ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರಿನ ಭಾವನ ರಾಜ್ಯಮಟ್ಟಕ್ಕೆ ಆಯ್ಕೆ

ಹುಳಿಯಾರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ. N.T.ಭಾವನ ದಿ. 27.9.2022 ರಂದು ತುಮಕೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ  ಉದ್ದ ಜಿಗಿತ ಮತ್ತು ತ್ರಿವಿಧ ಜಿಗಿತ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ . ವಿಜೇತ ವಿದ್ಯಾರ್ಥಿನಿಯನ್ನು ಕಾಲೇಜಿನ ಪ್ರಾಂಶುಪಾಲರಾದ ಸಿ.ಬಿ. ಪರಮೇಶ್ವರ ,ಕ್ರೀಡಾ ಕಾರ್ಯದರ್ಶಿ ಟಿ.ಎಂ.ಶಿವಣ್ಣ, ಸಿ.ಜಿ.ಶೈಲಜ ಹಾಗೂ ಉಪನ್ಯಾಸಕರುಗಳು ಅಭಿನಂದಿಸಿದ್ದಾರೆ.

ಸದೃಢ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಹತ್ತರ ಪ್ರಭಾವ ಬೀರುತ್ತದೆ :ಶಶಿಭೂಷಣ್

ಹುಳಿಯಾರು:"ವಿದ್ಯಾರ್ಥಿ ಜೀವನವು ಒಂದು ಸುವರ್ಣ ಕಾಲವಾಗಿದ್ದು  ಈ ಸಮಯದಲ್ಲಿ ದಕ್ಕುವ ಎಲ್ಲ ಅನುಭವಗಳು ಜೀವನವನ್ನೇ ಬದಲಾಯಿಸಬಲ್ಲವು. ಈ ನಿಟ್ಟಿನಲ್ಲಿ ಸದೃಢ ವ್ಯಕ್ತಿತ್ವವನ್ನು ಬೆಳೆಸುವಲ್ಲಿ  ರಾಷ್ಟ್ರೀಯ ಸೇವಾ ಯೋಜನೆ  ಮಹತ್ತರ ಪ್ರಭಾವ  ಬೀರುತ್ತದೆ ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು " ಎಂದು ಹುಳಿಯಾರಿನ  ಸರಕಾರಿ ಪದವಿ  ಪೂರ್ವ ಕಾಲೇಜಿನ ಕನ್ನಡ  ಉಪನ್ಯಾಸಕರು, ಕವಿ  ಶಶಿಭೂಷಣ್  ಅವರು ಹೇಳಿದರು.  ಅವರು ಹುಳಿಯಾರು-ಕೆಂಕೆರೆ ಬಿ.ಎಂ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಒಂದು ಹಾಗೂ ಎರಡು  ಆಯೋಜಿಸಿದ  ರಾಷ್ಟ್ರೀಯ ಎನ್.ಎಸ್.ಎಸ್  ದಿನಾಚರಣೆಯನ್ನು   ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.   ಮುಂದುವರಿದು,ರಾಷ್ಟ್ರೀಯ ಸೇವಾ ಯೋಜನೆಯಿಂದ  ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳಲ್ಲಿ ಭಾಗವಹಿಸುವುದರಿಂದ   ಭ್ರಾತೃತ್ವ, ಸೌಹಾರ್ದತೆ,ದೇಶ ಭಕ್ತಿ ಅಲ್ಲದೆ ಗ್ರಾಮ ಜೀವನದ ಬಗ್ಗೆ ಕಳಕಳಿ, ಕೃಷಿಯ ಬಗ್ಗೆ ಒಲವು, ಸ್ವತಂತ್ರ ಚಿಂತನೆ  ಬೆಳೆಯುತ್ತವೆ. ಅಲ್ಲದೆ ಮುಂದಿನ ಜೀವನಕ್ಕೆ ಅತ್ಯಗತ್ಯವಾದ ಧೈರ್ಯ, ಪ್ರಯತ್ನ ಶೀಲತೆ,ಸಮಸ್ಯೆಗಳನ್ನು ಎದುರಿಸುವ ಮನೋಭಾವ ರೂಢಿಯಾಗುತ್ತದೆ. ವಿದ್ಯಾರ್ಥಿಗಳ ಸಮಗ್ರ ,ಸಾವಯವ ವ್ಯಕ್ತಿತ್ವ ವಿಕಸನಕ್ಕೆ ಎನ್ ಎಸ್ ಎಸ್ ಕೊಡುಗೆ ದೊಡ್ಡದ

(26-09-2022)-ಇಂದಿನ ಪಂಚಾಂಗ-ಸುವಿಚಾರದೊಂದಿಗೆ ನಿತ್ಯ ಪಂಚಾಂಗ-panchagam today

* ದಾರಿದೀಪೋಕ್ತಿ * ☘"ಎಲ್ಲಿಯವರೆಗೆ ಎಲ್ಲವನ್ನೂ ಸಹಿಸಿ ಸುಮ್ಮನಿರುತ್ತವೆಯೇ ಅಲ್ಲಿಯ ತನಕ ನಾವು ಎಲ್ಲರಿಗೂ ಒಳ್ಳೆಯವರಾಗೆ ಇರುತ್ತೇವೆ.ಒಂದು ವೇಳೆ ಅನುಭವಿಸಿದ ಅನ್ಯಾಯವನ್ನು ಬಾಯಿ ಬಿಟ್ಟೆವೋ ಆಗ ಎಲ್ಲರಿಗಿಂತ ನಾವೇ ಹೆಚ್ಚು ಕೆಟ್ಟವರಾಗುತ್ತೇವೆ.!!"🌿 🙏ನಮಸ್ತೆ🍀ಶುಭೋದಯ🍃ಶುಭದಿನ --------------------- *🙏ಶ್ರೀ ಆಂಜನೇಯ ಸ್ವಾಮಿಯೇ ನಮಃ*🙏 --------------------- || ಶ್ರೀ ಗುರುಭ್ಯೋ ನಮಃ || *ಶುಭಮಸ್ತು,ನಿತ್ಯ ಪಂಚಾಂಗ* ಸೋಮವಾರ-ಸೆಪ್ಟೆಂಬರ್-26,2022 ಸಂವತ್ಸರ : ಶ್ರೀ ಶುಭಕೃತ ನಾಮ ಸಂವತ್ಸರ ಆಯನಂ : ದಕ್ಷಿಣಾಯಣ ಋತು : ಶರದ್ ಋತು ಮಾಸ : ಆಶ್ವಯುಜ ಮಾಸ ಪಕ್ಷ : ಶುಕ್ಲ ಪಕ್ಷ ವಾಸರ : ಇಂದುವಾಸರ   ತಿಥಿ: ಪಾಡ್ಯ ಮಂಗಳವಾರ ಬೆ.3:07 ವರೆಗೆ ನಕ್ಷತ್ರ: ಹಸ್ತ ಪೂರ್ಣ ರಾತ್ರಿ ವರೆಗೆ ಯೋಗ: ಶುಕ್ಲ ಬೆ.8:05 ವರೆಗೆ, ನಂತರ ಬ್ರಹ್ಮ ಕರಣ: ಕಿಂಸ್ತುಘ ಮ.3:18 ವರೆಗೆ, ಬವ ಮಂಗಳವಾರ ಬೆ.3:07 ವರೆಗೆ ಅಮೃತಕಾಲ: ಮಂಗಳವಾರ ಬೆ.0:11 ಇಂದ ಮಂಗಳವಾರ ಬೆ. 1:48 ವರೆಗೆ ಅಭಿಜಿತ್ ಮುಹೂರ್ತ: ಬೆ.11:46 ಇಂದ ಮ.12:34 ವರೆಗೆ --------------------- ರಾಹುಕಾಲ : 7.30 am – 9:00 am ಗುಳಿಕಕಾಲ : 1.30 pm – 3:00 pm ಯಮಗಂಡ :10.30 am –12:00 pm --------------------- ಸೂರ್ಯೋದಯ : 06:̇̇09 am ಸೂರ್ಯಾಸ್ತ  : 06:13 pm ಚಂದ್ರೋದಯ :  06:̇̇21 am ಚಂದ್ರಾಸ್ಥ  : 06:̇̇42 pm ----

ಕೆ.ಎಸ್.ಕೆ ಜನಸಂಪರ್ಕ ಕಾರ್ಯಾಲಯದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿ ಆಚರಣೆ

ಭಾರತ ದೇಶ ಕಂಡ ಅದ್ಬುತ ದಾರ್ಶನಿಕರು, ಸಂಘಟನಾ ಚತುರರು, ಪ್ರಖರ ವಾಗ್ಮಿ, ಭಾರತೀಯ ಜನಸಂಘದ ನೇತಾರರಾದ ದಿವಂಗತ ಶ್ರೀ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿಯನ್ನು ಈ ದಿನ ಚಿಕ್ಕನಾಯಕನಹಳ್ಳಿಯ ಕೆ. ಎಸ್.ಕಿರಣ್ ಕುಮಾರ್‌ರವರ ಜನಸಂಪರ್ಕ ಕಾರ್ಯಾಲಯದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೆ.ಎಸ್.ಕಿರಣ್ ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷರಾದ ಎಂ ಎಂ ಜಗದೀಶ್. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಪ್ರಕಾಶ, ಮಾಜಿ ಮಂಡಲ ಅಧ್ಯಕ್ಷರಾದ ಶ್ರೀನಿವಾಸ್ ಮೂರ್ತಿ, ಜಯದೇವಪ್ಪ, ದೇವರಾಜ್ ಗುರುವಾಪುರ, ಶ್ರೀ ಹರ್ಷ ಸಿದ್ದನಕಟ್ಟೆ , ಹನುಮಜಯ, ನಿಶ್ಚಲ್, ಚಿನ್ನಸ್ವಾಮಿ, ವಿವೇಕಾನಂದ, ಗೌತಮ್, ಮನು, ಹನುಮೇಗೌಡ ಮುಂತಾದವರಿದ್ದರು.

ದೇವರಾಜ ಅರಸು ಪತ್ತಿನ ಸಹಕಾರ ಸಂಘ ಲಾಭದಲ್ಲಿದೆ

ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ನೆರವಾಗಿ:ಕೆ.ಎಂ.ರಾಮಯ್ಯ -------------------------------------- ಹುಳಿಯಾರು: ಪಟ್ಟಣದ ದೇವರಾಜು ಅರಸು ಪತ್ತಿನ ಲಾಭದಲ್ಲಿ ಮುನ್ನಡೆಯುತ್ತಿದ್ದು, ಸದಸ್ಯರುಗಳು ಸಂಘದಿಂದ  ಪಡೆದ ಸಾಲವನ್ನು ಮರುಪಾವತಿ ಸಮಯದಲ್ಲಿ ಉದಾಸೀನ ಮಾಡದೆ ಸಕಾಲಕ್ಕೆ ಕಟ್ಟುವ ಮೂಲಕ ಸಹಕಾರ ಸಂಘಗಳ ಅಭಿವೃದ್ಧಿಗೆ ನೆರವಾಗಿ ಎಂದು ಡಿ.ದೇವರಾಜ ಅರಸು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಡಗಿ ರಾಮಣ್ಣ ಹೇಳಿದರು. ಹುಳಿಯಾರಿನ ಬಿಂಧುಮಾಧವ ಕಾಂಪ್ಲೆಕ್ಸ್‌ನಲ್ಲಿರುವ ಡಿ.ದೇವರಾಜ ಅರಸು ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ನಡೆದ ಸಂಘದ 2021-22 ನೇ ಸಾಲಿನ ಸರ್ವಸದ್ಯಸರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಿಂದುಳಿದ ವರ್ಗಗಳ ಸಮುದಾಯದವರ ಅಭಿವೃದ್ಧಿಗಾಗಿ ಪಟ್ಟಣದಲ್ಲಿ ದೇವರಾಜು ಅರಸು ಪತ್ತಿನ ಸಹಕಾರ ಸಂಘ ಸ್ಥಾಪಿಸಲಾಗಿದ್ದು ಹಿಂದುಳಿದ ಸಮುದಾಯದವರಿಗೆ,ಆರ್ಥಿಕವಾಗಿ ನೆರವು ಕಲ್ಪಿಸಲಾಗುತ್ತಿದೆ.ಆದರೆ ಸಂಘದಿಂದ ಪಡೆದ ಸಾಲವನ್ನು ಅನೇಕ ಸದಸ್ಯರುಗಳು  ಮರುಪಾವತಿ ಮಾಡದೆ ಸುಸ್ತಿದಾರರಾಗಿದ್ದು,ಬ್ಯಾಂಕ್ ಲಾಭದಲ್ಲಿದ್ದರೂ ವಸೂಲಾತಿ ಬಾಕಿಯಿದೆ.ಇದು ಹೀಗೇಯೇ ಮುಂದುವರಿದಲ್ಲಿ ಸಂಘ ನಷ್ಟ ಅನುಭವಿಸುತ್ತದೆ ಎಂದರು. ನಂತರ ಕಳೆದ ಸಾಲಿನ ಜಮಾಖರ್ಚು,ಲಾಭ ನಷ್ಟ ಹಾಗೂ ಆಸ್ತಿ ವಿವರ ನೀಡಿ 2021 ಎರಡನೇ ಸಾಲಿಗೆ ಸಂಘವು 9,84,454₹ ನಿವ್ವಳ ಲಾಭಗಳಿಸಿದೆ

ಹುಳಿಯಾರಿನ ಬಿಎಂಎಸ್ ಕಾಲೇಜಿನಲ್ಲಿ "ಬೆನ್ನುಹುರಿ ಅಪಘಾತದ ಪುನಶ್ಚೇತನದ ಕುರಿತು ಅರಿವು” ಕಾರ್ಯಕ್ರಮ

ಹುಳಿಯಾರು, ಕೆಂಕೆರೆಯ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ, “ ಬೆನ್ನುಹುರಿ ಅಪಘಾತದ ಪುನಶ್ಚೇತನದ ಕುರಿತು ಅರಿವು ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ರಾಜ್ಯ ಬೆನ್ನುಹುರಿಯ ಅಪಘಾತದ ಅಂಗವಿಕಲರ ಸಂಘದ ತುಮಕೂರು ಜಿಲ್ಲಾ ಸಂಯೋಜಕರಾದ ಶ್ರೀಮತಿ ಶ್ವೇತಾ ಅವರು ಆಗಮಿಸಿ “ಬೆನ್ನುಹುರಿ ಅಪಘಾತ,  ಅದರ ವಿಧಗಳು, ಲಕ್ಷಣಗಳು ಹಾಗೂ ಅಪಘಾತದ ಚಿಕಿತ್ಸೆಯ ನಂತರ ಅವರ ಅವರನ್ನು ಗುರುತಿಸಿ ಪುನಶ್ಚೇತನ ನೀಡುವ ಕುರಿತು ಮಾಹಿತಿ ನೀಡಿದರು.  ಮುಂದುವರೆದು ಮಾತನಾಡಿದ ಅವರು ಬೆನ್ನುಹುರಿ ಅಪಘಾತದಿಂದಾಗಿ ಅಂಗವಿಕಲರಾದವರ ಸಾಮರ್ಥ್ಯವನ್ನು ಗುರುತಿಸಿ, ಆತ್ಮ ವಿಶ್ವಾಸ ಮೂಡಿಸಿ ತಮ್ಮ ಜೀವನವನ್ನು ಸ್ವಾವಲಂಬಿಗಳವಾಗಿ ನಡೆಸುವಂತೆ ತರಬೇತಿ ನೀಡಿ, ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯುವಂತೆ ಮಾಡುವುದು ಸರ್ಕಾರೇತರ ಸಂಸ್ಥೆಯಾದ ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತದ ಅಂಗವಿಕಲರ ಸಂಘದ ಕಾರ್ಯವಾಗಿದೆ” ಎಂದರು.  ಈ ಸಂಸ್ಥೆಯ ಫಲಾನುಭವಿಗಳಾದ ಲಿಂಗಪ್ಪನ ಪಾಳ್ಯದ ಶ್ರೀ ಕೃಷ್ಣಮೂರ್ತಿ ಅವರು ತಮಗಾದ ಬೆನ್ನುಹುರಿ ಅಪಘಾತ, ಅದರ ನಂತರದ ತರಬೇತಿ ಹಾಗೂ ಇಂದು ಸ್ವಾವಲಂಬಿಯಾಗಿ ಬದುಕುತ್ತಿರುವ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು. ಕಾಲೇಜಿನ ಐಕ್ಯುಎಸಿ ಸಂಚಾಲಕರಾದ ಪ್ರೊ. ಮಂಜುನಾಥ್ ಕೆ.ಎಸ್ . ಅವರು ಮಾತನಾಡಿ ಇಂತಹ ಸಂಸ್ಥೆಗಳು ಸ

ಹುಳಿಯಾರಿನಲ್ಲಿ ವಿಶ್ವಕರ್ಮ ಜಯಂತಿ

ಹುಳಿಯಾರಿನ ವಿಶ್ವಕರ್ಮ ಸಮಾಜದ ಬಂಧುಗಳು ಪಟ್ಟಣದ ಆಚಾರ್ ಬೀದಿಯಲ್ಲಿ ದೇವಶಿಲ್ಪಿ ವಿಶ್ವಕರ್ಮ ಜಯಂತಿ ಆಚರಿಸಿದರು. ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪ ಪೂಜೆ ಸಲ್ಲಿಸಿ,ಸಿಹಿ ಹಾಗೂ ಲಘು ಉಪಹಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರುಗಳು ಹಾಗೂ ಚಿನ್ನ ಬೆಳ್ಳಿ ಕುಶಲಕರ್ಮಿಗಳು ಉಪಸ್ಥಿತರಿದ್ದರು .

ಹುಳಿಯಾರಿನಲ್ಲಿ ಮೋದಿ ಜನ್ಮದಿನದ ಅಂಗವಾಗಿಕೆಂಚಮ್ಮನ ತೋಪಿನಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡ ಬಿಜೆಪಿ ಕಾರ್ಯಕರ್ತರು

ಹುಳಿಯಾರು : ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಆಯೋಜಿಸಲಾಗಿರುವ ಸೇವಾ ಪಾಕ್ಷಿಕದ ಪ್ರಯುಕ್ತ ಹುಳಿಯಾರಿನ ಬಿಜೆಪಿ ಮುಖಂಡರುಗಳು, ಕಾರ್ಯಕರ್ತರು ಮಾಜಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆದ ಕೆ. ಎಸ್. ಕಿರಣ್ ಕುಮಾರ್ ನೇತೃತ್ವದಲ್ಲಿ ಹುಳಿಯಾರಿನ ಕೆರೆ ಏರಿ ಮೇಲಿರುವ ಕೆಂಚಮ್ಮನ ತೋಪಿನ ಆವರಣದ ಸ್ವಚ್ಛತಾ ಕಾರ್ಯ ಕೈಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್.ಕಿರಣ್ ಕುಮಾರ್ ಪ್ರಧಾನಿಗಳ ಸ್ವಚ್ಛ ಭಾರತದ ಆಶಯ ಈಡೇರಿಸುವ ನಿಟ್ಟಿನಲ್ಲಿ ಮುಂದಿನ ಒಂದು ವಾರಗಳ ಕಾಲ ಪಕ್ಷದ ಕಾರ್ಯಕರ್ತರು ತಾಲೂಕಿನ ವಿವಿಧಡೆ ಸೇವಾ ಚಟುವಟಿಕೆಗಳಲ್ಲಿ ತೊಡಗಲಿದ್ದಾರೆ ಎಂದು ತಿಳಿಸಿದರು. ಇದೇ 21ರಂದು ರಕ್ತದಾನ ಶಿಬಿರ ಕೂಡ ನಡೆಯಲಿದೆ ಎಂದರು.ಭಾರತಮಾತೆಯ ಸೇವೆ ಮತ್ತು ಇನ್ನಷ್ಟು ಅಭಿವೃದ್ಧಿ ಕೈಗೊಳ್ಳಲು ಮೋದಿಜಿ ಅವರಿಗೆ ಇನ್ನೂ ಹೆಚ್ಚಿನ  ಆರೋಗ್ಯ ಮತ್ತು ಆಯಸ್ಸು ಕರುಣಿಸಲಿ ಎಂದು ಕೋರಲಾಯಿತು.  ಈ ವೇಳೆ ತಿಮ್ಮರಾಯಪ್ಪ, ರಾಜಣ್ಣ ,ಹನುಮಂತರಾಯಪ್ಪ, ಮಲ್ಲೇಶಣ್ಣ, ಚಿಕ್ಕಣ್ಣ ,ಗುರುವಾಪುರ ದೇವರಾಜು, ಕೆಂಕೆರೆ ದೇವರಾಜು, ಶ್ರೀ ಹರ್ಷ, ಹನುಮ ಜಯ, ಚಿನ್ನಸ್ವಾಮಿ, ರಾಘವೇಂದ್ರ ,ನಿಶ್ಚಲ್, ಹನುಮೇಗೌಡ ಮೊದಲಾದವರಿದ್ದರು.

ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟದ ಸದಸ್ಯರ ಕಾರ್ಯಾಗಾರ ಯಶಸ್ವಿ

ಹುಳಿಯಾರು : ತಾಲೂಕು ಪಂಚಾಯಿತಿ ಚಿಕ್ಕನಾಯಕನಹಳ್ಳಿ ಹಾಗೂ ಗ್ರಾಮ ಪಂಚಾಯಿತಿ ಯಳನಾಡು ಇವರ ಸಂಯುಕ್ತಾಶ್ರಯದಲ್ಲಿ ಹುಳಿಯಾರು ಹೋಬಳಿಯ ಯಳನಾಡುವಿನಲ್ಲಿ  ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟದ ಸದಸ್ಯರಿಗೆ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು . ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಯಳನಡು ಶಾಖೆಯ ಮೆನೇಜರ್  ರಕ್ಷಿತ್ ಸಂಘಗಳನ್ನು ಉದ್ದೇಶಿಸಿ ಮಾತನಾಡಿ ಸ್ವಸಹಾಯ ಸಂಘಗಳು ಬ್ಯಾಂಕಿನಿಂದ ಆರ್ಥಿಕ ಸಹಾಯವನ್ನು ಪಡೆದು ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಸಮಾಜ ಪರಿವರ್ತನೆಯಲ್ಲಿ ಬಹಳ ಮುಂದೆ ಸಾಗಿದ್ದಾರೆ ಎಂದರು.  ಯಳನಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಗೀತಾರವರು ಸಂಘಗಳನ್ನು ಉದ್ದೇಶಿಸಿ ಮಾತನಾಡುತ್ತ ನಮ್ಮ ಪಂಚಾಯಿತಿಯು ಸಂಘಗಳಿಗೋಸ್ಕರ ಎಲ್ಲಾ ರೀತಿಯಲ್ಲೂ ಸಹಕಾರ ಕೊಡುವದಾಗಿ ತಿಳಿಸಿದರು. ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯಿತಿ   ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಕನ್ಯಾಕುಮಾರಿ ಮಾತನಾಡಿ ಸಂಘಗಳಿಗೆ ಎಲ್ಲಾ ರೀತಿಯ ಸಹಕಾರ ಸೌಲಭ್ಯಗಳನ್ನು ಒದಗಿಸಲು ನಾವು ಸದಾಕಾಲ ನಿಮ್ಮ ಜೊತೆಯಲ್ಲಿ ಇರುತ್ತೇವೆ ಎಂದು ನುಡಿದರು.  ತಾಲ್ಲೂಕು ಪಂಚಾಯತಿಯ ಆರ್ಥಿಕ ಸೇರ್ಪಡೆ ವಿಭಾಗದ ಎನ್ ಆರ್ ಎಲ್ ಎಂ ವಿಭಾಗದ ಶಿವಶಂಕರ್ ಮಾತನಾಡಿ ಸಂಘಗಳು ಒಕ್ಕೂಟದ ಸಹಕಾರದಿಂದ ಆರ್ಥಿಕವಾಗಿ ಸಬಲರಾಗುವಂತೆ ತಿಳಿಸಿದರು.  ಇನ್ನೋರ್ವ ಅತಿಥಿಯಾ

ಚಿಕ್ಕನಾಯಕನಹಳ್ಳಿ ತಾಲೂಕಿನ ಹೇಮಾವತಿ ಯೋಜನೆ ಕಿರಣ್ ಕುಮಾರ್ ಅವರ ಕಲ್ಪನೆಯ ಕೂಸು: ಸುರೇಶ್ ಗೌಡ

ಚಿಕ್ಕನಾಯಕನಹಳ್ಳಿ ತಾಲೂಕಿನ ಹೇಮಾವತಿ ಯೋಜನೆ ಕಿರಣ್ ಕುಮಾರ್ ಅವರ ಕಲ್ಪನೆಯ ಕೂಸು: ಸುರೇಶ್ ಗೌಡ ------------------- ಹುಳಿಯಾರಿನಲ್ಲಿ ಕಿರಣ್ ಕುಮಾರ್ ಅಭಿಮಾನಿ ಬಳಗದಿಂದ ಕೆಎಸ್‌ಕೆ ಜನ್ಮದಿನದ ಅಂಗವಾಗಿ ಧಾರ್ಮಿಕ ಸಮಾರಂಭ,ಬೈಕ್‌ ರ‍್ಯಾಲಿ --------------------------- ಹುಳಿಯಾರು: ಸಾಕಷ್ಟು ಟೀಕೆಗಳ ನಡುವೆಯೂ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ಯೋಜನೆಯು ಸಾಕಾರಗೊಳ್ಳಲು ಮಾಜಿ ಶಾಸಕ ಕಿರಣ್ ಕುಮಾರ್ ಕಾರಣರಾಗಿದ್ದು, ಅವರ ಕಲ್ಪನೆಯ ಕೂಸಾದ ಹೇಮಾವತಿಯಿಂದ ಜಿಲ್ಲೆಯ ಶೇಕಡ 50ರಷ್ಟು ಕೆರೆಗಳು ತುಂಬಲಿದ್ದು,ಸಂಕಷ್ಟಕ್ಕೆ ಈಡಾಗಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿಸಲು ಕಾರಣವಾಗಿದೆ ಎಂದು ತುಮಕೂರು ಗ್ರಾಮಾಂತರದ ಮಾಜಿ ಶಾಸಕ ಸುರೇಶ್ ಗೌಡ ತಿಳಿಸಿದರು. ಹುಳಿಯಾರಿನಲ್ಲಿ ಕೆ.ಎಸ್.ಕಿರಣ್ ಕುಮಾರ್ ಅಭಿಮಾನಿ ಬಳಗದಿಂದ ಮಾಜಿ ಶಾಸಕರು ಹಾಗೂ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಕೆ.ಎಸ್.ಕಿರಣ್ ಕುಮಾರ್ ಅವರ 59ನೇ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ತಾಲೂಕಿಗೆ ಹೇಮಾವತಿ ನೀರು ಹರಿಸಲು ಕಿರಣ್ ಕುಮಾರ್ ಹೋರಾಟಗಾರರೊಂದಿಗೆ ಕೈಜೋಡಿಸಿ ಮಂಜೂರಾತಿ ದೊರಕಿಸಿಕೊಳ್ಳಲು ಕಾರಣರಾದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಜಿಎಸ್ ಬಸವರಾಜು ಅವರ ಪರಿಶ್ರಮ ಹಾಗೂ ಕಿರಣ್ ಕುಮಾರ್ ಅ