ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತಮ್ಮಡಿಹಳ್ಳಿಯಲ್ಲಿ ನ.೧ರಂದು ತೆಪ್ಪೋತ್ಸವ

16ವರ್ಷಗಳ ನಂತರ ನಡೆಯುತ್ತಿರುವ ಅಪರೂಪದ ಕಾರ್ಯಕ್ರಮ ------------------------------- ಹುಳಿಯಾರು:ಹೋಬಳಿಯ ತಮ್ಮಡಿಹಳ್ಳಿಯಲ್ಲಿ ನವಂಬರ್ 1ರ ಭಾನುವಾರ ಬೆಳಿಗ್ಗೆ 10ಗಂಟೆಗೆ ಸಿದ್ದರಾಮೇಶ್ವರ ಸ್ವಾಮಿಯವರ ತೆಪ್ಪೋತ್ಸವ ಹಮ್ಮಿಕೊಳ್ಳಲಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ 16ವರ್ಷಗಳ ನಂತರ ಕೆರೆ ತುಂಬಿದ್ದು ಈ ನಿಮಿತ್ತ ಶ್ರೀಸಿದ್ದರಾಮೇಶ್ವರ ಸ್ವಾಮಿಯವರನ್ನು ಪುಷ್ಪಾಲಂಕೃತ ಮಂಟಪದಲ್ಲಿ ಕೂರಿಸಿ ಊರಮುಂದಿರುವ ಕೆರೆಯಲ್ಲಿ ತೆಪ್ಪೋತ್ಸವ ನಡೆಸಲಾಗುವುದು. ಈ ಅಪರೂಪದ ಕಾರ್ಯಕ್ರಮಕ್ಕೆ ಯಳನಾಡು-ಅರಸಿಕೆರೆ ಮಹಾಸಂಸ್ಥಾನ ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮಿಗಳು,ತಿಪಟೂರು ತಾಲ್ಲೂಕ್ ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಗುರುಪರದೇಶಿಕೇಂದ್ರಮಹಾಸ್ವಾಮಿಗಳು,ವಿರಕ್ತಮಠ ಕುಪ್ಪೂರು ತಮ್ಮಡಿಹಳ್ಳಿಯ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮಿಗಳು ಆಗಮಿಸಿ ದಿವ್ಯಸಾನಿಧ್ಯ ವಹಿಸಲಿದ್ದಾರೆ. ಈ ಅಪರೂಪದ ದೃಶ್ಯವನ್ನು ಕಣ್ ತುಂಬಿಕೊಳ್ಳಲು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಲಾಗಿದೆ.

ನಾಳೆಯಿಂದ ಭಟ್ಟರಹಳ್ಳಿಯಲ್ಲಿ ದಸರಾ ಮಹೋತ್ಸವ

ಹುಳಿಯಾರು:ಹೋಬಳಿಯ ಭಟ್ಟರಹಳ್ಳಿಯಲ್ಲಿ ಅ.೩೧ರಿಂದ ಶ್ರೀ ಗುರುಸಿದ್ದರಾಮೇಶ್ವರ ಸ್ವಾಮಿಯ ದಸರಾ ಮಹೋತ್ಸವ ಆರಂಭವಾಗಲಿದ್ದು ನ.೪ರವರೆಗೆ ನಡೆಯಲಿದೆ. ಅ.೩೧ರಂದು ಹಣ್ಣುಕಾಯಿ ಸೇವೆ,ಅಡ್ಡಪಲ್ಲಕ್ಕಿ ಉತ್ಸವ,ರಾತ್ರಿ ಆರತಿ ಮಹೋತ್ಸವ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ನ.೧ರಂದು ಸ್ವಾಮಿಯನ್ನು ಮರಾಠಿ ಪಾಳ್ಯಕ್ಕೆ ಕರೆದೊಯ್ದು ಹಣ್ಣುಕಾಯಿ ಸೇವೆ,ಫಲಹಾರ ಸೇವೆ ನಡೆಸಲಾಗುವುದು.ರಾತ್ರಿ ಚಂದ್ರಮಂಡಲೋತ್ಸವ,ಉಯ್ಯಾಲೋತ್ಸವ ಹಾಗೂ ಅನ್ನ ಸಂತರ್ಪಣೆ ಮತ್ತು ಭಜನೆ ಏರ್ಪಡಿಸಲಾಗಿದೆ. ನ.೨ ರಂದು ತೋಟದಸೂರೆ ಹಾಗೂ ರಾತ್ರಿ ಬಿಲ್ವವೃಕ್ಷವಾಹನೋತ್ಸವದ ನಂತರ ಮಹಿಳಾ ವೀರಗಾಸೆ ನೃತ್ಯ ನಡೆಯಲಿದೆ. ನ>೩ರಂದು ತೋಟದ ಸೂರೆ ಮುಗಿಸಿ ಎಂ.ವಿ.ಹಟ್ಟಿಗೆ ದಯಮಾಡಿಸುವುದು.ರಾತ್ರಿ ಕೈಲಾಸೋತ್ಸವ,ಆರ್ಕೇಸ್ಟ್ರಾ ಮತ್ತು ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ನ.೪ರ ಬೆಳಿಗ್ಗೆ ಬಸವನ ಉತ್ಸವ ನಡೆದು ಮದ್ಯಾಹ್ನ ಫಲಾಹಾರ ಸೇವೆ ನಂತರ ಸಂಜೆ ಉತ್ಸವ ನಡೆದು ಶ್ರೀ ಸ್ವಾಮಿಯವರನ್ನು ಮೂಲಸ್ಥಾನಕ್ಕೆ ಕರೆತರಲಾಗುವುದು.

ಸೊಪ್ಪಿನ ಬೆಲೆಯಲ್ಲೂ ತೀವ್ರ ಏರಿಕೆ

ಗುರುವಾರದಂದು ನಡೆದ ವಾರದ ಸಂತೆಯಲ್ಲಿ ನಿತ್ಯ ಬಳಕೆಗೆ ಬೇಕಾದ ತರಕಾರಿ,ಸೊಪ್ಪಿನ ಬೆಲೆ ಏರಿಕೆಯಾಗಿರುವುದು ಗ್ರಾಹಕರಿಗೆ ತಲೆ ನೋವಾಗಿದೆ. ಈ ಭಾಗದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾಗಿ ದರ ಹೆಚ್ಚಳಕ್ಕೆ ಕಾರಣವಾಗಿದೆ.ತರಕಾರಿಗಳ ದರ ಕಳೆದೊಂದು ತಿಂಗಳಿನಿಂದ ತುಸು ಹೆಚ್ಚೆಇದ್ದು ಇಂದಿನ ಸಂತೆಯಲ್ಲಿ ಸೊಪ್ಪಿನ ಬೆಲೆ ಕೂಡ ಏರಿಕೆಯಾಗಿದ್ದು ತರಕಾರಿ ಬದಲು ಸೊಪ್ಪು ಕಾಳು ಉಪಯೋಗಿಸಲು ಹೊರಟ ಗ್ರಾಹಕರಿಗೆ ಬೆಲೆ ಏರಿಕೆ ಗಾಬರಿ ಉಂಟುಮಾಡಿದೆ. ಪ್ರಮುಖವಾಗಿ ದಿನನಿತ್ಯ ಅಗತ್ಯವಾಗಿ ಬಳಸುವ ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು,ಪಾಲಕ್,ದಂಟಿನ ಸೊಪ್ಪು,ಕರಿಬೇವು ಸೇರಿದಂತೆ ಎಲ್ಲಾ ರೀತಿಯ ಸೊಪ್ಪುಗಳ ಬೆಲೆ ಕಳೆದ ವಾರಕ್ಕಿಂತ ಈ ವಾರ ವಿಪರೀತ ಏರಿಕೆಯಾಗಿದೆ.ಹೆಚ್ಚುಕಮ್ಮಿ ಎರಡು ರೂಪಾಯಿಗೆ ಕಂತೆಯೊಂದಕ್ಕೆ ಸಿಗುತ್ತಿದ್ದ ಮೆಂತೆ, ಪಾಲಕ್‌, ಸಬಸೀಗೆ,ಕೊತ್ತಂಬರಿ ಸೊಪ್ಪು ಐದು ರೂಪಾಯಿಗಿಂತ ಕಡಿಮೆ ಸಿಗದಂತಾಗಿದೆ.ಹತ್ತುರೂಪಾಯಿಗೆ ಎರಡು ಕಂತೆ ಸೊಪ್ಪು ಚೌಕಾಸಿಗೆ ಅವಕಾಶವಿಲ್ಲದಂತೆ ಮಾರುತ್ತಿದ್ದರು. ಇತ್ತೀಚೆಗೆ ಸುರಿದ ಬಿರುಗಾಳಿ ಸಹಿತ ಮಳೆಗೆ ತರಕಾರಿ, ಸೊಪ್ಪು ಬೆಳೆ ನಾಶವಾಗಿ ಬೇಡಿಕೆಗೆ ತಕ್ಕಂತೆ ಸೊಪ್ಪು ಪೂರೈಕೆಯಾಗದೆ ತರಕಾರಿ ದುಬಾರಿಯಾಗಿದ್ದು ಇದರಿಂದಾಗಿ ತರಕಾರಿ ವ್ಯಾಪಾರಿಗಳು ಹಾಗೂ ಗ್ರಾಹಕರ ಮೇಲೆ ಪರಿಣಾಮ ಬೀರಿದೆ.

ಹುಳಿಯಾರು ಹೋಬಳಿ ಅಂಬಾಪುರ ಗ್ರಾಮದ 25 ಎಕರೆ ಅರಣ್ಯಭೂಮಿ ಕಬಳಿಕೆ!

25 ಎಕರೆ ಅರಣ್ಯಭೂಮಿ ಕಬಳಿಕೆ! -------------------------- ವಿಜಯವಾಣಿಯಲ್ಲಿ ವಿಶೇಷ ವರದಿ :ಜಗನ್ನಾಥ್ ಕಾಳೇನಹಳ್ಳಿ --------------------------------------------- ತುಮಕೂರು: 225 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸುವ ಭೂಗಳ್ಳರ ಸಂಚು ಇದೀಗ ಬಯಲಾಗಿದೆ. ತಹಸೀಲ್ದಾರ್ ಸೇರಿ ಇತರ 8 ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿರುವ ಸಂಬಂಧ ವಿಜಯವಾಣಿಗೆ ದಾಖಲೆಗಳು ಲಭ್ಯವಾಗಿವೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ಅಂಬಾಪುರ ಗ್ರಾಮದ ಸರ್ವೆ ನಂ.46ರ 421.35 ಎಕರೆ ಸರ್ಕಾರಿ ಭೂಮಿಯಲ್ಲಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ 225 ಎಕರೆ ಭೂಮಿಯನ್ನು ಕಬಳಿಸುವ ಯತ್ನ ನಡೆದಿದೆ.  ಬಡವರು, ದಲಿತರಿಗೆ ಮಂಜೂರಾದ ಭೂಮಿಯನ್ನು ಕೆ.ಬಿ.ಕ್ರಾಸ್ನ ಎಸ್.ರುದ್ರೇಶ್ ಎಂಬುವರು ಜಿಪಿಎ ಮಾಡಿಸಿಕೊಂಡು ತನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಮುಂದಾಗಿದ್ದು, ಹಗರಣದಲ್ಲಿ ಭಾಗಿಯಾಗಿರುವ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ (2014ರ ಅವಧಿಯಲ್ಲಿ)ಆಗಿದ್ದ ಕಾಮಾಕ್ಷಮ್ಮ ಸೇರಿ 8 ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ತಿಪಟೂರು ಉಪವಿಭಾಗಾಧಿಕಾರಿ ಪ್ರಜ್ಞಾ ಅಮ್ಮೆಂಬಳ್ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದಾರೆ. ಯಾರ್ಯಾರ ವಿರುದ್ಧ ಕ್ರಮಕ್ಕೆ ಶಿಫಾರಸು? --------------------------------- ಕಾಮಾಕ್ಷಮ್ಮ-ತಹಸೀಲ್ದಾರ್(ಚಿಕ್ಕನಾಯಕನಹಳ್ಳಿ) , ಇ.ಪ್ರಕಾಶ್-ಭೂದಾಖಲೆಗಳ ಉಪನಿರ್ದೇಶಕ (ಡಿಸಿ ಕಚೇರಿ), ಮಂಜುನಾ

ಬೆಂಗಳೂರು ಬಸ್ ಗಳು ರಶೋ.......ರಶ್

                                           ಪರದಾಡಿದ ಪ್ರಯಾಣಿಕರು                                            --------------------------- ದಸರಾ ಹಬ್ಬಕ್ಕೆ ಸಾಲಾಗಿ ರಜೆ ಸಿಕ್ಕ ಹಿನ್ನಲೆಯಲ್ಲಿ ತಂತಮ್ಮ ಗ್ರಾಮಗಳಿಗೆ ಆಗಮಿಸಿದ್ದವರು ಇಂದು ವಾಪಸ್ ತೆರಳಲು ಬಸ್ ಗಳು ಸಿಗದೆ ಪರಿಪಾಟಲು ಪಡುವಂತಾಯಿತು.ದಸರಾ,ಆಯುಧಪೂಜೆ ಸಾಲು ರಜೆಗಳು ಮುಗಿದ ಹಿನ್ನಲೆಯಲ್ಲಿ ಸೋಮವಾರ ಮುಂಜಾನೆ ಬೆಂಗಳೂರಿಗೆ ತೆರಳುವವರು ಅಪಾರ ಸಂಖ್ಯೆಯಲ್ಲಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರಿಂದ ದಟ್ಟಣೆ ಹೆಚ್ಚಾಗಿತ್ತು. ಹುಳಿಯಾರು ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ಮುಗಿಬಿದ್ದಿರುವ ಪ್ರಯಾಣಿಕರು. ಹುಳಿಯಾರು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಸಾಕಷ್ಟು ಮಂದಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವವರೇ ಆಗಿದ್ದು ಹಬ್ಬಕ್ಕೆಂದು ತಂತಮ್ಮ ಊರುಗಳಿಗೆ ಬಂದಿದ್ದರು. ಹಬ್ಬ ಹಾಗೂ ಭಾನುವಾರದ ರಜೆ ಮುಗಿಸಿ ಸೋಮವಾರದಂದು ವಾಪಸ್ಸ್ ಕೆಲಸಕ್ಕೆ ಹಾಜರಾಗಲು ಬಸ್ ನಲ್ಲಿ ತೆರಳಲು ಬಂದಿದ್ದರಿಂದ ಬೆಳಿಗ್ಗೆ ನಾಲ್ಕು ಗಂಟೆಯಿಂದಲೇ ಬಸ್ ನಿಲ್ದಾಣ ಗಿಜುಗುಟ್ಟುತ್ತಿತ್ತು. ಎಲ್ಲಾ ಬಸ್ಸುಗಳು ಹೊಸದುರ್ಗದಿಂದ ಬರುತ್ತಿದ್ದವಾದ್ದರಿಂದ ಹುಳಿಯಾರಿಗೆ ಬರುವಷ್ಟರಲ್ಲೇ ಬಸ್ ಸೀಟ್ ಗಳೆಲ್ಲಾ ತುಂಬಿದ್ದು ಪ್ರಯಾಣಿಕರು ಪರದಾಡುವಂತಾಗಿತ್ತು. ಬರುತ್ತಿದ್ದ ಬಸ್ ಗೆ ಒಮ್ಮೆಲೆ ಎಲ್ಲಾ ಪ್ರಯಾಣಿಕರು ನುಗ್ಗುತ್ತಿದ್ದರಿಂದ ಬಸ್ ಹತ್ತುವುದೆ ತ್ರಾಸದಾಯಕವಾಗಿತ್ತು. ಸ

ತನುಷ ರಾಜ್ಯಮಟ್ಟಕ್ಕೆ ಆಯ್ಕೆ

ಹುಳಿಯಾರಿನ ವಾಸವಿ ಶಾಲೆಯ ಎಂ.ಎನ್.ತನುಷ (7ನೇ ತರಗತಿ) ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಗಾಣಧಾಳು ಗ್ರಾ.ಪಂ. ಕಚೇರಿಗೆ ಬೀಗ

ಶುಕ್ರವಾರ ಬೀಗ ತೆರವು  ಹುಳಿಯಾರು ಹೋಬಳಿ ಗಾಣಧಾಳು ಗ್ರಾಮ ಪಂಚಾಯ್ತಿಗೆ ನರೇಗಾ  ಕಾಮಗಾರಿ ಬಿಲ್ ಪಾವತಿಸಲು                                      ಒತ್ತಾಯಿಸಿ ಬೀಗಜಡಿದು ಪ್ರತಿಭಟಿಸಿದರು. ಉದ್ಯೋಗಖಾತ್ರಿ ಕಾಮಗಾರಿಗಳ ಹಣ ಬಿಡುಗಡೆ ವಿಳಂಬ ಖಂಡಿಸಿ ಫ‌ಲಾನುಭವಿಗಳು ಗ್ರಾ.ಪಂಗೆ   ಬೀಗ ಜಡಿದು ಪ್ರತಿಭಟಿಸಿದ ಘಟನೆ ಹೋಬಳಿಯ ಗಾಣಧಾಳು ಗ್ರಾಮದಲ್ಲಿ ಗುರುವಾರ ನಡೆಯಿತು. ಗ್ರಾ.ಪಂ.ಯಲ್ಲಿ ಅಧ್ಯಕ್ಷೆ ಸರಸ್ವತಿಬಾಯಿ ಸಾಮಾನ್ಯ ಸಭೆ ಕರೆದಿದ್ದರು.  ವಿಷಯ ತಿಳಿದ ಗ್ರಾಮಸ್ಥರು ಸಭೆಯ ನಡುವೆಯೇ ಉದ್ಯೋಗ ಖಾತ್ರಿ ಹಣ ಪಾವತಿಗೆ ಒತ್ತಾಯಿಸಿದರು. ‘ಮೊದಲು ನಮ್ಮ ಕೂಲಿ ಹಣ ಕೊಡಿ, ಆಮೇಲೆ ನಿಮ್ಮ ಸಭೆ ನಡೆಸಿ’ ಎಂದಾಗ ಗ್ರಾಪಂ ಸದಸ್ಯರುಗಳು ಅವರುಗಳ ಬೆಂಬಲಕ್ಕೆ ನಿಂತರು. ನರೇಗಾ ಯೋಜನೆಯಡಿ ಚೆಕ್ ಡ್ಯಾಂ, ಹುದಿ– ಬದು ನಿರ್ಮಾಣ, ಕೊಟ್ಟಿಗೆ ಮನೆ, ಇಂಗುಗುಂಡಿ ಸೇರಿದಂತೆ ಅನೇಕ ಕಾಮಗಾರಿ ಪೂರ್ಣಗೊಂಡು 2 ವರ್ಷ ಕಳೆದರೂ ರೈತರಿಗೆ ಹಣ ಸಂದಾಯವಾಗಿಲ್ಲ ಎಂದು ದೂರಿ ಕಾಮಗಾರಿಯ ಹಣ ಪಾವತಿಗೆ ಪಟ್ಟು ಹಿಡಿದರು. ಗ್ರಾಪಂ ಕಾರ್ಯದರ್ಶಿಯಿಂದ ಸಮಂಜಸವಾದ ಉತ್ತರ ಬಾರದಿದ್ದರಿಂದ ಸದಸ್ಯರೂ ಸಭೆಯಿಂದ ಹೊರಬಂದರಿಂದ ರೊಚಿಗೆದ್ದ ಫಲಾನುಭವಿಗಳು ಕಚೇರಿಗೆ ಬೀಗ ಜಡಿದು ಹಣ ಪಾವತಿ ಆಗುವವರೆಗೂ ಬೀಗ ತೆರೆಯುವುದಿಲ್ಲವೆಂದು ಪಟ್ಟು ಹಿಡಿದರು. 2012-13 ನೇ ಸಾಲಿನ 172 ಮಂದಿಗೆ ಶೌಚಾಲಯದ ಸಪ್ಲೆ ಬಿಲ್‌ 1199 ರೂ. ಪಾವತಿ ಆಗಿಲ್ಲ. 2012-13 ನೇ ಸಾಲಿನ ಕೆಲ

ಹುಳಿಯಾರಿನಲ್ಲಿ ಸಂಭ್ರಮದ ಗಣಪತಿ ವಿಸರ್ಜನೋತ್ಸವ

ಹುಳಿಯಾರು ಪಟ್ಟಣದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಸ್ಥಾಪಿಸಲಾಗಿದ್ದ ಪಾರ್ವತಿ ಪರಮೇಶ್ವರ ಸಹಿತ ಗಣಪತಿ ಹಾಗೂ ಗಜಾನನ ಯುವಕ ಸಂಘದಿಂದ ಪ್ರತಿಷ್ಟಾಪಿಸಲಾಗಿದ್ದ ಬೆಂಕಿ ಗಣಪತಿಯನ್ನು ರಾಜಬೀದಿಯಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ನಂತರ ಶುಕ್ರವಾರದಂದು ವಿಸರ್ಜಿಸಲಾಯಿತು.           ಕಳೆದ ಮೂರು ದಿನಗಳಿಂದ ಈ ಸಂಬಂಧ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬುಧವಾರದಂದು ಹೋಮಹವನಾದಿಗಳನ್ನು ನಡೆದು ಅನ್ನಸಂತರ್ಪಣೆ ಮಾಡಿದರೆ ಗುರುವಾರದಂದು ಸಾಂಸ್ಕೃತಿಕಕಾರ್ಯಕ್ರಮ ಹಾಗೂ ಸಂಜೆ ಉತ್ಸವ ,ಮೆರವಣಿಗೆ ಏರ್ಪಡಿಸಲಾಗಿತ್ತು. ವಿಶೇಷ ಪೂಜೆ ಸಲ್ಲಿಸಿದ ತರವಾಯು ಭವ್ಯವಾದ ಹೂವಿನ ಮಂಟಪದಲ್ಲಿ ಅಲಂಕೃತ ಗಣಪತಿಯನ್ನು ಕೂರಿಸಿ ಅಲಂಕರಿಸಿ ಪಟ್ಟಣದ ಗಾಂಧಿಪೇಟೆ,ಬಸ್ ನಿಲ್ದಾಣ,ರಾಂಗೋಪಾಲ್ ಸರ್ಕಲ್ ಮುಂತಾದ ಬೀದಿಗಳಲ್ಲಿ ಭಕ್ತಾದಿಗಳೊಂದಿಗೆ ಮೆರವಣಿಗೆ ನಡೆಸಿ ಶುಕ್ರವಾರ ಮುಂಜಾನೆ ಸಮೀಪದ ತಿರುಮಲಾಪುರದ ಕೆರೆಯಲ್ಲಿ ಮೂರ್ತಿಯ ಗಂಗಾಪ್ರವೇಶ ಮಾಡಲಾಯಿತು.             ಮೆರವಣಿಗೆ ಸಂದರ್ಭದಲ್ಲಿ ವೀರಗಾಸೆ, ಗೊಂಬೆ ಕುಣಿತ, ಚಿಟ್ಟಿಮೇಳ, ನಾದಸ್ವರ, ಸ್ಯಾಕ್ಸೋಪೋನ್ ವಾದನಗಳು ಉತ್ಸವಕ್ಕೆ ಮೆರಗು ನೀಡಿದವು. ಬೀದಿಗಳಲ್ಲಿ ಮೆರವಣಿಗೆ ಸಾಗಿದ ಸಂದರ್ಭದಲ್ಲಿ ಭಕ್ತರು ರಸ್ತೆಯನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.           ಪ್ರಸನ್ನ ಗಣಪತಿ ಸೇವಾ ಟ್ರಸ್ಟ್ ನ

ಇಂದು ಗಣೇಶ ಉತ್ಸವ

ಹುಳಿಯಾರಿನ ಶ್ರೀಗಜಾನನ ಸೇವಾ ಛಾರಿಟಬಲ್ ಟ್ರಸ್ಟ್ ವತಿಯಿಂದ ಇಂದಿರಾನಗರದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಮಹೋ ತ್ಸವದ ಅಂಗವಾಗಿ ಅ.೮ರಂದು ರಾತ್ರಿ ರಾಜಬೀದಿ ಉತ್ಸವ ಏರ್ಪಡಿಸಲಾಗಿದೆ. ಉತ್ಸವದ ಅಂಗವಾಗಿ ಅಭಿಷೇಕ, ನವಗ್ರಹಪೂಜೆ, ಕುಂಕುಮಾರ್ಚನೆ ಮತ್ತಿ ತರ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಗುವುದು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಿದೆ. ದರ್ಬಾರ್ ಮುತ್ತಿನ ಮಂಟಪದಲ್ಲಿ ಕುಳ್ಳಿರಿಸಿ ಉತ್ಸವ ಮಾಡಲಾಗುತ್ತದೆ.

ಜನವಸತಿ ಜಾಗದಲ್ಲಿ ಮೊಬೈಲ್ ಟವರ್

ಗಡುವು ಮುಗಿದರೂ ಸ್ಥಳಾಂತರಿಸದ ಟವರ್ ವಿದ್ಯುತ್ ಸಂಪರ್ಕ ಕಡಿತ ------------------------ ಜನವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಿಸಿದಲ್ಲದೆ ಇದರ ಸೂಕ್ತ ನಿರ್ವಹಣೆಗೆ ವಿಫಲರಾಗಿ ಆಗಾಗ್ಗೆ ಸಮಸ್ಯೆಗೆ ಕಾರಣವಾಗುತ್ತಿದ್ದ ಟವರ್ ನವರಿಗೆ ನೀಡಿದ್ದ ಅಂತಿಮ ಗಡುವು ನೀಡಿದ್ದಾಗ್ಯೂ ಸ್ಥಳಾಂತರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿ ಟವರ್ ಗೆ ಸರಬರಾಜಾಗುತ್ತಿದ್ದ ವಿದ್ಯುತ್ ಸಂಪರ್ಕವನ್ನು ಗ್ರಾಮ ಪಂಚಾಯ್ತಿಯವರು ಕಡಿತಗೊಳಿಸಿದ ಘಟನೆ ಹುಳಿಯಾರಿನಲ್ಲಿ ನಡೆದಿದೆ. ಹುಳಿಯಾರಿನ ಜನವಸತಿ ಪ್ರದೇಶದಲ್ಲಿ ಸ್ಥಾಪಿಸಿರುವ ಮೊಬೈಲ್ ಟವರ್ ಸ್ಥಳಾಂತರವಾಗಬೇಕೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು.ಈ ಸಂದರ್ಭದಲ್ಲಿ ಬಡಾವಣೆಯ ಸಾಕಷ್ಟು ಜನ ಸೇರಿದ್ದರು. ಸಮಸ್ಯೆ ಏನು : ಜನ ವಸತಿ ಪ್ರದೇಶದಲ್ಲಿ ದೂರ ಸಂಪರ್ಕ ಸ್ಥಾವರ ಅಳವಡಿಸಲು ನ್ಯಾಯಾಲಯ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದು ದೂರಸಂಪರ್ಕ ಸ್ಥಾವರ ನಿರ್ಮಿಸಲು ಸ್ಥಳಿಯ ಪಂಚಾಯ್ತಿ ಪರವಾನಿಗೆ ಅಗತ್ಯವಾಗಿದ್ದು ಸಾರ್ವಜನಿಕ ಸುರಕ್ಷತೆ ಹಾಗೂ ಆರೋಗ್ಯದ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಆದೇಶವಿದೆ.ಹಾಗಿದ್ದು ಕೂಡ ಬೆಂಗಳೂರಿನ ಇಂಡಸ್ ಟವರ್ಸ್ ಸಂಸ್ಥೆಯವರು ಪಟ್ಟಣದ ನಾಲ್ಕನೇ ಬ್ಲಾಕಿನಲ್ಲಿ ನಿರ್ಮಿಸಿರುವ ಟವರ್ ಗೆ ಸೂಕ್ತ ಸುರಕ್ಷತ ಕ್ರಮ ಕೈಗೊಂಡಿಲ್ಲ ಹಾಗೂ ಯಾವುದೋ ಜಾಗದ ಪರವಾನಿಗೆ ಪಡೆದು ಸುಳ್ಳು ಮಾಹಿತಿ ನೀಡಿ ಟವರ್ ನಿರ್ಮಿಸಿದ್ದಾರೆಂಬುದು ಇಲ್ಲ

ಹುಳಿಯಾರಿನಲ್ಲಿ ಮಳೆ

ಗೋಡೆಕುಸಿತ:ಮನೆಗೆ ನುಗ್ಗಿದ ನೀರು -----------                                  ಭಾನುವಾರ ಮಧ್ಯಾಹ್ನದಿಂದ ರಾತ್ರಿಯವರೆಗೂ ಹುಳಿಯಾರು ಹಾಗೂ ಸುತ್ತಮುತ್ತ ಮಳೆಸುರಿಯುತ್ತಿದ್ದು ಮಳೆಯಿಂದ ರಾತ್ರಿ ಎಂಟುಮೂವತ್ತರ ಸಮಯದಲ್ಲಿ ಸಮೀಪದ ಕುರಿಹಟ್ಟಿಯಲ್ಲಿ ಕಿಟ್ಟಯ್ಯ ಎಂಬುವವರ ಮನೆಯ ಒಂದು ಭಾಗದ ಗೋಡೆ ಕುಸಿದು ಬಿದ್ದಿದೆ.ಅದೇ ಗ್ರಾಮದ ಭೀಮಯ್ಯ ಎಂಬುವವರ ಮನೆಗೂ ನೀರು ನುಗಿದ್ದು ಮನೆ ಮಂದಿಯೆಲ್ಲಾ ನೀರು ಎತ್ತುವುದಕ್ಕೆ ಪರಿಪಾಟಲು ಪಡುತಿದ್ದರು. ಹುಳಿಯಾರು ಕೆರೆ ಅಂಗಳದಲ್ಲಿನ ತಗ್ಗಿನ ಪ್ರದೇಶದ ಜೋಪಡಿಗಳಲ್ಲು ಮಳೆನೀರು ಧಾರಾಕಾರವಾಗಿ ಸುರಿದ್ದು ಸಮಸ್ಯೆಗೆ ಕಾರಣವಾಯಿತು. ಕಳೆದ ಎರಡು ದಿನದ ಹಿಂದೆ ಬಂದ ಮಳೆಗೆ ಕಟ್ಟೆ,ಕಾಲುವೆಗಳೆಲ್ಲಾ ತುಂಬಿ ಚಿಕ್ಕಬಿದರೆ,ಅವಳಗೆರೆ,ತಿಮ್ಲಾಪುರ,ಗೋಪಾಲಪುರ,ಲಕ್ಷ್ಮೀಪುರ ಮುಂತಾದ ಕೆರೆಗೆ ನೀರಿನ ಹರಿವು ಹೆಚ್ಚಿದ್ದು ಇಂದು ಕೂಡ ಬಂದ ಮಳೆಗೆ ಹೋಬಳಿಯ ಕೆಲವೊಂದು ಕೆರೆಗಳು ತುಂಬುವ ಸಾಧ್ಯತೆಗಳಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ

ಹುಳಿಯಾರು ಪಟ್ಟಣದ ಮುಖಾಂತರ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದ್ವಾತದ್ವಾ ಗುಂಡಿಗಳುಂಟಾಗಿ ಸಾವಿಗೆ ಹೆದ್ದಾರಿಯಾಗಿದ್ದ ರಸ್ತೆಯ ಗುಂಡಿ ಮುಚ್ಚಬೇಕೆಂಬ ಬೇಡಿಕೆಗೆ ಕೊನೆಗೂ ಮಣಿದ ಹೆದ್ದಾರಿ ಇಲಾಖೆ ಗುಂಡಿ ಮುಚ್ಚುವ ಕಾರ್ಯಾರಂಭ ಮಾಡಿತು. ಈ ಕಾರ್ಯಕ್ಕೆ ಸಂಸದ ಎಸ್.ಪಿ.ಮುದ್ದಹನುಮೇಗೌಡ ಚಾಲನೆ ನೀಡಿದರು. ಹುಳಿಯಾರಿನಲ್ಲಿ ಹೆದ್ದಾರಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಸಂಸದ ಎಸ್.ಪಿ.ಮುದ್ದಹನುಮೇಗೌಡ ಚಾಲನೆ ನೀಡಿದರು.ಜಬೀಉಲ್ಲಾ,ರಂಗನಾಥ್,ಗೀತಾ ಪ್ರದೀಪ್,ಗೀತಾಬಾಬುಮಂಜುಳಮ್ಮ,ಅಶೋಕ್,ಸಿದ್ದರಾಮಣ್ಣ,ಸೀಮೆ ಎಣ್ಣೆ ಕೃಷ್ಣಯ್ಯ ಇದ್ದಾರೆ. ರಾ.ಹೆದ್ದಾರಿ ೨೩೪ಗೆ ಸಂಬಂಧಿಸಿದಂತೆ ಹುಳಿಯಾರು ಶಿರಾ ಮಾರ್ಗವಾಗಿ ಒಟ್ಟು ೪೭ ಕಿಮೀ ರಸ್ತೆಯ ಗುಂಡಿಮುಚ್ಚುವ ಕಾಮಗಾರಿಗೆ ೧.೯೭ಕೋಟಿಗೆ ಎಸ್ಟಿಮೇಷನ್ ಮಾಡಿದ್ದು ಸಧ್ಯ ೮೫ ಲಕ್ಷ ಮಂಜೂರಾಗಿದ್ದು ಹೈದರಬಾದಿನ ಜೇಎಂಸಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದರು. ಕಾಮಗಾರಿ ಈಗಿನಿಂದಲೆ ಪ್ರಾರಂಭವಾಗಲಿದ್ದು ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸದಸ್ಯರುಗಳು ಗಮನ ಮಾಡಬೇಕೆಂದರು. ಹುಳಿಯಾರು ಪಟ್ಟಣದಲ್ಲಿ ಎರಡು ರಾ.ಹೆದ್ದಾರಿಗಳು ಹಾದುಹೋಗಲಿದ್ದು ಅದಕ್ಕೆ ಸಂಬಂಧಿಸಿದ ಕಾಮಗಾರಿಗಳ ಟೆಂಡರ್ ಪ್ರಕಿಯೆ ಮುಗಿದ ನಂತರ ರಸ್ತೆ ಕಾರ್ಯ ಪ್ರಾರಂಭವಾಗಲಿದೆ ಎಂದರು. ಹೆದ್ದಾರಿ ಅಗಲೀಕರಣದ ಕುರಿತಂತೆ ಸಾರ್ವಜನಿಕರು ಗೊಂದಲಕ್ಕೀಡಾಗಬೇಡಿರೆಂದ ಸಂಸದರು ರಾ.ಹೆದ್ದಾರಿ ೨೩೪ ಪಟ್ಟಣದ ಒಳಗೆ

ಇಂದು ಸಂಕಷ್ಟಹರ ಗಣಪತಿ ಪೂಜೆ

                       ಹುಳಿಯಾರಿನ ಶ್ರೀ ಪ್ರಸನ್ನ ಗಣಪತಿ ದೇವಾಲಯ,ಬನಶಂಕರಿ ದೇವಾಲಯ,  ವಾಸವಿ ದೇವಾಲಯ   ಹಾಗೂ ಬಳ್ಳೆಕಟ್ಟೆಯ ಗಣೇಶ ದೇವಸ್ಥಾನದಲ್ಲಿ ಗುರುವಾರದಂದು ಸಂಕಷ್ಟಹರ ಗಣಪತಿ ಪೂಜೆ ಹಮ್ಮಿಕೊಳ್ಳಲಾಗಿದೆ.             ವಿಶೇಷಪೂಜೆ ಹಾಗೂ ರಾತ್ರಿ ಚಂದ್ರದರ್ಶನದ ನಂತರ ಪ್ರಸಾದ ವಿನಿಯೋಗವಿದೆ.ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿಯವರು ಕೋರಿದ್ದಾರೆ.

ಇಂದು ರಸಮಂಜರಿ

ಹುಳಿಯಾರಿನ ಶ್ರೀ ಪ್ರಸನ್ನಗಣಪತಿ ದೇವಾಲಯದಲ್ಲಿ ಗಣೇಶೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ಇಂದು(ಗುರುವಾರದಂದು) ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.ಶಾಸಕ ಸಿ.ಬಿ.ಸುರೇಶ್ ಬಾಬು ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿಯವರು ಕೋರಿದ್ದಾರೆ.