ಹುಳಿಯಾರು:ಹೋಬಳಿಯ ಭಟ್ಟರಹಳ್ಳಿಯಲ್ಲಿ ಅ.೩೧ರಿಂದ ಶ್ರೀ ಗುರುಸಿದ್ದರಾಮೇಶ್ವರ ಸ್ವಾಮಿಯ ದಸರಾ ಮಹೋತ್ಸವ ಆರಂಭವಾಗಲಿದ್ದು ನ.೪ರವರೆಗೆ ನಡೆಯಲಿದೆ.
ಅ.೩೧ರಂದು ಹಣ್ಣುಕಾಯಿ ಸೇವೆ,ಅಡ್ಡಪಲ್ಲಕ್ಕಿ ಉತ್ಸವ,ರಾತ್ರಿ ಆರತಿ ಮಹೋತ್ಸವ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ನ.೧ರಂದು ಸ್ವಾಮಿಯನ್ನು ಮರಾಠಿ ಪಾಳ್ಯಕ್ಕೆ ಕರೆದೊಯ್ದು ಹಣ್ಣುಕಾಯಿ ಸೇವೆ,ಫಲಹಾರ ಸೇವೆ ನಡೆಸಲಾಗುವುದು.ರಾತ್ರಿ ಚಂದ್ರಮಂಡಲೋತ್ಸವ,ಉಯ್ಯಾಲೋತ್ಸವ ಹಾಗೂ ಅನ್ನ ಸಂತರ್ಪಣೆ ಮತ್ತು ಭಜನೆ ಏರ್ಪಡಿಸಲಾಗಿದೆ.
ನ.೨ ರಂದು ತೋಟದಸೂರೆ ಹಾಗೂ ರಾತ್ರಿ ಬಿಲ್ವವೃಕ್ಷವಾಹನೋತ್ಸವದ ನಂತರ ಮಹಿಳಾ ವೀರಗಾಸೆ ನೃತ್ಯ ನಡೆಯಲಿದೆ.
ನ>೩ರಂದು ತೋಟದ ಸೂರೆ ಮುಗಿಸಿ ಎಂ.ವಿ.ಹಟ್ಟಿಗೆ ದಯಮಾಡಿಸುವುದು.ರಾತ್ರಿ ಕೈಲಾಸೋತ್ಸವ,ಆರ್ಕೇಸ್ಟ್ರಾ ಮತ್ತು ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.
ನ.೪ರ ಬೆಳಿಗ್ಗೆ ಬಸವನ ಉತ್ಸವ ನಡೆದು ಮದ್ಯಾಹ್ನ ಫಲಾಹಾರ ಸೇವೆ ನಂತರ ಸಂಜೆ ಉತ್ಸವ ನಡೆದು ಶ್ರೀ ಸ್ವಾಮಿಯವರನ್ನು ಮೂಲಸ್ಥಾನಕ್ಕೆ ಕರೆತರಲಾಗುವುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ