ಗೋಡೆಕುಸಿತ:ಮನೆಗೆ ನುಗ್ಗಿದ ನೀರು
-----------
ಭಾನುವಾರ ಮಧ್ಯಾಹ್ನದಿಂದ ರಾತ್ರಿಯವರೆಗೂ ಹುಳಿಯಾರು ಹಾಗೂ ಸುತ್ತಮುತ್ತ ಮಳೆಸುರಿಯುತ್ತಿದ್ದು ಮಳೆಯಿಂದ ರಾತ್ರಿ ಎಂಟುಮೂವತ್ತರ ಸಮಯದಲ್ಲಿ ಸಮೀಪದ ಕುರಿಹಟ್ಟಿಯಲ್ಲಿ ಕಿಟ್ಟಯ್ಯ ಎಂಬುವವರ ಮನೆಯ ಒಂದು ಭಾಗದ ಗೋಡೆ ಕುಸಿದು ಬಿದ್ದಿದೆ.ಅದೇ ಗ್ರಾಮದ ಭೀಮಯ್ಯ ಎಂಬುವವರ ಮನೆಗೂ ನೀರು ನುಗಿದ್ದು ಮನೆ ಮಂದಿಯೆಲ್ಲಾ ನೀರು ಎತ್ತುವುದಕ್ಕೆ ಪರಿಪಾಟಲು ಪಡುತಿದ್ದರು.
ಹುಳಿಯಾರು ಕೆರೆ ಅಂಗಳದಲ್ಲಿನ ತಗ್ಗಿನ ಪ್ರದೇಶದ ಜೋಪಡಿಗಳಲ್ಲು ಮಳೆನೀರು ಧಾರಾಕಾರವಾಗಿ ಸುರಿದ್ದು ಸಮಸ್ಯೆಗೆ ಕಾರಣವಾಯಿತು.

ಕಳೆದ ಎರಡು ದಿನದ ಹಿಂದೆ ಬಂದ ಮಳೆಗೆ ಕಟ್ಟೆ,ಕಾಲುವೆಗಳೆಲ್ಲಾ ತುಂಬಿ ಚಿಕ್ಕಬಿದರೆ,ಅವಳಗೆರೆ,ತಿಮ್ಲಾಪುರ,ಗೋಪಾಲಪುರ,ಲಕ್ಷ್ಮೀಪುರ ಮುಂತಾದ ಕೆರೆಗೆ ನೀರಿನ ಹರಿವು ಹೆಚ್ಚಿದ್ದು ಇಂದು ಕೂಡ ಬಂದ ಮಳೆಗೆ ಹೋಬಳಿಯ ಕೆಲವೊಂದು ಕೆರೆಗಳು ತುಂಬುವ ಸಾಧ್ಯತೆಗಳಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ