ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಹುಳಿಯಾರು: ಹಳ್ಳಿ ಪ್ರತಿಭೆ ರೇಖಾ ಬಸವರಾಜುರವರಿಗೆ ಡಾಕ್ಟರೇಟ್

ಹುಳಿಯಾರು: ಹಳ್ಳಿ ಪ್ರತಿಭೆ ರೇಖಾ ಬಸವರಾಜುರವರಿಗೆ ಡಾಕ್ಟರೇಟ್ --------------------------------- ಹುಳಿಯಾರು ಸಮೀಪದ ಕೆಂಕೆರೆಯ ಬರದಲೆಪಾಳ್ಯದ ಬಿ.ರೇಖಾ ದೂರಸಂಪರ್ಕ ಸಾಧನದ ಕುರಿತು ನಡೆಸಿದ ಸುದೀರ್ಘ ಸಂಶೋಧನೆಗೆ ಡಾಕ್ಟರೇಟ್ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಜರುಗಿದ ಜೈನ್ ವಿಶ್ವವಿದ್ಯಾಲಯದ ೮ನೇ ಘಟಿಕೋತ್ಸವದಲ್ಲಿ ಶ್ರೀಮತಿ ರೇಖಾರವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಸೆಕ್ಯೂರ್ ಸ್ಕೇಲೆಬಲ್ ಅಂಡ್ ಇಂಟರ್‌ಒಪರೇಬಲ್ ಇಂಟರ್-ಡೊಮೇನ್ ರೌಟಿಂಗ್ ಇನ್ ಹೆಟೆರೋಜಿನಸ್ ಮ್ಯಾನೆಟ್ಸ್ ಎಂಬ ಪ್ರೌಢ ಸಂಶೋಧನಾ ಪ್ರಬಂಧವನ್ನು ಡಾ. ಅಶೋಕ್‌ರವರ ಮಾರ್ಗದರ್ಶನದಲ್ಲಿ ಡಾ. ರೇಖಾ ಮಂಡಿಸಿದ್ದರು. ಇವರು ಪ್ರಸ್ತುತ ಬೆಂಗಳೂರಿನ ಎಸ್.ಜೆ.ಬಿ.ಐ.ಟಿ. ತಂತ್ರಜ್ಞಾನ ಮಹಾವಿದ್ಯಾಲಯದ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸಹ-ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಪ್ರತಿಭೆ ಡಾ. ರೇಖಾ.ಬಿ ಬರದಲೇಪಾಳ್ಯದ ಬಸವರಾಜು ಮತ್ತು ಚನ್ನಬಸಮ್ಮ ದಂಪತಿಗಳ ಹಿರಿಯ ಮಗಳಾಗಿದ್ದು ಹುಟ್ಟೂರು ಕೆಂಕೆರೆಯಲ್ಲಿಯೇ ಕನ್ನಡ ಮಾಧ್ಯಮದಲ್ಲಿ ೫ ನೇ ತರಗತಿಯವರೆಗೆ ಓದಿದ್ದಾರೆ. ನಂತರ ತುಮಕೂರಿನ ನವೋದಯ ವಿದ್ಯಾಲಯದಲ್ಲಿ, ದಾವಣಗೆರೆಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್, ಬೆಂಗಳೂರಿನ ಬಿಎಮ್‌ಎಸ್‌ನಲ್ಲಿ ಎಮ್.ಟೆಕ್. ಮುಗಿಸಿದ್ದಾರೆ. ಇದೀಗ ಜೈನ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಪ್ರತಿಭಾವಂತರ ಈ ಕುಟುಂಬದಲ್ಲ...

ಅಕ್ರಮ ಇಟ್ಟಿಗೆ ಕಾರ್ಖಾನೆಗಳ ತನಿಖೆಗೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ತಂಡದ ಆಗಮನ

ತಾಲ್ಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ಬಗ್ಗೆ ದೂರು ------------------------------------------------- ಅಕ್ರಮ ಮರಳು ಗಣಿಗಾರಿಕೆ ಹಾಗೂ ಅಕ್ರಮ ಇಟ್ಟಿಗೆ ಕಾರ್ಖಾನೆಗಳ ತನಿಖೆಗೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ತಂಡದ ಆಗಮನ -------------------------------------------- ಹುಳಿಯಾರು ಹೋಬಳಿಯ ಭಟ್ಟರಹಳ್ಳಿ ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಅಕ್ರಮ ಇಟ್ಟಿಗೆ ಕಾರ್ಖಾನೆಗಳಿಂದ ಸಾಕಷ್ಟು ದುಷ್ಪರಿಣಾಮಗಳು ಆಗುತ್ತಿದ್ದು ಈ ಬಗ್ಗೆ ಗ್ರಾಮಸ್ಥರ ಪರವಾಗಿ ಲಂಚಮುಕ್ತ ನಿರ್ಮಾಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ನೀಡಿದ ದೂರಿನ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಾಲ್ಕು ಅಧಿಕಾರಿಗಳ ತಂಡ ರಚನೆಯಾಗಿದ್ದು ಸೋಮವಾರ ಸೆ.3 ರಿಂದ ಮೂರು ದಿನಗಳ ಕಾಲ ಅಧಿಕಾರಿಗಳ ತಂಡ ದೂರುದಾರರ ಸಮ್ಮುಖದಲ್ಲಿ ಸ್ಥಳ ತನಿಖೆ ನಡೆಸಲಿದೆ.         ಅಕ್ರಮ ಗಣಿಗಾರಿಕೆ ಹಾಗೂ ಅದಕ್ಕೂ ಮೀರಿ ಇಟ್ಟಿಗೆ ಕಾರ್ಖಾನೆಗಳು ಕೆರೆಯನ್ನು ಮಣ್ಣಿಗಾಗಿ ಬಗೆಯುತ್ತಿರುವ ಬಗ್ಗೆ ಧ್ವನಿ ಎತ್ತಿರುವ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ ಹಿನ್ನಲೆಯಲ್ಲಿ ತನಿಖಾತಂಡ ಆಗಮಿಸಲಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪತ್ರ ದೂರಿನಲ್ಲಿ ಏನಿ...

ಪಂಚಾಯ್ತಿಯಲ್ಲಿ ಆಪರೇಟರ್ ಹುದ್ದೆ ನೀಡದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವೆ

ಪಂಚಾಯ್ತಿಯಲ್ಲಿ ಆಪರೇಟರ್ ಹುದ್ದೆ ನೀಡದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವೆ ---------------------------------------- ಕಳೆದ ಮೂರು ವರ್ಷಗಳಿಂದಲೂ ಉದ್ಯೋಗಕ್ಕಾಗಿ ಅಲೆದ ಲಕ್ಷ್ಮೀಯ ಗೋಳಾಟ -------------------------------------- ಜಿಲ್ಲಾ ಉಸ್ತುವಾರಿ ಸಚಿವರ ಆದೇಶಕ್ಕೂ ಕಿಮ್ಮತ್ತು ನೀಡದ ಅಧಿಕಾರಿಗಳು ---------------------------------------- ಹುಳಿಯಾರು: ಹುಳಿಯಾರು ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಯನ್ನು ಕಳೆದ ಮೂರು ವರ್ಷದ ಹಿಂದೆ ನಾನು ನಿರ್ವಹಿಸಿದ್ದು ನನ್ನನ್ನು ವಿನಾಕಾರಣ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದು ಆ ಹುದ್ದೆಯನ್ನು ನನಗೆ ನೀಡಲೇಬೇಕು.ಇಲ್ಲದಿದ್ದಲ್ಲಿ ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಲಕ್ಷ್ಮೀ ಎಂಬಾಕೆ ತನ್ನ ಅಳಲು ತೋಡಿಕೊಂಡು ಎಲ್ಲರೆದುರಿಗೂ ಕಣ್ಣೀರಿಟ್ಟ ಪ್ರಸಂಗ ಇಂದಿನ ಗ್ರಾಮಸಭೆಯಲ್ಲಿ ಜರುಗಿತು. ಹುಳಿಯಾರು ಪಂಚಾಯ್ತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಉದ್ಯೊಗಕ್ಕಾಗಿ ಒತ್ತಾಯಿಸಿದ ಲಕ್ಷ್ಮೀ.                   ಹುಳಿಯಾರು ಗ್ರಾಮ ಪಂಚಾಯಿತಿಯಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಬಂದಿರುವ ಒಂದು ಕೋಟಿರೂ ಹಣದ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ಕರೆಯಲಾಗಿದ್ದ ಗ್ರಾಮಸಭೆಯಲ್ಲಿ ತನ್ನ ತಾಯಿಯೊಂದಿಗೆ ಆಗಮಿಸಿದ್ದ ಈಕೆ ಜಿಲ್ಲಾ ಪಂಚಾಯಿತಿ ಸದಸ್ಯ,ತಾಲೂಕು ಪಂಚಾಯಿತಿ ಸದಸ್...

ಸರ್ದಾರ್ ಪಟೇಲರ ಜಯಂತಿ: ಹುಳಿಯಾರಿನಲ್ಲಿ ಏಕತೆಗಾಗಿ ಓಟ

ಹುಳಿಯಾರು :ಭಾರತದ ಉಕ್ಕಿನ ಮನುಷ್ಯ ಮತ್ತು ರಾಷ್ಟ್ರದ ಅಖಂಡತೆಯ ಪ್ರವರ್ತಕ ಸರದಾರ್ ವಲ್ಲಭಭಾಯಿ ಪಟೇಲ್ ಅವರ ನೂರಾ ನಲವತ್ತೆರಡನೇ ಜನ್ಮ ದಿನೋತ್ಸವದ ಪ್ರಯುಕ್ತ ಹುಳಿಯಾರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏಕತೆಗಾಗಿ ಓಟವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.          ಕಾಲೇಜು ಆವರಣದಿಂದ ಪ್ರಾರಂಭವಾದ ಏಕತಾ ಓಟ ಹುಳಿಯಾರು ಪಟ್ಟಣ ತಲುಪಿ ರಾಮಾಹಾಲ್ ಮುಂಭಾಗದಿಂದ ಬಸ್ ನಿಲ್ದಾಣ ತಲುಪಿ ಮುಕ್ತಾಯಗೊಂಡಿತು.ಸುಮಾರು ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓಟದಲ್ಲಿ ಪಾಲ್ಗೊಂಡಿದ್ದರು.            ಇದಕ್ಕೂ ಮುನ್ನಾ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ಜನತಾ ಪಕ್ಷದ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ.ಬಸವರಾಜು ಏಕತೆಗಾಗಿ ಓಟದಲ್ಲಿ ಪಾಲ್ಗೊಳ್ಳುವ ಮೂಲಕ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸ್ಮರಿಸೋಣ ಮತ್ತು ದೇಶಾದ್ಯಂತ ಸಾಮರಸ್ಯ ಭಾತೃತ್ವ ಭಾವನೆಯನ್ನು ಪಸರಿಸೋಣ ಎಂದು ಕರೆನೀಡಿದರು.ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಎಲ್ಲಾ ಜನರನ್ನು, ಹಳ್ಳಿ ಹಳ್ಳಿಗಳನ್ನು, ದೇಶವನ್ನು ಒಗ್ಗೂಡಿಸುವುದೇ ಈ ಓಟದ ಉದ್ದೇಶವಾಗಿದ್ದು ಈ ಓಟವು ಎಲ್ಲಾ ಭಾರತೀಯರ ಕನಸನ್ನು, ಬಯಕೆಯನ್ನು ಈಡೇರಿಸುವ ಪ್ರಯತ್ನವಾಗಿದೆ ಎಂದರು. ಹುಳಿಯಾರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಏಕತೆಗಾಗಿ ಓಟದ ಸ...

ಹಬ್ಬದ ಎಫೆಕ್ಟ್; ಬೆಂಗಳೂರು ಬಸ್ ಗಳು ರಶೋ.......ರಶ್

ಹುಳಿಯಾರು ; ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನದಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಂದ ಜನಜಂಗುಳಿಯಾಗಿ ಬೆಂಗಳೂರಿಗೆ ತೆರಳುವ ಯಾವೊಂದು ಬಸ್ ಬಂದರೂ ಸಾಕು ಹರಸಾಹಸ ಮಾಡಿಯಾದರು ಬಸ್ ನೊಳಗೆ ಪ್ರವೇಶ ಮಾಡೀಯೇ ತೀರುವ ಪರಿಸ್ಥಿತಿ ಪ್ರಯಾಣಿಕರಲ್ಲಿ ಉಂಟಾಗಿತ್ತು.ದೀಪಾವಳಿ ಹಬ್ಬದ ಸಾಲು ರಜಾ ದಿನ ಮುಗಿಸಿ ವಾಪಸ್ ತೆರಳಲು ಹುಳಿಯಾರು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಜನರಿಗೆ ಬರುತ್ತಿದ್ದ ಬಸ್ಸುಗಳು ಭರ್ತಿಯಾಗಿ ಬರುತ್ತಿದ್ದರಿಂದ ಬಸ್ ಹತ್ತಲು ಹೈರಾಣಾಗುವ ಸ್ಥಿತಿ ಉಂಟಾಗಿತ್ತು. ಬೆಂಗಳೂರು ಕಡೆ ಹೋಗಲು ಯಾವ ಬಸ್ ಬಂದರೂ ಸಹ ಅವೆಲ್ಲಾ ಹೊಸದುರ್ಗದಿಂದಲೇ ಭರ್ತಿಯಾಗಿ ಬರುತ್ತಿದ್ದರಿಂದ ಕಾಲಿಡುವುದಕ್ಕು ಆಸ್ಪದವಿರಲಿಲ್ಲ. ಹುಳಿಯಾರು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಸಾಕಷ್ಟು ಮಂದಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವವರೇ ಆಗಿದ್ದು ದೀಪಾವಳಿ ಹಬ್ಬಕ್ಕೆಂದು ತಂತಮ್ಮ ಊರುಗಳಿಗೆ ಬಂದಿದ್ದರು. ಹಬ್ಬದ ರಜೆ ಮುಗಿಸಿ ಸೋಮವಾರದಂದು ವಾಪಸ್ಸ್ ಕೆಲಸಕ್ಕೆ ಹಾಜರಾಗಲು ಎಲ್ಲರೂ ಮಧ್ಯಾಹ್ನದಿಂದಲೇ ಬಂದಿದ್ದರಿಂದ ಬಸ್ ನಿಲ್ದಾಣ ಗಿಜುಗುಟ್ಟುತ್ತಿತ್ತು. ಎಲ್ಲಾ ಕೆಎಸಾರ್ಟಿಸಿ ಬಸ್ಸುಗಳು ಹೊಸದುರ್ಗದಿಂದ ಬರುತ್ತಿದ್ದವಾದ್ದರಿಂದ ಹುಳಿಯಾರಿಗೆ ಬರುವಷ್ಟರಲ್ಲೇ ಬಸ್ ಸೀಟ್ ಗಳೆಲ್ಲಾ ತುಂಬಿದ್ದು ಪ್ರಯಾಣಿಕರು ಪರದಾಡುವಂತಾಗಿತ್ತು. ಬರುತ್ತಿದ್ದ ಬಸ್ ಗೆ ಒಮ್ಮೆಲೆ ಎಲ್ಲಾ ಪ್ರಯಾಣಿಕರು ನುಗ್ಗುತ್ತಿದ್ದರಿಂದ ಬಸ್ ಹತ್ತುವುದೆ...

ಹುಳಿಯಾರಿನಲ್ಲಿ ಯೋಗಾಸನ ತರಬೇತಿ ಶಿಬಿರಕ್ಕೆ ಚಾಲನೆ

ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವ ಆದ್ಯಾತ್ಮಿಕ ವಿದ್ಯೆಯೇ ಯೋಗ ಹುಳಿಯಾರು :ಆಧುನಿಕ ಜೀವನ ಶೈಲಿಯಿಂದಾಗಿ ಎದುರಾಗುತ್ತಿರುವ ಬಹುತೇಕ ಆರೋಗ್ಯದ ಸಮಸ್ಯೆಗಳಿಗೆ ಯೋಗ ಮದ್ದಾಗಿದ್ದು ಇದು ನಮ್ಮ ಭಾರತೀಯ ಸಂಸ್ಕೃತಿಯ ಹೆಮ್ಮೆಯ ಪ್ರತೀಕ ಎಂದು ಜಿಗಣಿಯ ವಿವೇಕಾನಂದ ಯೋಗ ಕೇಂದ್ರದ ಯೋಗಗುರು ರಾಮಲಿಂಗಂ ಹೇಳಿದರು. ಪಟ್ಟಣದ ಶ್ರೀ ಮಾತಾ ಛಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ ಧ್ಯಾನಮಂದಿರದಲ್ಲಿ ಉಚಿತ ಯೋಗಾಸನ ತರಬೇರತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯೋಗದ ಮಹತ್ವ ಹಾಗೂ ಸಮತೋಲನ ಆಹಾರದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ಅವರು ನಾವು ಪ್ರತಿದಿನ ಸೇವಿಸುವ ಆಹಾರ ಹಾಗೂ ಜೀವನ ಕ್ರಮದಿಂದ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆ ಹೆಚ್ಚಾಗುತ್ತಿದ್ದು ಜನರ ಆರೋಗ್ಯ ಹದಗೆಡುವಂತಾಗಿದೆ. ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದ್ದು, ಆಸನಗಳಿಂದ ಜೀವನಕ್ರಮ ಸರಳವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಯೋಗ ಎಂದರೆ ಕೇವಲ ದೈಹಿಕ ಕಸರತ್ತಲ್ಲ.ಸರ್ಕಸ್ಸು ಅಲ್ಲ.ಅದೊಂದು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವ ಆಧ್ಯಾತ್ಮಿಕ ವಿದ್ಯೆ.ವಯಸ್ಸಿನ ಅಂತರವಿಲ್ಲದೆ ಪ್ರತಿಯೊಬ್ಬರೂ ಯೋಗ ಮಾಡಬಹುದಿದ್ದು ಯೋಗ ಮಾಡುವುದಕ್ಕೂ ಯೋಗ ಬೇಕು ಎಂದರು. ಈ ಸಂದರ್ಭದಲ್ಲಿ ಶ್ರೀ ಮಾತಾ ಛಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗಂಗಾಧರ್,ಜಿಲ್ಲಾಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ,ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಎಂ.ಎಸ್.ನಟರಾಜು,ಹುಳಿಯಾರ...

೫೦ ಮನೆಗಳ ಈ ಗ್ರಾಮದಲ್ಲಿ ಬಯಲು ಬಹಿರ್ದೆಸೆ ಜೀವಂತ

ಸರ್ಕಾರದ ಶೌಚಾಲಯದ ಆಂದೋಲನ ಈ ಗ್ರಾಮಕ್ಕೆ ತಲುಪಿಲ್ಲ. ೫೦ ಮನೆಗಳ ಈ ಗ್ರಾಮದಲ್ಲಿ ಬಯಲು ಬಹಿರ್ದೆಸೆ ಜೀವಂತ ವರದಿ: ಡಿ.ಆರ್.ನರೇಂದ್ರಬಾಬು ಹುಳಿಯಾರು: ಬಯಲು ಬಹಿರ್ದೆಸೆ ಮುಕ್ತ ಆರೋಗ್ಯವಂತ ಕರ್ನಾಟಕ ಮಾಡಲು ಸರ್ಕಾರ ಶೌಚಾಲಯದ ಆಂದೋಲನವನ್ನೇ ಹುಟ್ಟು ಹಾಕಿದರೂ ಕೂಡ ಇದರ ಅರಿವೇ ಇಲ್ಲದಂತೆ ಬಯಲಿನಲ್ಲಿಯೇ ಬಹಿರ್ದೆಸೆಗೆ ಗುವ ಗ್ರಾಮ ಇಂದಿಗೂ ಇರುವುದು ಯೋಜನೆಯ ಸಫಲತೆಯನ್ನು ಪ್ರಶ್ನಿಸುವಂತಾಗಿದೆ. ಶೌಚಾಲಯವಿಲ್ಲದ ಹುಳಿಯಾರಿನ ಕೂಗಳತೆಯಲ್ಲಿರುವ ಸೈಯದ್ ಸಾಬ್ ಪಾಳ್ಯದ ನೋಟ.         ಗ್ರಾಮೀಣ ಭಾಗದಲ್ಲಿ ಹೆಚ್ಚು ಕಡಿಮೆ ಎಲ್ಲರೂ ಶೌಚಾಲಯ ಹೊಂದಿ ಸಂಪೂರ್ಣ ಬಯಲು ಮುಕ್ತ ಕರ್ನಾಟಕ ಎನ್ನುವ ಹೊತ್ತಿನಲ್ಲೇ,ಸರ್ಕಾರದ ನೈರ್ಮಲ್ಯೀಕರಣ ಯೋಜನೆಯ ಫಲ ಇವರಿಗೆ ದೊರೆಯದ ಕಾರಣ ಶೌಚಾಲಯ ಹೊಂದಿರದ ಈ ಗ್ರಾಮ ಇದೀಗ ಬೆಳಕಿಗೆ ಬಂದಿದೆ.          ಹೌದು, ಹುಳಿಯಾರಿನ ಕೂಗಳತೆಯಲ್ಲಿರುವ ಸೈಯದ್ ಸಾಬ್ ಪಾಳ್ಯದಲ್ಲಿ ಐವತ್ತು ಕುಟುಂಬಗಳಿದ್ದು,ಶೌಚಾಲಯದ ಬಗ್ಗೆ ಅರಿವಿದ್ದರೂ ಕೂಡ ಅನುದಾನ ಬರುವುದಿಲ್ಲ,ಬಂದರೂ ತಡವಾಗುತ್ತದೆ ಎಂಬ ನೆಪವೊಡ್ಡಿ ಶೌಚಾಲಯದ ಉಸಾಬರಿಯೇ ಬೇಡವೆಂದು ಸುಮ್ಮನಾಗಿದ್ದಾರೆ. ಶೌಚಾಲಯದ ಯೋಜನೆಗಳ ಬಗ್ಗೆ ಹಾಗೂ ಕೊಡಮಾಡುವ ಅನುದಾನದ ಬಗ್ಗೆ ಗ್ರಾಮಸ್ಥರನ್ನು ಭೇಟಿ ಮಾಡಿ ಅರಿವು ಮೂಡಿಸುತ್ತಿರುವ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೆಚ್.ಎನ್...