಿವಾಸಮೂರ್ತಿ ಮತ್ತಿತರರು ಭಾಗವಹಿಸಲಿದ್ದಾರೆ.

ಬನಶಂಕರಿ ಅಮ್ಮನವರ ಪುನರ್ ಚೈತನ್ಯ ಕಾರ್ಯಕ್ರಮಕ್ಕೆ ಚಾಲನೆ

        ಹುಳಿಯಾರು ಸಮೀಪದ ಕಾಮಶೆಟ್ಟಿಪಾಳ್ಯದಲ್ಲಿ ಬನಶಂಕರಿ ಅಮ್ಮನವರ ಪುನರ್ ಚೈತನ್ಯ ಜೀವಕಳಾ,ಕರಿಬಾಣಸಾಲು ಸ್ಥಾಪನೆ,ಬನದ ಹುಣ್ಣಿಮೆ ಮುಂತಾದ ಪೂಜಾ ಕಾರ್ಯಕ್ರಮಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಲಾಯಿತು.           ಕೆಂಕೆರ ಕಾಳಮ್ಮ ಹಾಗೂ ಹುಳಿಯಾರಿನ ಕೆಂಚಮ್ಮ ದೇವಿಯು ಆಗಮನದೊಂದಿಗೆ ಗಂಗಾಪೂಜೆ ನೆರವೇರಿಸಿ ದೇವಾಲಯ ಪ್ರವೇಶದೊಂದಿಗೆ ಪೂಜಾ ಕಾರ್ಯಕ್ರಮ ಪ್ರಾರಂಭವಾಯಿತು.             ಶನಿವಾರದಂದು ಬೆಳಿಗ್ಗೆ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಬನಶಂಕರಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ.ಸಂಜೆ ೬ ಗಂಟೆಗೆ ಕಲಶ ಸ್ಥಾಪನೆ,ಪೂಜೆ ಮತ್ತು ಕರಿಬಾಣಸಾಲು ಸ್ಥಾಪನೆ ಮುಂತಾದ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದೆ.                ೨೪ರ ಭಾನುವಾರದಂದು ಕುಪ್ಪೂರು ತಮ್ಮಡಿಹಳ್ಳಿಯ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬೆಳಿಗ್ಗೆ ಐದಕ್ಕೆ ಅಮ್ಮನವರಿಗೆ ಜೀವಕಳಾ ಚೈತನ್ಯ ಪೂರಕ ಮಂತ್ರಪಠನ,ರುದ್ರಾಭಿಷೇಕ,ಅಷ್ಟೋತ್ತರ ಪೂಜೆ,ಗಣಪತಿ ಹೋಮ,ವಾಸ್ತು ಹೋಮ,ನವಗ್ರಹ ಹೋಮ,ರುದ್ರ ಚಂಡೀಕಾ ದುರ್ಗಾ ಹೋಮ,ಪೂರ್ಣಾಹುತಿ ಮತ್ತು ನವ ಕನ್ನಿಕೆಯರಿಂದ ಅಮ್ಮನವರಿಗೆ ಕುಂಬಾಭಿಷೇಕ,ಕುಂಕುಮಾರ್ಚನೆ,ಮಹಾಮಂಗಳಾರತಿ ನಡೆದು ನಂತರ ಪ್ರಸಾದ ವಿನಿಯೋಗ ಮಾಡಲಾಗ...

ಜ.23 : ಬೋರನಕಣಿವೆಯಲ್ಲಿ ಜ.೨೩ ರಿಂದ ಶೈಕ್ಷಣಿಕ ಸಮಾವೇಶ

                    ಬೋರನಕಣಿವೆಯ ಸುವರ್ಣ ವಿದ್ಯಾ ಚೇತನ, ಬೆಂಗಳೂರಿನ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ, ಚಿಕ್ಕನಾಯಕನಹಳ್ಳಿ ಸೃಜನ ತಾಲ್ಲೂಕು ವಿಜ್ಞಾನ ಕೇಂದ್ರ, ಸರ್ಕಾರಿ ಪದವಿ ಪೂರ್ವಕಾಲೇಜು ಪ್ರೌಢಶಾಲಾ ವಿಭಾಗ ಹಾಗೂ ಐ.ಟಿ.ಐ. ವಿಭಾಗ, ಬೋರನಕಣಿವೆ ಇವರ ಸಂಯುಕ್ತಾಶ್ರಯದಲ್ಲಿ ಜನವರಿ ೨೩ ಮತ್ತು ೨೪ ರಂದು ಸರ್ಕಾರಿ ಶಾಲಾ ಕಾಲೇಜು ಉಳಿಸಿ ಅಭಿಯಾನದ ಅಂಗವಾಗಿ ಹುಳಿಯಾರು ಹೋಬಳಿ ಬೋರನ ಕಣಿವೆಯಲ್ಲಿ ಶೈಕ್ಷಣಿಕ ಸಮಾವೇಶ ಹಾಗೂ ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ಏರ್ಪಡಿಸಲಾಗಿದೆ.                     ಜ.೨೩ ರಂದು ೧೦.೩೦ ಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೆಚ್.ಎನ್. ಗೋಪಾಲಕೃಷ್ಣ ಅವರು ಶೈಕ್ಷಣಿಕ ಸಮಾವೇಶ ಉದ್ಘಾಟಿಸಲಿದ್ದು ಬೋರನಕಣಿವೆಯ ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯರಾದ ಬಿ.ಎನ್.ಉಮಾ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಚಿ.ನಾ. ಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ ತಿಮ್ಮರಾಯಪ್ಪ, ಉಪಾಧ್ಯಕ್ಷರಾದ ಜಯಲಿಂಗರಾಜು, ಪ್ರೌಢವಿಭಾಗ ಹಿರಿಯ ಸಹ ಶಿಕ್ಷಕರಾದ ಎಂ. ಮೈಲಾರಯ್ಯ, ಐ.ಟಿ.ಐ. ಉಪನ್ಯಾಸಕರಾದ ಎನ್. ಕೃಷ್ಣಪ್ಪ ಆಗಮಿಸುವರು.                   ಶಿಕ್ಷಣ...

ಜನ ಹೋರಾಟಕ್ಕೆ ಮಣಿದ ಬೆಸ್ಕಾಂ

ಇಂದಿನಿಂದ ಆರುಗಂಟೆಗಳ ಕಾಲ ವಿದ್ಯುತ್ ಜಾರಿ ---------------------------- ಹುಳಿಯಾರು ಹೋಬಳಿಯ ದಸೂಡಿಯಲ್ಲಿ ಕಳೆದ ತಿಂಗಳು ನಡೆದ ಪ್ರತಿಭಟನಾ ಸಂದರ್ಭದಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು ನೀಡಿದ್ದ ಭರವಸೆಯಂತೆ ಶುಕ್ರವಾರದಿಂದ ಜಾರಿಗೆ ಬರುವಂತೆ ಹಗಲಿನ ವೇಳೆ ಒಂದು ಗಂಟೆ ಕಾಲ ವಿದ್ಯುತ್ ಸಮಯವನ್ನು ಹೆಚ್ಚಳಮಾಡಲಾಗಿದೆ.           ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಗ್ರಾಪಂ ಅಧ್ಯಕ್ಷ ದಬ್ಬಗುಂಟೆ ರವಿಕುಮಾರ್ ಗ್ರಾಮಾಂತರ ಪ್ರದೇಶದಲ್ಲಿ ಲೋಡ್ ಶೆಡ್ಡಿಂಗ್ ನೆಪದಲ್ಲಿ ಹಿಂದಿನಿಂದಲೂ ಪ್ರತಿದಿನ ಹಗಲಿನಲ್ಲಿ ಒಂದು ಗಂಟೆ ಹಾಗೂ ರಾತ್ರಿ ವೇಳೆಯಲ್ಲಿ ಮೂರುಗಂಟೆ ಕಾಲ ವಿದ್ಯುತ್ ನೀಡುತ್ತಿದ್ದರು.ರಾತ್ರಿಯ ಅವೇಳೆಯಲ್ಲಿ ಜಮೀನಿಗೆ ನೀರು ಕಟ್ಟುವ ಪರಿಸ್ಥಿತಿಯಿಂದ ಬೇಸತ್ತ ರೈತರು ಹಾಗೂ ಗ್ರಾಮಸ್ಥರು ಪ್ರತಿಭಟಿಸಿದ್ದರಿಂದ ಎಚ್ಚತ್ತ ಇಲಾಖೆಯವರು ಇಂದಿನಿಂದ ಹಗಲು ಹೊತ್ತು ಎರಡು ಗಂಟೆ ಹಾಗೂ ಸಂಜೆ ನಾಲ್ಕು ಗಂಟೆಗಳ ಕಾಲ ಒಟ್ಟು ಆರು ಗಂಟೆಗಳ ಕಾಲ ವಿದ್ಯುತ್ ಜಾರಿಮಾಡಿದ್ದಾರೆ ಎಂದರು.          ಗ್ರಾಮೀಣ ಭಾಗದ ಜನರ ಸಮಸ್ಯೆಗೆ ಸ್ಪಂದಿಸಿದ ಇಲಾಖೆಯವರ ಕ್ರಮಕ್ಕೆ ಗ್ರಾಮಸ್ಥರ ಪರವಾಗಿ ರವಿಕುಮಾರ್ ಅಭಿನಂದಿಸಿದ್ದಾರೆ

ಒಳ ಚರಂಡಿ ವ್ಯವಸ್ಥೆ ಕಲ್ಪಿಸಿ

          ಹುಳಿಯಾರು ಹೋಬಳಿಯ ತಾಲ್ಲೂಕು ಹೊಯ್ಸಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಲಕ್ಕೇನಹಳ್ಳಿ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಿ ಎಂದು ಮುಖಂಡ ಲ.ಪು.ಕರಿಯಪ್ಪ ಒತ್ತಾಯಿಸಿದ್ದಾರೆ.               ಲಕ್ಕೇನಹಳ್ಳಿ ಗ್ರಾಮದ ಹೊಸೂರು ಬಡಾವಣೆಯಲ್ಲಿ ಸಾಕಷ್ಟು ತಿಂಗಳುಗಳಿಂದ ರಸ್ತೆ ಹದಗೆಟ್ಟಿದ್ದು, ಟ್ಯಾಂಕ್‌ನಿಂದ ಹರಿದು ಬರುವ ಕಲುಷಿತ ನೀರು ರಸ್ತೆಯಲ್ಲಿ ನಿಂತಿದ್ದು, ಆಳವಾದ ಗುಂಡಿಗಳು ಬಿದ್ದಿವೆ. ಪ್ರತಿನಿತ್ಯ ಟ್ಯಾಂಕರ್ ಇತ್ಯಾದಿ ವಾಹನಗಳು ಓಡಾಡುತ್ತಿದ್ದು, ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಜನ, ಜಾನುವಾರುಗಳು ಓಡಾಡಲೂ ತುಂಬಾ ತೊಂದರೆಯಾಗಿದೆ. ಗ್ರಾಮದಲ್ಲಿ ಒಳ ಚರಂಡಿ ವ್ಯವಸ್ಥೆ ಮಾಡಿಸಿದರೆ ಸಮಸ್ಯೆ ಬಗೆಹರಿಯಲಿದ್ದು ಸಂಬಂಧಿಸಿದವರು ಇತ್ತ ಗಮನಹರಿಸಬೇಕಿದೆ . 

ಸೊನೆ ಮಳೆ ,ರೈತರಿಗೆ ತಂತು ಆತಂಕ

------------- ಹುಳಿಯಾರು : ಪಟ್ಟಣ ಸೇರಿದಂತೆ ಹೋಬಳಿವ್ಯಾಪ್ತಿಯಲ್ಲಿ ಬುಧವಾರ ಮುಂಜಾನೆ ಸೊನೆ ಮಳೆಯಾಗಿದೆ .ಮಂಗಳವಾರದಿಂದಲೂ ಮೋಡದ ವಾತವರಣ ಕಂಡುಬಂದಿದ್ದು ಶೀತದ ವಾತಾವರಣ ನಿರ್ಮಾಣವಾಗಿ ಚಳಿ ಇಲ್ಲದಂತಾಗಿದೆ. ಹೋಬಳಿಯ ವಿವಿಧೆಡೆ ರೈತರು ರಾಗಿ,ಹುರುಳಿ,ಹುಚ್ಚೇಳು,ಅವರೆ ,ಜೋಳ ಕಟಾವು ಮಾಡಿದ್ದು ಅದರ ತರೆಗೆಲೆ ದನ ಕುರಿಗೆ ಮೇವಾಗುತ್ತಿದ್ದು ಮಳೆಯೀದಾಗಿ ಕೂಳೆ ಮೇವಿಗೆ ಗೆದ್ದಲು ಬೀಳುವ ಸಂಭವವಿದೆ.ರಾಗಿ ಒಕ್ಕಣೆ ಮಾಡುವ ಸಮಯದಲ್ಲಿ ಸೋನೆಮಳೆಯಾಗಿದ್ದು ಮತ್ತೆ ರಾಗಿ ಕಪ್ಪಾಗುವುದೆಂಬ ರೈತರಿಗೆ ಆತಂಕ ಉಂಟುಮಾಡಿದೆ. ಕಿತ್ತಿದ್ದು ಅದನ್ನು ಒಣಗಿಸಲು ಮುಂದಾಗಿದ್ದರಾದರೂ ಬಿಸಿಲಿಲ್ಲದ ಕಾರಣ ಕೈಕಟ್ಟಿಕೂರುವಂತಾಗಿ, ಹೀಗಾದರೆ ಹೆಸರನ್ನು ಯಾವರೀತಿ ಒಕ್ಕಣೆ ಮಾಡುವುದು, ಸೊನೆ ಮಳೆ ಅವರೆಕಾಯಿಗೆ ಅನುಕೂಲವಾದರೆ ದಾಳಿಂಬೆ ಬೆಳೆಗೆ ವೈರಸ್ ರೋಗಕ್ಕೆ ದಾರಿ ಮಾಡಕೊಡಲಿದೆ.