ಗುರುವಾರದಂದು ನಡೆದ ವಾರದ ಸಂತೆಯಲ್ಲಿ ನಿತ್ಯ ಬಳಕೆಗೆ ಬೇಕಾದ ತರಕಾರಿ,ಸೊಪ್ಪಿನ ಬೆಲೆ ಏರಿಕೆಯಾಗಿರುವುದು ಗ್ರಾಹಕರಿಗೆ ತಲೆ ನೋವಾಗಿದೆ. ಈ ಭಾಗದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾಗಿ ದರ ಹೆಚ್ಚಳಕ್ಕೆ ಕಾರಣವಾಗಿದೆ.ತರಕಾರಿಗಳ ದರ ಕಳೆದೊಂದು ತಿಂಗಳಿನಿಂದ ತುಸು ಹೆಚ್ಚೆಇದ್ದು ಇಂದಿನ ಸಂತೆಯಲ್ಲಿ ಸೊಪ್ಪಿನ ಬೆಲೆ ಕೂಡ ಏರಿಕೆಯಾಗಿದ್ದು ತರಕಾರಿ ಬದಲು ಸೊಪ್ಪು ಕಾಳು ಉಪಯೋಗಿಸಲು ಹೊರಟ ಗ್ರಾಹಕರಿಗೆ ಬೆಲೆ ಏರಿಕೆ ಗಾಬರಿ ಉಂಟುಮಾಡಿದೆ.
ಪ್ರಮುಖವಾಗಿ ದಿನನಿತ್ಯ ಅಗತ್ಯವಾಗಿ ಬಳಸುವ ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು,ಪಾಲಕ್,ದಂಟಿನ ಸೊಪ್ಪು,ಕರಿಬೇವು ಸೇರಿದಂತೆ ಎಲ್ಲಾ ರೀತಿಯ ಸೊಪ್ಪುಗಳ ಬೆಲೆ ಕಳೆದ ವಾರಕ್ಕಿಂತ ಈ ವಾರ ವಿಪರೀತ ಏರಿಕೆಯಾಗಿದೆ.ಹೆಚ್ಚುಕಮ್ಮಿ ಎರಡು ರೂಪಾಯಿಗೆ ಕಂತೆಯೊಂದಕ್ಕೆ ಸಿಗುತ್ತಿದ್ದ ಮೆಂತೆ, ಪಾಲಕ್, ಸಬಸೀಗೆ,ಕೊತ್ತಂಬರಿ ಸೊಪ್ಪು ಐದು ರೂಪಾಯಿಗಿಂತ ಕಡಿಮೆ ಸಿಗದಂತಾಗಿದೆ.ಹತ್ತುರೂಪಾಯಿಗೆ ಎರಡು ಕಂತೆ ಸೊಪ್ಪು ಚೌಕಾಸಿಗೆ ಅವಕಾಶವಿಲ್ಲದಂತೆ ಮಾರುತ್ತಿದ್ದರು.
ಇತ್ತೀಚೆಗೆ ಸುರಿದ ಬಿರುಗಾಳಿ ಸಹಿತ ಮಳೆಗೆ ತರಕಾರಿ, ಸೊಪ್ಪು ಬೆಳೆ ನಾಶವಾಗಿ ಬೇಡಿಕೆಗೆ ತಕ್ಕಂತೆ ಸೊಪ್ಪು ಪೂರೈಕೆಯಾಗದೆ ತರಕಾರಿ ದುಬಾರಿಯಾಗಿದ್ದು ಇದರಿಂದಾಗಿ ತರಕಾರಿ ವ್ಯಾಪಾರಿಗಳು ಹಾಗೂ ಗ್ರಾಹಕರ ಮೇಲೆ ಪರಿಣಾಮ ಬೀರಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ