ಹುಳಿಯಾರು ಪಟ್ಟಣದ ಮುಖಾಂತರ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದ್ವಾತದ್ವಾ ಗುಂಡಿಗಳುಂಟಾಗಿ ಸಾವಿಗೆ ಹೆದ್ದಾರಿಯಾಗಿದ್ದ ರಸ್ತೆಯ ಗುಂಡಿ ಮುಚ್ಚಬೇಕೆಂಬ ಬೇಡಿಕೆಗೆ ಕೊನೆಗೂ ಮಣಿದ ಹೆದ್ದಾರಿ ಇಲಾಖೆ ಗುಂಡಿ ಮುಚ್ಚುವ ಕಾರ್ಯಾರಂಭ ಮಾಡಿತು. ಈ ಕಾರ್ಯಕ್ಕೆ ಸಂಸದ ಎಸ್.ಪಿ.ಮುದ್ದಹನುಮೇಗೌಡ ಚಾಲನೆ ನೀಡಿದರು.
ಹುಳಿಯಾರಿನಲ್ಲಿ ಹೆದ್ದಾರಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಸಂಸದ ಎಸ್.ಪಿ.ಮುದ್ದಹನುಮೇಗೌಡ ಚಾಲನೆ ನೀಡಿದರು.ಜಬೀಉಲ್ಲಾ,ರಂಗನಾಥ್,ಗೀತಾ ಪ್ರದೀಪ್,ಗೀತಾಬಾಬುಮಂಜುಳಮ್ಮ,ಅಶೋಕ್,ಸಿದ್ದರಾಮಣ್ಣ,ಸೀಮೆ ಎಣ್ಣೆ ಕೃಷ್ಣಯ್ಯ ಇದ್ದಾರೆ. |
ರಾ.ಹೆದ್ದಾರಿ ೨೩೪ಗೆ ಸಂಬಂಧಿಸಿದಂತೆ ಹುಳಿಯಾರು ಶಿರಾ ಮಾರ್ಗವಾಗಿ ಒಟ್ಟು ೪೭ ಕಿಮೀ ರಸ್ತೆಯ ಗುಂಡಿಮುಚ್ಚುವ ಕಾಮಗಾರಿಗೆ ೧.೯೭ಕೋಟಿಗೆ ಎಸ್ಟಿಮೇಷನ್ ಮಾಡಿದ್ದು ಸಧ್ಯ ೮೫ ಲಕ್ಷ ಮಂಜೂರಾಗಿದ್ದು ಹೈದರಬಾದಿನ ಜೇಎಂಸಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದರು. ಕಾಮಗಾರಿ ಈಗಿನಿಂದಲೆ ಪ್ರಾರಂಭವಾಗಲಿದ್ದು ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸದಸ್ಯರುಗಳು ಗಮನ ಮಾಡಬೇಕೆಂದರು.
ಹುಳಿಯಾರು ಪಟ್ಟಣದಲ್ಲಿ ಎರಡು ರಾ.ಹೆದ್ದಾರಿಗಳು ಹಾದುಹೋಗಲಿದ್ದು ಅದಕ್ಕೆ ಸಂಬಂಧಿಸಿದ ಕಾಮಗಾರಿಗಳ ಟೆಂಡರ್ ಪ್ರಕಿಯೆ ಮುಗಿದ ನಂತರ ರಸ್ತೆ ಕಾರ್ಯ ಪ್ರಾರಂಭವಾಗಲಿದೆ ಎಂದರು.
ಹೆದ್ದಾರಿ ಅಗಲೀಕರಣದ ಕುರಿತಂತೆ ಸಾರ್ವಜನಿಕರು ಗೊಂದಲಕ್ಕೀಡಾಗಬೇಡಿರೆಂದ ಸಂಸದರು ರಾ.ಹೆದ್ದಾರಿ ೨೩೪ ಪಟ್ಟಣದ ಒಳಗೆ ಹಾದುಹೋಗಲಿದ್ದು ಮತ್ತೊಂದು ಹೆದ್ದಾರಿ ೧೫೦ಎ ಕೂಡ ಪಟ್ಟಣದ ಮುಖಾಂತರವೇ ಹಾದುಹೋಗಬೇಕಿದ್ದು ಇದಕ್ಕೆ ಬೈಪಾಸ್ ರಸ್ತೆ ನಿರ್ಮಿಸಲು ಹೆದ್ದಾರಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ್ದು ರೋಡ್ ಬಗ್ಗೆ ಆತಂಕ ಅನಗತ್ಯವೆಂದರು.
ಕಾದು ಹೈರಾಣದ ಸದಸ್ಯರು : ಮುಂಜಾನೆ ಒಂಬತ್ತು ಘಂಟೆಗೆ ಕಾರ್ಯಕ್ರಮ ನಿಗದಿಯಾಗಿದ್ದು ಶಾಸಕರ ಆಗಮನದ ನಿರೀಕ್ಷೆಯಲ್ಲಿ ಹುಳಿಯಾರು ಗ್ರಾಪಂ ಸದಸ್ಯರಲ್ಲಿ ಬಹುಪಾಲು ಮಂದಿ ಕಾದುಕುಳಿತಿದ್ದರು.ಹತ್ತು ಗಂಟೆ,ಹನ್ನೊಂದು ಗಂಟೆಯಾದರೂ ಶಾಸಕರ ಆಗಮನವಾಗದೆ ಈ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಸದಸ್ಯರುಗಳು ,ಜೆಡಿಎಸ್ ಕಾರ್ಯಕರ್ತರುಗಳೂ ಹೈರಾಣಾಗಿ ಹೋದರು.
ಸಂಸದರು ಕೂಡಾ ಆಗಮಿಸುವ ಸುದ್ದಿಯಿದ್ದರಿಂದ ಕಾಂಗ್ರೆಸ್ ನವರು ಕೂಡ ಸೇರಿದ್ದರು.ಮೂರು ಗಂಟೆ ತಡವಾಗಿ ಹನ್ನೇರಡು ಗಂಟೆಗೆ ತರಾತುರಿಯಲಿ ಆಗಮಿಸಿದ ಸಂಸದರು ಪೂಜೆಯಲ್ಲಿ ಭಾಗವಹಿಸಿ ಜೆಸಿಬಿ ಮುಂದೆ ಕಾಯಿ ಹೊಡೆದು ತರಾತುರಿಯಲ್ಲಿ ನಿರ್ಗಮಿಸಿದರು.ಪತ್ರಕರ್ತರ ಒತ್ತಾಯಕ್ಕೆ ಮಣಿದು ಹೆದ್ದಾರಿ ಕಾಮಗಾರಿ ಬಗ್ಗೆ ನಾಲ್ಕು ಮಾತಾಡಿದರು.ಬೆಳಿಗ್ಗೆ ೯ ಗಂಟೆಯಿಂದ ಕಾದಿದ್ದವರಿಗೆ ಕೇವಲ ಹತ್ತೆನಿಮಿಷದಲ್ಲಿ ಕಾರ್ಯಕ್ರಮದಿಂದ ಸಂಸದರು ನಿರ್ಗಮಿಸಿದ್ದು ಟೀಕೆಗೆ ಕಾರಣವಾಯಿತು.
ರಸ್ತೆ ಅಗಲೀಕರಣ ಹಾಗೂ ಬೈಪಾಸ್ ನಿರ್ಮಾಣದ ಬಗ್ಗೆ ಸಂಸದರಿಂದ ಭರವಸೆಯ ಮಾತು ಕೇಳಲು ಬಂದಿದ್ದ ಜನತೆ ನಿರಾಸೆಯಿಂದ ನಿರ್ಗಮಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯ್ತಿ ಸದಸ್ಯೆ ಮಂಜುಳಾಗವೀರಂಗಯ್ಯ,ತಾಲ್ಲೂಕ್ ಪಂಚಾಯ್ತಿ ಸದಸ್ಯೆ ಬೀಬಿ ಪಾತೀಮಾ,ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್,ಶೇಷಾನಾಯ್ಕ್,ಸೀಮೆ ಎಣ್ಣೆ ಕೃಷ್ಣಯ್ಯ,ಹೆದ್ದಾರಿ ಇಂಜಿನೀಯರ್ ಶಿವಕುಮಾರ್, ಎಪಿಎಂಸಿ ಅಧ್ಯಕ್ಷ ಸಿದ್ದರಾಮಣ್ಣ,ಬಗರ್ ಹುಕುಂ ಕಮಿಟಿ ಅಶೋಕ್,ಗ್ರಾಪಂ ಸದಸ್ಯರಾದ ದಯಾನಂದ್ ,ಗೀತಾಬಾಬು,ಪುಟ್ಟಿಬಾಯಿ,ಸಿದ್ದಗಂಗಮ್ಮ,ಕೆಂಪಮ್ಮ, ಪುಟ್ಟರಾಜು, ಡಾಬಾಸೂರಪ್ಪ,ಗಿರೀಶ್ ,ದನುಷ್ ರಂಗನಾಥ್,ಜಬೀಉಲ್ಲಾ,ಪಿಎಲ್ಡಿ ಬ್ಯಾಂಕ್ ಸದಸ್ಯ ಶಿವಕುಮಾರ್, ಪ್ರಸನ್ನಕುಮಾರ್,ದಬ್ಬಗುಂಟೆ ರವಿಕುಮಾರ್ ಇನ್ನಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ